ತುಮಕೂರು ನಗರ
ಸಿದ್ದೇಶ್ವರ ಮೆಸ್ ಶಂಕರಮೂರ್ತಿ ನಿಧನ
ತುಮಕೂರು : ನಗರದಲ್ಲಿ ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲ ಮೆಸ್ ನಡೆಸಿ ಖ್ಯಾತರಾಗಿದ್ದ ಸೋಮೇಶ್ವರಪುರಂ ನಿವಾಸಿ ಸಿದ್ದೇಶ್ವರ ಊಟದ ಮನೆಯ ಶಂಕರಮೂರ್ತಿ (ಶಂಕರಪ್ಪ) (65) ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ತಮ್ಮ ಹುಟ್ಟಿದ ದಿನದಂದೇ ನಿಧನರಾದ ಶಂಕರಮೂರ್ತಿ ಅವರು ಪತ್ನಿ, ಪುತ್ರಿ, ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ತೊಂಡೇಕೆರೆಯಲ್ಲಿ ಸಂಜೆ ನೆರವೇರಿತು.