ಎಸ್.ಆರ್.ಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಸಾಧಕರಿಗೆ ಸನ್ಮಾನ
ಶಿರಾ : ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಜುಲೈ 20 ರಂದು ಪೌರಕಾರ್ಮಿಕರಿಗೆ, ಹಮಾಲರಿಗೆ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಮುಖಂಡರಾದ ಲಿಂಗದಹಳ್ಳಿ ಸುಧಾಕರ ಗೌಡ ಹೇಳಿದರು.
ಅವರು ನಗರದ ನಂದಿನಿ ಶೀಥಲ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಶಿರಾ ತಾಲ್ಲೂಕಿನ ಯುವಕರ ಕಣ್ಮಣಿಯಾದ ಎಸ್.ಆರ್.ಗೌಡ ಅವರು ತಾಲ್ಲೂಕಿನಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದ್ದಾರೆ. ಹೈನುಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ತಾಲ್ಲೂಕಿನ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಜುಲೈ 20 ರಂದು ಬೆಳಗ್ಗೆ 11 ಗಂಟೆಗೆ ನಂದಿನಿ ಕ್ಷೀರ ಭವನದ ಬಳಿ ಆಗಮಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ನರೇಂದ್ರ, ಮಾಜಿ ನಗರಸಭಾ ಸದಸ್ಯ ನಟರಾಜು, ಶಿರಾ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಈರಣ್ಣ, ಮುಖಂಡರಾದ ಕೊಟ್ಟ ಶ್ರೀನಿವಾಸ ಗೌಡ, ಅಜ್ಜಣ್ಣ, ಕಿರಣ್ ಗೌಡ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವಿ.ಎಸ್.ಚಲಪತಿ, ಬಿಜೆಪಿ ಮಹಿಳಾ ಘಟಕದ ಲಲಿತಮ್ಮ, ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು.