ಪಾವಗಡ

ಶಿಕ್ಷಣದಿಂದ ನಾಗರೀಕ ಸಮಾಜದ ಸೃಷ್ಠಿ : ಜಪಾನಂದ ಸ್ವಾಮೀಜಿ

ಪಾವಗಡ : ಶಿಕ್ಷಣದ ಮೂಲಕ ಉತ್ತಮ ನಾಗರೀಕ ಸಮಾಜ ಹಾಗೂ ಭವ್ಯ ಭಾರತ ದೇಶ ರೂಪಿಸುವಲ್ಲಿ ಗುರುವಿನ ಪಾತ್ರ ಪ್ರಮುಖವಾಗಿದೆ ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಎಸ್.ಎಸ್.ಕೆ ರಂಗ ಮಂದಿರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಡಾ.ಸರ್ವಪಲ್ಲಿ ರಾಧಕೃಷ್ಣನ್ ರವರ 135ನೇ ಜಯಂತಿ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪಾವಗಡ ತಾಲೂಕಿನಂತಹ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಲವು ಸಮಸ್ಯೆಗಳು ಮತ್ತು ಮೂಲಭೂತ ಸೌಕರ್ಯಗಳಿಲ್ಲದ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಕೇವಲ ಭೋದನೆ ಮಾಡುವುದೇ ಶಿಕ್ಷಣವಲ್ಲ, ಬದಲಿಗೆ ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಉತ್ತಮ ವ್ಯಕ್ತಿತ್ವ, ರಾಷ್ಟç ಪ್ರೇಮ, ದೇಶ ಭಕ್ತಿ, ನಾಗರೀಕತೆ ಹಾಗೂ ಗುರಿ ತಲುಪಲು ಬೇಕಾದ ಛಲ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ ಎಂದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ, ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ, ಮಕ್ಕಳಲ್ಲಿ ಉತ್ತಮ ಭವಿಷ್ಯ ರೂಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ, ತಾಲೂಕಿನ ಕೆ.ರಾಂಪುರ ಸರ್ಕರಿ ಶಾಲೆಯಲ್ಲಿ ನೀಡುತ್ತಿರುವ ಶಿಕ್ಷಣದಿಂದಾಗಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಗುರ್ತಿಸಿಕೊಂಡಿದೆ. ಗ್ರಾಮದ ಜನರ ಸಹಕಾರದಿಂದಾಗಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ  ಈಗಲೂ ಯಾರೊಬ್ಬರೂ ಖಾಸಗಿ ಶಾಲೆಗೆ ಹೋಗೋದಿಲ್ಲ ಎಂದು ಶ್ಲಾಘಿಸಿದರು.
ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಕಟ್ಟಡಗಳ ಮಾಹಿತಿ ಪಡೆದು ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಸೋಲಾರ್ ಸಿ.ಎಸ್.ಆರ್ ನಿಧಿಯಲ್ಲಿ ತಾಲೂಕಿನ 250 ಶಾಲೆಗಳಿಗೆ ಪ್ಯಾನ್ ಮತ್ತು ಲೈಟ್ ಅಳವಡಿಸಲಾಗಿದೆ ಕುಡಿಯುವ ನೀರು, ಶೌಚಾಲಯಗಳಂತಹ ಮೂಲಭುತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯಾಗಿ ಹೊಸ ಪ್ರತಿಭೆಗಳು ಹೊರ ಬಂದರೆ ಮತ್ತಷ್ಟು ಅಭಿವೃದ್ದಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣದ ಗುರುಭವನದಿಂದ ಎಸ್.ಎಸ್.ಕೆ ಸಮುದಾಯ ಭವನದ ವರೆಗೂ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಭಾವ ಚಿತ್ರ ಮೆರೆವಣಿಗೆ ಮಾಡಲಾಯಿತು.
ಉಪ ನಿರ್ದೇಶಕ ಕೆ.ಜಿ.ರಂಗಯ್ಯ, ಉಪನ್ಯಾಸಕ ಗೋವಿಂದರಾಜು ಮಾತನಾಡಿದರು.
ಇದೇ ವೇಳೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು, ನಿವೃತ್ತ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲ ವೈ.ಎನ್ ರಾಮಕೃಷ್ಣಯ್ಯ, ತಾ.ಪಂ ಇಒ ಶಿವರಾಜಯ್ಯ, ಬಿಇಒ ಅಶ್ವಥನಾರಾಯಣ, ಸಮಾಜ ಸೇವಕ ನೇರಳೆಕುಂಟೆ ನಾಗೆಂದ್ರ ಕುಮಾರ್, ಡಿವೈಪಿಸಿ ಪುಷ್ಪವಲ್ಲಿ, ಸಿ ಎ ನರೇಂದ್ರ ಕುಮಾರ್, ಕಟ್ಟಾ ನರಸಿಂಹಮೂರ್ತಿ, ವೆಂಕಟರಂಗಾರೆಡ್ಡಿ, ಜಯರಾಮ್, ಚೌಡಪ್ಪ, ನರಸಿಂಹಮೂರ್ತಿ, ನಾರಾಯಣಪ್ಪ, ಮಂಜುನಾಥ್ ಶಂಕರಪ್ಪ ಸೇರಿದಂತೆ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker