ಅಂತರ್ಜಾಲ ಬಳಸುವಾಗ ಎಚ್ಚರಿಕೆವಹಿಸಿ : ಸಂಪಾದಕ ಜಿ.ಎನ್.ಮೋಹನ್
“ಅಂತರ್ಜಾಲದ ಸುರಕ್ಷಿತ ಬಳಕೆ” ಕುರಿತು ಕಾರ್ಯಾಗಾರ

ತುಮಕೂರು : ಅಂತರ್ಜಾಲದಲ್ಲಿ ಮಾಹಿತಿ ಕಸದ ರಾಶಿ ಇದ್ದಂತೆ. ಅಂತರ್ಜಾಲವನ್ನು ಉಪಯೋಗಿಸುವಾಗ ಬೇಕು ಬೇಡವನ್ನು ತಿಳಿದುಕೊಂಡು ಸುರಕ್ಷತೆಯಿಂದ ಬಳಸಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಅವಧಿ ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಜಿ.ಎನ್.ಮೋಹನ್ ಕರೆ ನೀಡಿದರು.
ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಕರ್ನಾಟಕ ಲೇಖಕಿಯರ ಸಂಘ (ರಿ), ತುಮಕೂರು ಜಿಲ್ಲಾ ಶಾಖೆ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಅವಧಿ ಅಂತರ್ಜಾಲ ಪತ್ರಿಕೆ ಸಹಯೋಗದಲ್ಲಿ ಇಂದು ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ “ಅಂತರ್ಜಾಲದ ಸುರಕ್ಷಿತ ಬಳಕೆ” ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಿದ್ಧಾರ್ಥ ಸಂಪದ ಪ್ರಾಯೋಗಿಕ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇತ್ತಿಚೀನ ದಿನಗಳಲ್ಲಿ ಇಂಟರನೆಟ್ ಸಂಬಂಧಿತ ವಿಷಯಗಳನ್ನು ಎಲ್ಲರೊಡನೆ ಹಂಚಿಕೊಳ್ಳಬೇಡಿ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಿ.ಎನ್.ಮೋಹನ್ ಅವರು ಎಚ್ಚರಿಸಿದರು.
ಪರ್ತಕರ್ತೆ ಶ್ರೀಮತಿ ಶಾಂತಲಾಧರ್ಮರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತರ್ಜಾಲ ಯುಗದಲ್ಲಿ ನೀವು ಎಷ್ಟು ನಿರ್ಲಕ್ಷ್ಯದಿಂದ ಇರುತ್ತಿರೋ ಅಷ್ಟು ಮೋಸ ಹೋಗುತ್ತಿರಿ. ಈ ಡಿಜಿಟಲೀಕರಣ ಯುಗದಲ್ಲಿ ಅಂತರ್ಜಾಲ ಉಪಯೋಗಿಸುವಾಗ ಎಚ್ಚರದಿಂದಿರಿ. ಹಣಕಾಸಿನ ವ್ಯವಹಾರವನ್ನು ಯಾರೋಂದಿಗೂ ಹಂಚಿಕೊಳ್ಳಬೇಡಿ, ಆದಷ್ಷು ಸುರಕ್ಷಿತ ಅಪ್ಲಿಕೇಶನ್‌ಗಳನ್ನು ಬಳಸಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಮ್.ಎಸ್.ರವಿಪ್ರಕಾಶ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಇಂಟರ್‌ನೆಟ್ ಬಳಕೆಯಿಂದ ಐಟಿ ಸೇಕ್ಟರ್‌ಗಳು ಮುನ್ನಡೆಯಲ್ಲಿವೆ. ವಿದ್ಯಾರ್ಥಿಗಳು ಇಂಟರ್‌ನೆಟ್‌ನ್ನು ಹೆಚ್ಚಾಗಿ ಒಳ್ಳೇಯ ರೀತಿಯಲ್ಲಿ ಬಳಸಿ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಂತರ ನಡೆದ ಗೋಷ್ಠಿ – 1 ರಲ್ಲಿ ಅಂತರ್ಜಾಲದ ಬಳಕೆ ಸಾಧ್ಯತೆ ಸವಾಲು ಮತ್ತು ಸುರಕ್ಷತೆ ವಿಷಯದ ಕುರಿತು ಅವಧಿ ನಿಯತಕಾಲಿಕೆ ಹಾಗೂ ಬಹುರೂಪಿ ಸಂಪಾದಕರಾದ ಶ್ರೀಜಾ.ವಿ.ಎನ್ ಮಾತನಾಡಿ, ಅಂತರ್‌ಜಾಲವನ್ನು ನಾವು ಉಪಯೋಗಿಸಬೇಕು ಹೊರತಾಗಿ ಅದು ನಮ್ಮನ್ನು ಉಪಯೋಗಿಸಬಾರದು. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಸಾಮರ್ಥ್ಯ ನಮಗಿರಬೇಕು. ಇಂದಿನ ದಿನಮಾಣಗಳಲ್ಲಿ ಇಂಟರ್‌ನೆಟ್‌ನಿಂದ ಆದಾಯ ಗಳಿಸಬಹುದಾಗಿದೆ. ಬ್ಯಾಂಕ್ ವ್ಯವಹಾರ ಮತ್ತೀತರ ಬಿಲ್‌ಗಳನ್ನು ಇಂಟರ್‌ನೆಟ್ ಮೂಲಕ ಸುಲಭವಾಗಿ ಪಾವತಿಸಬುದಾಗಿದೆ ಆದರೆ ಇದರಿಂದಾಗುವ ಅನಾನುಕೂಲದ ಕಡೆಗೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.
ಮಧ್ಯಾಹ್ನ ನಡೆದ ಗೋಷ್ಠಿ – 2ರಲ್ಲಿ ಅಂತರ್ಜಾಲದಲ್ಲಿ ಸುರಕ್ಷಿತವಾಗಿ ಹಣಕಾಸಿನ ವ್ಯಾಪಾರ ಮತ್ತು ವ್ಯವಹಾರ ವಿಷಯದ ಕುರಿತು ತಾಂತ್ರಿಕ ಬರವಣಿಗಾರ ಹಾಗೂ ಲೇಖಕರಾದ ಮಧುಸೂದನ ವೈ.ಎನ್ ರವರು ಮಾತನಾಡಿ, ಬ್ಯಾಂಕಿಂಗ್ ವ್ಯವಹಾರ, ಆನ್ಲೆöÊನ್ ಶಾಪಿಂಗ್, ಡಿಜಿಟಲ್ ಪಾವತಿ, ಮೊಬೈಲ್ ಪೋನ್‌ಗಳ ಸುರಕ್ಷತೆ ಕ್ರಮಗಳ ಕುರಿತು ಮಾಹಿತಿ ತಿಳಿಸಿದರು.
ಎಸ್‌ಎಸ್‌ಸಿಎಂಎಸ್ ಸಹಾಯಕ ಆಡಳಿತಾಧಿಕಾರಿಯಾದ ಖಲಂದರ್ ಪಾಷಾ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಲೇಖಕಿಯರ ಸಂಘದ ಕಾರ್ಯದರ್ಶಿ ಡಾ.ಅರುಂಧತಿ, ಸಿದ್ದಾರ್ಥ ಪದವಿ ಕಾಲೇಜು, ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಲೇಖಕಿಯರ ಸಂಘದ ಸದಸ್ಯರು ಭಾಗವಹಿಸಿದ್ದರು.