ಕುಣಿಗಲ್
ಹದಿಮೂರು ವರ್ಷಗಳ ನಂತರ ಮಂಗಳ ಜಲಾಶಯ ಕೋಡಿ
ಕುಣಿಗಲ್ : ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಹದಿಮೂರು ವರ್ಷಗಳ ಬಳಿಕ ಮಂಗಳ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿ ಬಂದಿದೆ.
ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮಂಗಳಾ ಡ್ಯಾಂ, ಮಾರ್ಕೋನಹಳ್ಳಿ, ಜಲಾಶಯ ಕುಣಿಗಲ್ ದೊಡ್ಡಕೆರೆ, ಕೊತ್ತಗೆರೆ ಕೆರೆ ಗಳು ಭರ್ತಿಯಾಗಿದ್ದು ಇನ್ನುಳಿದಂತೆ ತಾಲೂಕಿನ ಹಲವು ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ.
ಹಲವು ದಿನಗಳಿಂದ ನಿರಂತರವಾಗಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ 4500 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಮಹಬಲೇಶ್ವರ ತಿಳಿಸಿದ್ದಾರೆ
ಮಾರ್ಕೋನಹಳ್ಳಿ ಜಲಾಶಯ ಈ ಸಾಲಿನಲ್ಲಿ ಎರಡನೇ ಬಾರಿ ಕೋಡಿ ಬೀಳುತ್ತಿದೆ ಇದು ರೈತರ ಅದೃಷ್ಟವೇ ಸರಿ. ಏಕೆಂದರೆ ಈಗಾಗಲೇ ಶಾಸಕ ರಂಗನಾಥ್ ಮಾರ್ಕೋನಹಳ್ಳಿ ಜಲಾಶಯದ ಹಿಂಭಾಗದ ರೈತರು ಭತ್ತದ ಬೆಳೆ ಬೆಳೆಯಲು ನೀರು ಹರಿಸಿದರು ಮಳೆ ಬಾರದೆ ಜಲಾಶಯ ಮತ್ತೊಮ್ಮೆ ತುಂಬಿಕೊಳ್ಳದಿದ್ದರೆ ಭತ್ತದ ಬೆಳೆ ಬೆಳೆಯಲು ನೀರಿನ ಅಭಾವ ಉಂಟಾಗಬಹುದು ಆದ್ದರಿಂದ ರೈತರು ನನ್ನನ್ನು ಸುಖಾಸುಮ್ಮನೆ ದೂರಬೇಡಿ ಎಂದಿದ್ದನ್ನು ಸ್ಮರಿಸಬಹುದು. ಆದರೆ ದೈವ ಕೃಪೆಯಿಂದ ಮಾರ್ಕೋನಹಳ್ಳಿ ಜಲಾಶಯ 2 ನೆ ಬಾರಿ ತುಂಬಿದೆ ಹಾಗೂ ಮಂಗಳ ಜಲಾಶಯ ತುಂಬಿ ತುಳುಕುತ್ತಿವೆ.ಇದರಿಂದ ರೈತರು ತುಂಬ ಖುಷಿಯಾಗಿದ್ದಾರೆ
ಜಲಾಶಯಗಳು ಭರ್ತಿಯಾದ ಕಾರಣ ಸ್ವಯಂ ಚಾಲಿತ ಸೈಪೋನ್ ತೆರೆದು ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಹೋಗುತ್ತದೆ. ಹಾಗಾಗಿ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯ ಬಾರದು, ಜನ ಜಾನುವಾರಗಳನ್ನು ನಾಲೆ ಬಳಿ ಬಿಡಬಾರದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಜನ ಜಾಗೃತಿ ಮೂಡಿಸಲು ಹೇಮಾವತಿ ಇಲಾಖೆಯ ಅಧಿಕಾರಿಗಳಿಗೆ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾ.ಪಂ ಪಿಡಿಓ ಹಾಗೂ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವರದಿ : ರೇಣುಕಪ್ರಸಾದ್