ಕೊಳಾಲ ಡೈರಿ ಅಧ್ಯಕ್ಷರಾಗಿ ರಘು ಹಾಗೂ ಉಪಾದ್ಯಕ್ಷರಾಗಿ ಉಮಾದೇವಿ ಆಯ್ಕೆ
ತುರುವೇಕೆರೆ : ತಾಲೂಕಿನ ಕೊಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆರ್.ರಘು ಉಪಾಧ್ಯಕ್ಷರಾಗಿ ಉಮಾದೇವಿ ಅವಿರೋಧವಾಗಿ ಆಯ್ಕೆಯಾದರು.
ಕೊಳಾಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಈ ಹಿಂಧೆ ಆದ್ಯಕ್ಷರಾಗಿದ್ದ ಕೆ.ಎಂ.ಚೇತನ್ ಹಾಗೂ ಉಪಾಧ್ಯಕ್ಷರಾಗಿದ್ದ ಜಯಶೀಲಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 10 ಮಂದಿ ನಿರ್ದೇಶಕ ಬಲವುಳ್ಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆರ್. ರಘು ಹಗೂ ಉಪಾದ್ಯಕ್ಷ ಸ್ಥಾನಕ್ಕೆ ಉಮಾದೇವಿ ಹೊರೆತು ಪಡಿಸಿ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸಲ್ಲಿಲ್ಲ, ಅಂತಿಮವಾಗಿ ಕಣದಲ್ಲಿ ಉಳಿದ ಆರ್. ರಘು ಅವರು ಅಧ್ಯಕ್ಷರಾಗಿ ಉಮಾದೇವಿ ಉಪಾದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಸಹಕಾರಿ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಆರ್. ರಘು ಮಾತನಾಡಿ ಸಂಘದ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರನ್ನು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಮರ್ಪಿಸುತ್ತೇನೆ. ಸಂಘವನ್ನು ನಿರ್ದೇಶಕರುಗಳ ಹಾಗೂ ಹಿರಿಯರ ಸಲಹೆ ಸಹಕಾರದೊಂದಿಗೆ ಮತ್ತಷ್ಟು ಅಭಿವೃದ್ದಿಪಡಿಸಲು ಶ್ರಮಿಸುತ್ತೇನೆ ಎಂದರು.
ನೂತನ ಅದ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಗ್ರಾಮದ ಮುಖಂಡ ಕೊಳಾಲನಾಗರಾಜ್, ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ತಾ.ಪಂ. ಮಾಜಿ ಆದ್ಯಕ್ಷರುಗಳಾದ ಕೆ.ಆರ್. ಮಹೇಶ್, ಗಂಗಾಧರ್, ಗ್ರಾ.ಪಂ. ಸದಸ್ಯ ರಾಜೇಗೌಡ, ನಿರ್ದೇಶಕರುಗಳಾದ ರೆಣುಕುಮಾರ್,ಶಂಕರಲಿಂಗೇಗೌಡ,ರಾಮಕೃಷ್ಣ,ಯಶ್ವಂತ್,ರೇಣುಕಮ್ಮ, ಮತ್ತಿತರರು ಅಭಿನಂದಿಸಿ ಶುಭ ಕೋರಿದರು.