ತುಮಕೂರುದೇಶರಾಜಕೀಯರಾಜ್ಯ

ಭಾರತ್ ಜೋಡೋ ಯಾತ್ರೆ : ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ಗಾಂಧಿ ಪಾದಯಾತ್ರೆ ಯಶಸ್ವಿಯಾಗಲು ಸರ್ವಧರ್ಮ ಪ್ರಾರ್ಥನೆ

ತುಮಕೂರು : ಎಐಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲೆಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಸದ್ಭಾವನಾ ಸಭೆ ಮತ್ತು ಸರ್ವಧರ್ಮ ಪ್ರಾರ್ಥನೆಯನ್ನು ಹಮ್ಜಿಕೊಳ್ಳಲಾಗಿತ್ತು.
ರಾಹುಲ್‌ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3570 ಕಿ.ಮಿ.ದೂರದ 12 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗುವ ಭಾರತ ಜೋಡೋ ಯಾತ್ರೆಗೆ ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಹುತಾತ್ಮರಾದ ಶ್ರೀಪೆರಂಬೂರಿನಿಂದ ಆರಂಭಗೊಂಡಿದ್ದು,ಇದರ ಯಶಸ್ವಿಗಾಗಿ ಹಿಂದೂ ಧರ್ಮದ ಪರವಾಗಿ ಭದರಿನಾಥ ಧೀಕ್ಷಿತ್, ಇಸ್ಲಾಂ ಧರ್ಮದ ಪರವಾಗಿ ಮೌಲ್ವಿಗಳಾಆದ ನಯಾಜ್,ಕ್ರೆöÊಸ್ತ ಧರ್ಮದ ಪರವಾಗಿ ಪಾಧರ್ ರಜನೀಶ್ ಪ್ರಕಾಶ್ ಅವರುಗಳು ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಐತಿಹಾಸಿಕ ದಿನ. ಭವಿಷ್ಯದ ಪ್ರಧಾನಿ ಎಂದು ಬಿಂಬಿತವಾಗಿರುವ ರಾಹುಲ್‌ಗಾಂಧಿಯವರು ಈ ದೇಶದ ಜನರಿಗಾಗಿ, ಅವರ ಮೇಲಾಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳ ಖಂಡಿಸಿ,ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಭಾರತ್ ಜೋಡೋ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.ತುಮಕೂರು ಜಿಲ್ಲೆಯಲ್ಲಿ ಬರುವ ಆಕ್ಟೋಬರ್ 09 ರಿಂದ 12ರವರಗೆ ಈ ಯಾತ್ರ ಹಾದು ಹೋಗಲಿದೆ. ಈ ನಾಲ್ಕು ದಿನಗಳ ಕಾಲ ಜಿಲ್ಲೆಯ ಯಾರಾರು ಭಾಗವಹಿಸಬೇಕು ಎಂಬುದನ್ನು ಕೆ.ಪಿಸಿಸಿ ಅಧ್ಯಕ್ಷರು ಈಗಾಗಲೇ ತಿಳಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಜನರು ದಿನವಹಿ ಭಾಗವಹಿಸಿ, ಒಂದು ಒಳ್ಳೆಯ ಉದ್ದೇಶಕ್ಕಾಗಿ ನಡೆಯುತ್ತಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ,ರಾಷ್ಟçದಲ್ಲಿ ನಡೆಯುತ್ತಿರುವ ಕೋಮು ಗಲಭೆ, ಧರ್ಮಗಳ ನಡುವಿನ ಸಂಘರ್ಷದ ನಡುವೆ ದೇಶದ ಐಕ್ಯತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಈ ಯಾತ್ರೆ ಬಹಳ ಮಹತ್ವ ಪಡೆದುಕೊಳ್ಳಲಿದೆ. ಗುಂಡ್ಲುಪೇಟೆ ಮೂಲಕ ಜಿಲ್ಲೆಗೆ ಆಗಮಿಸುವ ಯಾತ್ರೆಯನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸೋಣ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ,ಕಾಂಗ್ರೆಸ್ ಪಕ್ಷವನ್ನು ಉತ್ತೇಜಿಸುವ ಸಲುವಾಗಿ, ಬಿಜೆಪಿಯಿಂದ ಈ ದೇಶದ ಜನರ ಮೇಲಿನ ಆಗಿರುವ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ,ಬಡವರಿಗೆ ಸಂವಿಧಾನದ ಅಡಿಯಲ್ಲಿ ಎಲ್ಲ ಹಕ್ಕುಗಳನ್ನು ನೀಡುವ ಸಲುವಾಗಿ ಈ ಭಾರತ ಜೋಡೋ ಯಾತ್ರೆ ಮಹತ್ವದ್ದಾಗಿದೆ. ನಾವೆಲ್ಲರೂ ಕುಟುಂಬ ಸಮೇತ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಸಲಹೆ ನೀಡಿದರು.
ಮತೋರ್ವ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ,ಇಂದು ಆರಂಭಗೊಂಡಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 21 ದಿನಗಳ ಕಾಲ 511 ಕಿ.ಮಿ.ಚಲಿಸಲಿದೆ.ಪ್ರತಿದಿನ ಮಧ್ಯಾಹ್ನ ಊಟದ ನಂತರ ಸಾರ್ವಜನಿಕ ಸಮಾರಂಭಗಳು ನಡೆಯಲಿದ್ದು,ಈ ವೇಳೆ ಆಯಾಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಲಿವೆ. ತಾವೆಲ್ಲರೂ ಹೆಚ್ಚು ಜನರನ್ನು ಈ ಯಾತ್ರೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಕಾಂಗ್ರೆಸ್ ಮುಖಂಡರ ನಿರಂತರ ಹೋರಾಟದ ಫಲವಾಗಿ ಬಂದ ಸ್ವಾತಂತ್ರವನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಭಾರತ ಜೋಡೋ ಯಾತ್ರೆಯ ಮೂಲಕ ದೇಶದಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ.ದೇಶದಲ್ಲಿರುವ ಪ್ರಕ್ಷುಬ್ದ ವಾತಾವರಣವನ್ನು ತಿಳಿಗೊಳಿಸಿ, ದೇಶದ ಜನರಿಗೆ ನೆಮ್ಮದಿ ಮತ್ತು ಶಾಂತಿಯ ಜೀವನ ಕಲ್ಪಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆಯಲ್ಲಿ ನಾವೆಲ್ಲರೂ ತನು, ಮನ. ಧನವನ್ನು ವಿನಿಯೋಗಿಸಿ,ನಮಗೆ ವಹಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಹೊನ್ನಗಿರಿಗೌಡ,ಪಾಲಿಕೆ ಸದಸ್ಯರಾದ ಮಹೇಶ್, ನಯಾಜ್, ದೀಪಶ್ರೀ, ಪ್ರಭಾವತಿ, ನೂರೂನ್ನೀಸಾ,ನಾಜೀರಾಭಾನು,ವಿರೋಧಪಕ್ಷದ ನಾಯಕ ಜೆ.ಕುಮಾರ್,ಹೆಚ್.ಸಿ.ಹನುಮಂತಯ್ಯ,ಪುಟ್ಟರಾಜು,ಸುಜಾತ, ಸಂಜೀವ್ ಕುಮಾರ್, ನಟರಾಜಶೆಟ್ಟಿ,ವಿವಿಧ ಬ್ಲಾಕ್ ಮತ್ತು ಮಂಜೂಣಿ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker