ತುರುವೇಕೆರೆ : ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತಕ್ಕೆ ಜಾಗ ಪರಿಶೀಲಿಸಿದ ಪಟ್ಟಣ ಪಂಚಾಯತ್ ಅಧ್ಯಕ್ಷೆ ಆಶಾರಾಜಶೇಖರ್ ಹಾಗೂ ಸದಸ್ಯರು
ತುರುವೇಕೆರೆ : ಪಟ್ಟಣದ ವಾಣಿಜ್ಯ ಮಳಿಗೆ ಆಸುಪಾಸಿನ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವ ಸಲುವಾಗಿ ಪ.ಪಂ. ಅಧ್ಯಕ್ಷೆ ಆಶಾರಾಜಶೇಖರ್ ಹಾಗೂ ಸಹ ಸದಸ್ಯರುಗಳು ಸಂತೇ ಮೈದಾನ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಪಟ್ಟಣದ ವಾಣಿಜ್ಯಮಳಿಗೆ ಸಂಕೀರ್ಣ ಕಾರ್ಯ ಅಂತಿಮ ಹಂತ ತಲುಪಿದೆ. ವಾಣಿಜ್ಯ ಮಳಿಗೆ ಆಸುಪಾಸಿನಲ್ಲಿರುವ ಬೀದಿಬದಿ ವ್ಯಾಪಾರಿಗಳು ವಾಣಿಜ್ಯ ಮಳಿಗೆ ಉದ್ಘಾಟನೆಗೊಂಡ ನಂತರ ಜಾಗ ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸುವುದು ಸಹ ಪಟ್ಟಣ ಪಂಚಾಯಿತಿಗೆ ಸವಾಲು ಎದುರಾಗಿದೆ. ಬೀದಿಬದಿ ವ್ಯಾಪಾರಿಗಳ ಹಿತ ಕಾಯುವ ನಿಟ್ಟಿನಲ್ಲಿ ಸೂಕ್ತ ಜಾಗ ನಿಗದಿಪಡಿಸಲು ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಸಹ ಸದಸ್ಯರುಗಳು ಆಸಕ್ತಿ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಾದಿಕಾರಿಗಳು , ಅದ್ಯಕ್ಷರು, ಸದಸ್ಯರುಗಳು ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾದಿಕಾರಗಳೊಂದಿಗೆ ಸಂತೆ ಮೈದಾನ ಪ್ರದೇಶವನ್ನು ಪರಿಶೀಲಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಲಕ್ಷ್ಮಣ್‌ನಾಯಕ್ ವಾಣಿಜ್ಯಮಳಿಗೆ ಆಸುಪಾಸಿನ ಬೀದಿಬದಿ ವ್ಯಾಪಾರಿಗಳಿಗೆ ಸಂತೇಮೈದಾನದ ಬಳಿ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲು ಪ್ರಯತ್ನ ಸಾಗಿದೆ. ಶಾಸಕ ಮಸಾಲಜಯರಾಮ್, ಪ.ಪಂ. ಅದ್ಯಕ್ಷರು ಹಾಗೂ ಸದಸ್ಯರ ಸಲಹೆಯಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಹೂವು ಮತ್ತು ಹಣ್ಣಿನ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿ ಹಿತ ಕಾಯಲಾಗುವುದು ಎಂದರು.
ಪ.ಪಂ. ಅಧ್ಯಕ್ಷೆ ಆಶಾರಾಜಶೇಖರ್, ಉಪಾದ್ಯಕ್ಷ ಶೀಲಾಶಿವಪ್ಪನಾಯ್ಕ, ಸದಸ್ಯರುಗಳಾದ ಎನ್.ಆರ್.ಸುರೇಶ್, ಪ್ರಭಾಕರ್, ಸ್ವಪ್ನನಟೇಶ್, ಮಧು, ಚಿದಾನಂದ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಪಟ್ಟಣ ಪಂಚಾಯತ್ ಸಿಬ್ಬಂದಿ ಸೇರಿದಂತೆ ಅನೇಕರಿದ್ದರು.