ಎಡೆಬಿಡದೇ ಸುರಿದ ಮಳೆಗೆ ಕುಸಿದ ಮನೆಯ ಗೋಡೆ, ಸೂಳೆಕೆರೆ ಬಳಿ ಸೇತುವೆ ಕುಸಿದು ಕಮರಿಗೆಬಿದ್ದ ಲಾರಿ
ತುರುವೇಕೆರೆ : ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಕಸಬಾ ಹೋಬಳಿ ವ್ಯಾಪ್ತಿಯ ಪಿ.ಕಲ್ಲಹಳ್ಳಿ ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿದಿದ್ದು, ಸೂಳೆಕೆರೆ ಬಳಿ ಸೇತುವೆ ಕುಸಿದು ಲಾರಿ ಕಮರಿಗೆ ಉರುಳಿಬಿದ್ದಿದ್ದು ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.
ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ನಾಲೈದು ದಿನಗಳಿಂದ ವಿರಾಮ ನೀಡಿದ್ದ ಮಳೆ ಬುಧವಾರ ರಾತ್ರಿ ಎಡೆಬಿಡದೇ ಸುರಿಯಿತು.ಈ ವೇಳೆ ಬೆಂಗಳೂರಿನಿಂದ ದಬ್ಬೇಘಟ್ಟ ಕಡೆಗೆ ಚಿಪ್ಪು ತುಂಬಿಕೊಂಡು ಸಾಗುತ್ತಿದ್ದ ಲಾರಿ ಮಾರ್ಗಮಧ್ಯೆ ಸೂಳೆಕೆರೆ ಬಳಿ ಸೇತುವೆ ಕುಸಿದ ಪರಿಣಾಮ ಕಮರಿಗೆ ಉರುಳಿಬಿದ್ದಿದೆ. ಲಾರಿಯ ಒಳಗೆ ಸಿಲುಕಿದ್ದ ಚಾಲಕನನ್ನು ದಬ್ಬೇಘಟ್ಟ ಕಡೆಗೆ ಸಾಗುತ್ತಿದ್ದ ದಾರಿಹೋಕರು ರಕ್ಷಣೆ ಮಾಡಿದ್ದಾರೆ. ಲಾರಿ ಉರುಳಿಬಿದ್ದ ಪರಿಣಾಮ ದಬ್ಬೇಘಟ್ಟದ ಮಾರ್ಗದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಮರ್ಪಕ ರಸ್ತೆ ನಿರ್ಮಾಣ ಮಾಡದ ಲೋಕೋಪಯೋಗಿ ಇಲಾಖಾ ಎಂಜಿನಿಯರ್‌ಗಳ ನಿರ್ಲಕ್ಷö್ಯವೇ ಅವಘಡ ಕ್ಕೆ ಕಾರಣವಾಗಿದೆ.ಎಂದು ಆರೋಪಿಸಿರುವ ಸ್ಥಳೀಯರು ಅರೆಮಲ್ಲೇನಹಳ್ಳಿ ಮಾರ್ಗವಾಗಿ ಸೂಳೆಕೆರೆ ಸಂಪರ್ಕಿಸುವ ಬದಲಿ ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.
ಗೋಡೆ ಕುಸಿತ :-ತಾಲೂಕಿನ ವ್ಯಾಪ್ತಿಯ ಪಿ.ಕಲ್ಲಹಳ್ಳಿ ಗ್ರಾಮದ ರಾಜಣ್ಣ ಎಂಬುವರಿಗೆ ಸೇರಿದ ವಾಸದ ಮನೆಯ ಗೋಡೆ ಮಳೆಯಿಂದ ತೋಯ್ದು ಕುಸಿದುಬಿದ್ದಿದೆ. ಮನೆಯ ಗೋಡೆ ಹೊರ ಆವರಣಕ್ಕೆ ಬಿದ್ದ ಹಿನ್ನಲೆಯಲ್ಲಿ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದರೆಂದು ಕಂದಾಯ ನೀರೀಕ್ಷಕ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ತಾಲೂಕಿನ 5 ಮಳೆ ಮಾಪನ ಕೇಂದ್ರದಲ್ಲಿ ಸರಾಸರಿ 51.64 ಮಿ.ಮೀ. ಮಳೆಯ ಪ್ರಮಾಣ ದಾಖಲಾಗಿದೆ. ಕಸಬಾ 63.0,ಮಿ.ಮೀ, ದಂಡಿನಶಿವರ 65.3 ಮಿ.ಮೀ.ಮಾಯಸಚಿಧ್ರ45.6 ಮಿ.ಮೀ.ದಬ್ಬೇಘಟ್ಟ 22.6 ಮಿ.ಮೀ. ಸಂಪಿಗೆ62.0 ಮಿ.ಮೀ. ಮಳೆ ಬಿದ್ದಿದೆ ಎಂದು ತಾಲೂಕು ಕಂದಾಯ ಇಲಾಖೆ ಮಾಹಿತಿ ನೀಡಿದೆ.