ಶಿರಾ

ಶಿರಾ ನಗರಸಭೆ ಇಂಜಿನಿಯರ್ ಮಂಜುನಾಥ್ ವರ್ಗಾವಣೆಗೆ ಆಗ್ರಹಿಸಿ ನಗರಸಭಾ ಸದಸ್ಯರ ಧರಣಿ

ಶಿರಾ : ನಗರಸಭೆ ಚುನಾವಣೆಯಾದ 7 ತಿಂಗಳಿಂದ 31 ವಾರ್ಡುಗಳಲ್ಲೂ ಯಾವುದು ಕೆಲಸವಾಗಿಲ್ಲ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೂ ತಂದರು. ಯಾವುದೇ ಕಾರ್ಯವಾಗಿಲ್ಲ. ಪೌರಯುಕ್ತರ ಗಮನಕ್ಕೆ ತಂದರೂ ಕೆಲಸವಾಗಿಲ್ಲ. ಹಾಗೂ ನಗರಸಭೆಯ ಇಂಜಿನಿಯರ್ ಮಂಜುನಾಥ್ ಅವರು ಸದಸ್ಯರಿಗೆ ಅಗೌರವಾಗಿ ನಡೆದುಕೊಳ್ಳುತ್ತಿದ್ದಾರೆ ಇವರನ್ನು ವರ್ಗಾವಣೆ ಮಾಡಬೇಕೆಂದು ನಗರಸಭಾ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಹೇಳಿದ್ದರು ವರ್ಗಾವಣೆ ಮಾಡಿಲ್ಲ ಎಂದು ನಗರಸಭೆ ಸದಸ್ಯ ಅಜಯ್‌ಕುಮಾರ್ ಆರೋಪಿಸಿದರು.

ನಗರಸಭಾ ಕಚೇರಿ ಮುಂಭಾಗ ಗುರುವಾರ ನಡೆದ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಕಾಂಗ್ರೆಸ್ ಪಕ್ಷದ 17 ಜನ ಸದಸ್ಯರನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಅಧಿಕಾರ ನಡೆಸುತ್ತಿದ್ದಾರೆ. ಯಾವುದೇ ವಾರ್ಡುಗಳ ಅಭಿವೃದ್ಧಿಗೆ ಯಾವುದೇ ರೀತಿಯ ಅನುದಾನ ನೀಡುತ್ತಿಲ್ಲ. ಎಸ್‌ಎಫ್‌ಸಿ 4 ಕೋಟಿ ರೂ. ಅನುದಾನ ಬಂದಿದ್ದು, ಯಾವುದೇ ವಾರ್ಡಿಗೆ ಹಣ ಕೊಟ್ಟಿಲ್ಲ. ಕಳೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಎಲ್ಲಾ ವಾರ್ಡುಗಳಿಗೂ ಸಮಾನವಾಗಿ ಅನುದಾನ ನೀಡಿ ಎಂದು ಸಭೆಯಲ್ಲಿ ಹೇಳಿದ್ದೆವು. ಆದರೂ ಯಾವುದೇ ಅನುದಾನ ನೀಡಿಲ್ಲ. ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ನಗರಸಭೆ ಅಧ್ಯಕ್ಷರು ಪೌರಾಯುಕ್ತರಿಗೆ ಸೂಚನೆ ಕೊಡಬೇಕು. ನಗರದ 31 ವಾರ್ಡುಗಳ ಸದಸ್ಯರನ್ನು ಒಂದೇ ರೀತಿಯಲ್ಲಿ ಕಾಣಬೇಕು. ಇದನ್ನು ದಿಕ್ಕರಿಸಿ ಅಲಕ್ಷ್ಯ ಮಾಡಿದ್ದಾರೆ. ಇಂದು ಸಾಂಕೇತಿಕವಾಗಿ ಧರಣಿ ಮಾಡುತ್ತಿದ್ದೇವೆ. ಮುಂದೆ ಜಿಲ್ಲಾಧಿಕಾರಿಗಳು ಬರುವವರೆಗೂ, ಶಾಸಕರು ಬರುವವೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ನಗರಸಭೆ ಸದಸ್ಯ ಲಕ್ಷ್ಮೀಕಾಂತ್ ಮಾತನಾಡಿ ನಗರಸಭೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು 19 ವರ್ಷಗಳಿಂದ ಒಬ್ಬರಿಗೇ ಗುತ್ತಿಗೆ ನೀಡಿದ್ದಾರೆ. ಇಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಗುತ್ತಿಗೆ ರದ್ದು ಮಾಡುವಂತೆ ನಗರಸಭಾ ಸದಸ್ಯರೆಲ್ಲಾ ಒತ್ತಾಯ ಮಾಡಿದ್ದೆವು. ಅದರಂತೆ ಅವರಿಗೆ ನೋಟಿಸ್ ನೀಡಿ ಸ್ಥಗಿತಗೊಳಸಿ, ಮತ್ತೆ ಎರಡೇ ದಿನದಲ್ಲಿ ಅವರೇ ನಿರ್ವಹಣೆ ಮಾಡುತ್ತಿದ್ದು. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪೂಜಾ ಪೆದ್ದರಾಜು, ತೇಜಸ್ವಿನಿ ಭಾನುಪ್ರಕಾಶ್, ಶಿವಶಂಕರ್, ರಫೀವುಲ್ಲಾ, ಮಹಮ್ಮದ್ ಜಾಫರ್, ಜಿಶಾನ್, ಮಹಮೂದ್ ಬುರಾನ್, ಫಯಾಜ್ ಖಾನ್, ಪೂಜಾ ಪೆದ್ದರಾಜು, ಸಾನಿಯಾ ಖಾದರ್, ಇರ್ಷಾದ್ ಉನ್ನಿಸಾ ಮಜಾ ರುಲ್ಲಾ ಖಾನ್, ಸಮ್ರಿನ್ ನಸ್ರುಲ್ಲಾ ಖಾನ್, ಮರ್ಜಿಯ ಮಾಬು ಪಾಷಾ ಇರ್ಷಾದ್ ಚಾಂದ್ ಪಾಷಾ ರುಕಯ್ಯಾ ಅಬ್ದುಲ್ಲಾ ಖಾನ್ ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker