ಕಂದಾಯ ವೃತ್ತಗಳಲ್ಲಿ ಗ್ರಾಮಲೆಕ್ಕಿಗರ ಹಾಜರಿ ಕಡ್ಡಾಯ : ತಹಶೀಲ್ದಾರ್ ವೈ.ಎಂ.ರೇಣುಕುಮಾರ್
ತುರುವೇಕೆರೆ : ತಾಲೂಕಿನ ವ್ಯಾಪ್ತಿಯ ಕಂದಾಯ ವೃತ್ತದ ಕಚೇರಿಯಲ್ಲಿ ಗ್ರಾಮಲೆಕ್ಕಿಗರುಗಳು ನಿತ್ಯವೂ ಹಾಜರಿದ್ದು ಸಾರ್ವಜನಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು.
ತಾಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ನೂತನ ಗ್ರಾಮಲೆಕ್ಕಾಧಿಕಾರಿಗಳವರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಗಾಡಿನ ರೈತರುಗಳಿಗೆ ಆಯಾ ಕಂದಾಯ ವೃತ್ತಗಳಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಲಭ್ಯವಾಗಲೆಂಬ ದೃಷ್ಟಿಯಿಂದ ತಾಲೂಕಿನ ಎಲ್ಲಾ ಕಂದಾಯ ವೃತ್ತಗಳಲ್ಲಿ ನೂತನ ಕಚೇರಿಗಳನ್ನು ತೆರೆಯಲಾಗುತ್ತಿದೆ. ಕಂದಾಯ ವೃತ್ತದ ಕೇಂದ್ರ ಸ್ಥಾನದ ಕಚೇರಿಯಲ್ಲಿ 10 ಗಂಟೆಯಿAದ 11 ಗಂಟೆಯವರೆಗೂ ಗ್ರಾಮಲೆಕ್ಕಿಗರ ಹಾಜರಾತಿ ಕಡ್ಡಾಯ. 11 ಗಂಟೆಯ ನಂತರ ಕಂದಾಯ ವೃತ್ತದ ವ್ಯಾಫ್ತಿಯ ಗ್ರಾಮಗಳಿಗೆ ಬೇಟಿ ನೀಡಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು.
ತಾಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ 12 ಕಂದಾಯ ವೃತ್ತಗಳಲ್ಲಿ ನೂತನ ಕಚೇರಿಗಳು ಉದ್ಗಾಟನೆಗೊಂಡು ಕಾರ್ಯನಿರ್ವಹಿಸುತ್ತಿವೆ. ದಂಡಿನಶಿವರ ಹೋಬಳಿ ವ್ಯಾಪ್ತಿಯ 12 ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿ ಕಚೇರಿ ಪ್ರಾರಂಭಿಸಲಾಗುವುದು, ಮಾಯಸಂದ್ರ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಕಂಧಾಯ ವೃತ್ತಗಳಲ್ಲಿಯೂ ಶೀಘ್ರ ಕಚೇರಿಗಳನ್ನು ತೆರೆಯಲಾಗುವುದು. ಗ್ರಾಮ ಲೆಕ್ಕಿಗರು ಆಯಾ ವೃತ್ತದಲ್ಲಿಯೇ ಕಾರ್ಯನಿರ್ವಹಿಸುವುದು, ನಿಯಮ ಉಲ್ಲಂಘಿಸಿದವರ ವಿರುದ್ದ ಕೆ.ಸಿ.ಎಸ್.ಆರ್, ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಖಡಲ್ ಎಚ್ಚರಿಕೆ ನೀಡಿದರು.
ಕಲ್ಕೆರೆ ಗ್ರಾಮದ ಮೃತ್ಯುಂಜಯ ಮಾತನಾಡಿ ಸಾರ್ವಜನಿಕರು ಕಂದಾಯ ಇಲಾಖಾ ಕೆಲಸ ಕಾರ್ಯಗಳಿಗಾಗಿ ಗ್ರಾಮಲೆಕ್ಕಿಗರನ್ನು ಹುಡುಕಿಕೊಂಡು ತಾಲೂಕು ಕೇಂದ್ರಕ್ಕೆ ಅಲೆದಾಡಬೇಕಿತ್ತು. ಕಂದಾಯ ವೃತ್ತಗಳಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಯನ್ನು ತೆರೆಯುತ್ತಿರುವ ತಾಲೂಕು ದಂಡಾದಿಕಾರಿಗಳ ಕಾರ್ಯಕ್ಕೆ ತಾಲೂಕಿನ ರೈತಾಪಿಗಳ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ತಾಳಕೆರೆ ಗ್ರಾ.ಪಂ. ಅಧ್ಯಕ್ಷೆ ನಾಗರತ್ನನಂಜಪ್ಪ,ದಂಡಿನಶಿವರ ಆರ್.ಐ. ಗಂಗಾಧರ್, ಗ್ರಾಮಲೆಕ್ಕಿಗರಾದ ಬೀರಪ್ಪಹೋರೆ, ಪ್ರಕಾಶ್, ಶಬ್ಬೀರ್, ಸೇರಿದಂತೆ ಅನೇಕ ರೈತರುಗಳು ಇದ್ದರು.