ಕುಣಿಗಲ್

ಸರ್ಕಾರಿ ಹಾಲಿನ ಡೈರಿಗಳಲ್ಲಿ ಸಿಸಿಟಿವಿ ಅಳವಡಿಸಲು ಸಿಡಿಒ ಹಾಗೂ ಎ ಆರ್ ಸಿ ಎಸ್ ಅಧಿಕಾರಿಗಳಿಗೆ ಶಾಸಕ ಡಾ.ರಂಗನಾಥ್ ತಾಕೀತು

ಕುಣಿಗಲ್ : ತಾಲ್ಲೂಕಿನ  ಸರ್ಕಾರಿ  ಹಾಲಿನ ಡೈರಿಗಳಲ್ಲಿ ರೈತರಿಗೆ ಎಲ್ಲ ಹಂತಗಳಲ್ಲಿಯೂ ಮೋಸ ನಡೆಯುತ್ತಿದೆ ಆದ್ದರಿಂದ  ಸರ್ಕಾರಿ ಹಾಲಿನ  ಕೇಂದ್ರಗಳಲ್ಲಿ  ಸಿಸಿಟಿವಿ ಅಳವಡಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಚಂದ್ರಶೇಖರ್ ಅವರಿಗೆ ಶಾಸಕ ಡಾ.ರಂಗನಾಥ್ ತಾಕೀತು ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ತಾಲ್ಲೂಕಿನಲ್ಲಿ ಸರ್ಕಾರ ಡೈರಿಗಳನ್ನು ತೆರೆದಿರುವುದು ಬಡ ರೈತರ ಉಪಯೋಗಕ್ಕೆ ಅದನ್ನು ಬಿಟ್ಟು ಅದನ್ನು ನಡೆಸುವವರೇ ಹಣಗಳಿಕೆಯಲ್ಲಿ ಮುಂದಾಗಿದ್ದಾರೆ ತಾಲ್ಲೂಕಿನ 145 ಸರ್ಕಾರಿ  ಹಾಲಿನ ಡೈರಿಗಳಲ್ಲಿ ಹಾಲನ್ನು ಹಾಕುವಂತಹ   ಪ್ರತಿ ರೈತರಿಗೆ ವರ್ಷಕ್ಕೆ ಇಪ್ಪತ್ತೈದು ಸಾವಿರ ರೂ ಗಳಂತೆ ನಷ್ಟವಾಗುತ್ತಿದೆ  ಇದನ್ನು ಲೆಕ್ಕ ಹಾಕಿದರೆ ಡೈರಿಗಳಿಗೆ  ಹಾಲನ್ನು ಹಾಕುವಂತಹ ತಾಲ್ಲೂಕಿನ ಸಾವಿರರೂ ರೈತರಿಗೆ ಸುಮಾರು ವರ್ಷಕ್ಕೆ 4 ಕೋಟಿ ರೂ ಗಳ  ಅನ್ಯಾಯವಾಗುತ್ತಿದೆ ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಈ ಸಂಬಂಧ ಸಂಬಂಧಪಟ್ಟ ಸಚಿವರಲ್ಲಿ ಮಾತನಾಡುತ್ತೇನೆ ತಾಲ್ಲೂಕಿನ ಸರ್ಕಾರಿ ಹಾಲಿನ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಸಭೆಯಲ್ಲಿದ್ದ ಸಿಡಿಒ ಹಾಗೂ ಎ ಆರ್ ಸಿ ಎಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಾಲಿನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದರಿಂದ ಆಗುವಂತಹ  ಅನ್ಯಾಯ ತಪ್ಪಿಸಬಹುದು ಎಂದ ಅವರು  ಹಾಲಿನ ಕೇಂದ್ರಗಳಿಗೆ ಹಾಲನ್ನು  ಹಾಕುವ ರೈತರಿಗೆ ಅನ್ಯಾಯ ಮಾಡಿದರೆ ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು. ಸರ್ಕಾರಿ ಹಾಲಿನ  ಕೇಂದ್ರಗಳಿಗೆ ಚುನಾವಣೆ ನಡೆಯುವ ಮುಂದಿನ ನಲವತ್ತೈದು ದಿನಗಳ ಮುಂಚೆ ಸಿ,ಡಿ,ಒ, ರವರು  ಹಾಲಿನ ಕೇಂದ್ರಗಳಲ್ಲಿ ಹಾಗೂ ತಮ್ಮ ಕಚೇರಿಯ ನೋಟಿಸ್ ಬೋರ್ಡ್ ಗಳಲ್ಲಿ ಪ್ರಚಾರ ನೀಡಬೇಕೆಂದು ತಾಕೀತು ಮಾಡಿದರು. ಸಭೆಯಲ್ಲಿ ಅತಿ ಹೆಚ್ಚಾಗಿ ಸರ್ಕಾರಿ ಹಾಲಿನ ಕೇಂದ್ರಗಳ ಬಗ್ಗೆ ಗಂಭೀರವಾದ  ಚರ್ಚೆ ನಡೆಯಿತು. ನಂತರ  ಜಲ ಜೀವನ್, ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನ , ಸಿಸಿ ರಸ್ತೆ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ,  ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು   ಸಂಬಂಧಪಟ್ಟಂತೆ  ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ  ತುಮಕೂರು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಅತೀಕ್ ಪಾಷಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಜೋಸೆಫ್, ಹಾಗೂ ಪಿಡಿಒ ಇತರೆ ಅಧಿಕಾರಿಗಳೊಂದಿಗೆ  ಹತ್ತು ಹಲವಾರು ಗಂಭೀರವಾದ ಚರ್ಚೆಯನ್ನು ಶಾಸಕರು ನಡೆಸಿ ಕೆಲವು ಸೂಕ್ತವಾದ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ಇದಲ್ಲದೆ ಪಿಡಿಒ ಸೇರಿದಂತೆ ಪ್ರತಿಯೊಂದು ಇಲಾಖೆಗಳ   ಅಧಿಕಾರಿಗಳು ಜನರಲ್ಲಿ ಕರೋನ ಹರಡದಂತೆ ತಡೆಯುವ ಉದ್ದೇಶದಿಂದ ನೂತನ ಟಿ,ಎಚ್, ಒ, ರವರಿಗೆ ಕರೋನ ಲಸಿಕೆ ಬೂಸ್ಟರ್ ಡೋಸ್  ಹಾಕುವ ಸಂಬಂಧ ಸಂಪೂರ್ಣ ಸಹಕಾರ ನೀಡುವಂತೆ ಶಾಸಕರು ಕಟ್ಟುನಿಟ್ಟಾಗಿ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹಾಬಲೇಶ್, ತಾಲ್ಲೂಕು ಮಟ್ಟದ ಸರ್ಕಾರಿ ಇಲಾಖೆಗಳ ಅಧಿಕಾರಿಗಳು,  ಪಿಡಿಒಗಳು,ನರೇಗಾ ಎಂಜಿನಿಯರ್ಗಳು  ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker