ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 25 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ : ಶಾಸಕ ಮಸಾಲಜಯರಾಮ್
ತುರುವೇಕೆರೆ : ತಾಲೂಕಿನ ಶೆಟ್ಟಿಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ ಸುಮಾರು 25 ಕೋಟಿ ರೂ ಅನುದಾನ ವಿನಿಯೋಗಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಶೆಟ್ಟಿಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಹಿಂದೆ ಶೆಟ್ಟಿಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳು ಅಭಿವೃದ್ದಿ ಸ್ಪರ್ಶದಿಂದ ವಂಚಿತವಾಗಿದ್ದವು. ಕ್ಷೇತ್ರದ ಗಡಿ ಭಾಗದಲ್ಲಿರುವ ಗ್ರಾಮಗಳನ್ನು ಅಭಿವೃದ್ದಿ ಪಡಿಸಬೇಕೆಂಬ ಸಂಕಲ್ಪದೊಂದಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅಂಕಿತ ಹಾಕಿರುವುದು ತೃಪ್ತಿ ತಂದಿದೆ ಎಂದರು.
ಶೆಟ್ಟಿಗೊಂಡನಹಳ್ಳಿ ವ್ಯಾಫ್ತಿಯ ತೂಯಲಹಳ್ಳಿಯಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ,ತುಯಾಲಹಳ್ಳಿ ಪಾಳ್ಯದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ,, ಜಿ.ದೊಡ್ಡೇರಿಯಲ್ಲಿ 20 ಲಕ್ಷ ರೂ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ,,ಮಗ್ಗದಪಾಳ್ಯದಲ್ಲಿ 10 ಲಕ್ಷ ರೂ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ,,ಇಟ್ಟಿಗೆಹಳ್ಳಿಯಲ್ಲಿ 20 ಲಕ್ಷ ರೂ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣಕಾಮಗಾರಿ,,ಚನ್ನಿಗಯ್ಯನ ಪಾಳ್ಯ 35 ಲಕ್ಷ ರೂ ವೆಚ್ಚದಲ್ಲಿ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿ, ಜಿ.ದೊಡ್ಡೇರಿ ಮತ್ತು ದೊಡ್ಡೇರಿ ಹಟ್ಟಿ ನಡುವೆ 35 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ,, ಸಿದ್ದನಹಟ್ಟಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಸಿ.,ಸಿ.ರಸ್ತೆ ನಿರ್ಮಾಣ, ಚಟ್ಟನಹಳ್ಳಿಯಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ಯರದಹಳ್ಳಿಯಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ,ಬಾನಿಪಾಳ್ಯದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ಮಲ್ಲದೇವನಹಟ್ಟಿಯಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ಹರಳಕೆರೆಯಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಳನೆ ನೀಡಿರುವುದಾಗಿ ಮಾಹಿತಿ ನೀಡಿದರು.
ನಾನು ಶಾಸಕನಾದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಈ ಹಿಂದೆ ತಾಂಡವಾಡುತ್ತಿದ್ದ ಜಲಕ್ಷಾಮ ಇಲ್ಲವಾಗಿದೆ. ಶೆಟ್ಟಿಗೊಂಡನಹಳ್ಳಿಯಲ್ಲಿ ಸುಮಾರು 16 ಕೋಟಿ ರೂ ವೆಚ್ಚದಲ್ಲಿ ಪವರ್ ಸ್ಟೇಷನ್ ಸ್ಥಾಪಿಸಲು ಚಾಲನೆ ನೀಡುವ ಮೂಲಕ ಶೆಟ್ಟಿಗೊಂಡನಹಳ್ಳಿ ಭಾಗದ ರೈತಾಪಿಗಳ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗುವುದು, ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡುವುದಾಗಿ ಶಾಸಕ ಮಸಾಲಜಯರಾಮ್ ಭರವಸೆ ನೀಡಿದರು.
ತಾಲೂಕಿನ ವ್ಯಾಪ್ತಿಯಲ್ಲಿರುವ ಸುಮಾರು 72 ಗೊಲ್ಲರಹಟ್ಟಿಯ ವ್ಯಾಫ್ತಿಯ ಜನತೆಗೆ ವಸತಿ ಕಲ್ಪಿಸಲು ಸುಮಾರು 1200 ಮನೆಗಳನ್ನು ಮಂಜೂರಾತಿ ಮಾಡಿಲಾಗಿದೆ. ವಸತಿ ನಿರ್ಮಾಣ ಮಾಡುವ ಫಲಾನುಭವಿಗಳು ಇದ್ದರೇ ಅಂತಹವರಿಗೂ ವಸತಿ ಕಲ್ಪಿಸಲಾಗುವುದು. ಶೇಟ್ಟಿಗೊಂಡನಹಳ್ಳಿ ವ್ಯಾಪ್ತಿಯ ಸಿದ್ದನಹಟ್ಟಿಯ 26 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪ್ರತಿ ವಿತರಿಸಲಾಗಿದೆ. ಒಟ್ಟಾರೇ ಕ್ಷೇತ್ರ ವ್ಯಾಪ್ತಿಯ ಗೊಲ್ಲರಹಟ್ಟಿಗಳನ್ನು ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ರೂಪಿಸಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಶೇಟ್ಟಿಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನಾನಾ ಕಾಮಗಾರಿಗಳಿಗೆ ಚಾಳನೆ ನೀಡಲು ಆಗಮಿಸಿದ ಶಾಸಕ ಮಸಾಲಜಯರಾಮ್ ಅವರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ ದೊರಕಿತು. ಸೀಗೆಹಳ್ಳಿ ಗ್ರಾಮದಲ್ಲಿ ತೆರೆದ ಕಾರಿನಲ್ಲಿ ಆಗಮಿಸಿದ ಶಾಸಕರಿಗೆ ಅಭಿಮಾನಿಗಳು ಹೂ ಮಳೆಗರೆದು ಅಭಿಮಾನ ಮೆರೆದರು. ನಾಸಿಕ್ ಡೋಲ್ ವಾದನಕ್ಕೆ ಕುಣಿದು ಕುಪ್ಪಳಿಸಿದ ಯುವಕರು, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಶೆಟ್ಟಿಗೊಂಡನಹಳ್ಳಿ ಗ್ರಾ.ಪಂ. ಆದ್ಯಕ್ಷ ಗಂಗಣ್ಣ, ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸ್, ಎ.ಪಿ.ಎಂ.ಸಿ.ಸದಸ್ಯ ಕಾಂತರಾಜ್, ಹರಿಪ್ರಸಾದ್, ರಾಮಲಿಂಗೇಗೌಡ, ತಮ್ಮಣ್ಣಿ, ನಾಗರಾಜ್,ಮಾಯಸಂದ್ರ ಹೋಬಳಿ ಬಿ.ಜೆ.ಪಿ.ಘಟಕದ ಅಧ್ಯಕ್ಷ ಯಶೋಧರ, ಚಂದ್ರಶೆಟ್ಟಿ, ಹೊಣಕೆರೆ ಸೋಮಣ್ಣ ಹಾಜರಿದ್ದರು.