ಶಿರಾ
ಸೇತುವೆಗೆ ಡಿಕ್ಕಿ ಹೊಡೆದ ಕೆ.ಎಸ್.ಆರ್.ಟಿ.ಸಿ. ಬಸ್ : ತಪ್ಪಿದ ಭಾರಿ ಅನಾಹುತ
ಶಿರಾ : ನಗರದಿಂದ ಪಟ್ಟನಾಯಕನಹಳ್ಳಿ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಶಿರಾ ನಗರದ ಕಲ್ಲುಕೋಟೆ ಬಳಿ ಆಕ್ಸೆಲ್ ಬ್ಲೇಡ್ ಕಟ್ಟಾಗಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ವಲ್ಪದರಲ್ಲಿ ಭಾರಿ ದುರಂತದ ಅನಾಹುತ ತಪ್ಪಿದೆ.
ಬಸ್ ಸ್ವಲ್ಪ ಮುಂದೆ ಸಾಗಿದ್ದರೆ. ಸುಮಾರು 20 ಅಡಿ ಆಳದ ಸೇತುವೆಯಿಂದ ಕೆಳಗೆ ಬೀಳುತ್ತಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸೇತುವೆಗೆ ಡಿಕ್ಕಿ ಹೊಡೆದು ಹಾಗೆ ನಿಂತಿದೆ. ಆದ್ದರಿಂದ ಭಾರಿ ಅನಾಹುತ ತಪ್ಪಿದೆ. ಗಾಯಾಳುಗಳನ್ನ ಶಿರಾ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಿರಾ ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ವಿನೋದ್ ಅಮ್ಮನಗಿ, ತಾಂತ್ರಿಕ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.