ಶಿರಾ

ನಗರಸಭೆ ಅಂಗಡಿ ಮಳಿಗೆ ಬೇರೆಯವರಿಗೆ ಪರಭಾರೆ : ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

ಶಿರಾ : ನಗರಸಭೆಯ ಅಂಗಡಿ ಮಳಿಗೆಗಳನ್ನು ಸುಮಾರು 25 ರಿಂದ 50 ವರ್ಷಗಳ ಹಿಂದೆ ಬಾಡಿಗೆ ಪಡೆದವರಲ್ಲಿ ಕೆಲವು ಮೂಲ ಬಾಡಿಗೆದಾರರು ಮರಣ ಹೊಂದಿದ್ದು, ಅಂತಹ ಮಳಿಗೆಗಳನ್ನು ಬೇರೆಯವರಿಗೆ ಪರಬಾರೆ ಮಾಡಿದ್ದಾರೆ. ನಗರಸಭೆ ಆಸ್ತಿ ಪರಬಾರೆ ಮಾಡಲಿಕ್ಕೆ ಅವರು ಯಾರು? ಎಂದು ಸದಸ್ಯ ರವಿಶಂಕರ್ ಪ್ರಶ್ನಿಸಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ರವಿಶಂಕರ್ ಅವರು ನಾಳೆಯಿಂದಲೇ ಪೌರಾಯುಕ್ತರು ಕಾರ್ಯಪ್ರವೃತ್ತರಾಗಿ ಯಾವ ಯಾವ ಅಂಗಡಿ ಮಳಿಗೆಗಳ ಮೂಲ ಬಾಡಿಗೆದಾರರು ಮೃತಪಟ್ಟಿದ್ದಾರೆ ಅಂತಹ ಮಳಿಗೆಗಳನ್ನು ನಗರಸಭೆ ವಶಕ್ಕೆ ಪಡೆಯಬೇಕು. ಹಾಗೂ ಅನಧಿಕೃತವಾಗಿ ಮಳಿಗೆಯಲ್ಲಿರುವವರನ್ನು ಹೊರಹಾಕಬೇಕು ಎಂದು ಒತ್ತಾಯಿಸಿದರು.

5 ಕೋಟಿ ಬಾಡಿಗೆ ಬಾಕಿ: ನಗರಸಭೆಯಿಂದ ನೀಡಿರುವ ಅಂಗಡಿ ಮಳಿಗೆಗಳಿಂದ ಒಟ್ಟು ಸುಮಾರು 5 ಕೋಟಿ ರೂಪಾಯಿ ಬಾಡಿಗೆ ಹಣ ಬಾಕಿ ಉಳಿದಿದೆ. 5 ಕೋಟಿ ರೂ. ಹಣದಿಂದ ನಗರದ ಅಭಿವೃದ್ಧಿ ಮಾಡಬಹುದು. ಆದರೆ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದಾರೆ. ಕೂಡಲೇ ಬಾಡಿಗೆ ಹಣವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ರವಿಶಂಕರ್ ಒತ್ತಾಯಿಸಿದರು.
ನಗರಸಭೆ ಅಧಿಕಾರಿ ಪಂಚಾಯಿಗಳು ದುರ್ಬಳಕೆ: ಶಿರಾ ನಗರಕ್ಕೆ ಸಮೀಪವಿರುವ ಭೂವನಹಳ್ಳಿ, ಕೊಟ್ಟ, ಯಲಿಯೂರು ಗ್ರಾಮ ಪಂಚಾಯಿತಿಯವರು ನಗರದ ಸುತ್ತಮುತ್ತ ನಿರ್ಮಿಸುತ್ತಿರುವ ಬಡಾವಣೆಗಳ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ನೀಡಿ, ನಗರಸಭೆಗೆ ಬರುವ ಆದಾಯವನ್ನು ಮೊಟಕುಗೊಳಿಸುತ್ತಿದ್ದಾರೆ. ಹಾಗೂ ನಗರಸಭೆ ಅಧಿಕಾರವನ್ನು ದುರುಪಯೊಗಪಡಿಸಿಕೊಳ್ಳುತ್ತಿದ್ದಾರೆ. ಪೌರಾಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ. ಕೂಡಲೇ ಪಂಚಾಯಿತಿಗಳಿAದ ನಿರಾಕ್ಷೇಪಣ ಪತ್ರ ಪಡೆಯದೆ ನಗರಸಭೆವತಿಯಿಂದ ಪಡೆಯಲು ಕ್ರಮ ಕೈಗೊಳ್ಳಿ ಎಂದು ಸದಸ್ಯ ರವಿಶಂಕರ್ ಒತ್ತಾಯಸಿದರು.
ಅಂಬೇಡ್ಕರ್ ಪುತ್ಥಳಿ ನಿರ್ಮಾಣ: ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಹೇಳಿದರು. ಸದಸ್ಯ ಲಕ್ಷಿö್ಮÃಕಾಂತ್ ಅವರು ಅಂಬೇಡ್ಕರ್ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸದೆ ಕಾರಂಜಿ ನಿರ್ಮಿಸುವುದು ಬೇಡ ಎಂದು ಪ್ರಶ್ನೆಸಿದರು. ಇದಕ್ಕೆ ಉತ್ತರಿಸಿದ ಬಿ.ಅಂಜಿನಪ್ಪ ಅವರು ಅಂಬೇಡ್ಕರ್ ಸರ್ಕಲ್‌ನಲ್ಲಿ ಕಾರಂಜಿ ನಿರ್ಮಾಣವಾಗುತ್ತಿದ್ದು, ಕಾರಂಜಿ ಪಕ್ಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
ಹೈಟೆಕ್ ಶೌಚಾಲಯ ನಿರ್ಮಾಣ: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇದ್ದು, ಇದರಿಂದ ಜನತೆಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ನಗರದ ಬುಕ್ಕಾಪಟ್ಟಣ ಸರ್ಕಲ್‌ನಲ್ಲಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರಕಾರಿ ಪ.ಪೂ. ಕಾಲೇಜಿನ ಪಕ್ಕದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವನ್ನು ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಟ್ಟುಕೊಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಸಭೆಗೆ ತಿಳಿಸಿದರು.
ಖಾತೆ ಬದಲಾವಣೆಗೆ ಲಂಚ: ನಗರಸಭೆಯಲ್ಲಿ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಹಣವನ್ನೂ ಪಡೆದು ಸುಮಾರು ಮೂರು ತಿಂಗಳಾದರೂ ಖಾತೆ ಮಾಡಿಕೊಟ್ಟಿಲ್ಲ. ಈ ರೀತಿ ಆದರೆ ಜನಸಾಮಾನ್ಯರ ಪಾಡೇನು ಎಂದು ಸದಸ್ಯ ಅಜಯ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಲಂಚದ ಹಣ ಕೊಟ್ಟರೆ ಕೆಲಸ ಆಗುತ್ತದೆ. ಇಲ್ಲದಿದ್ದರೆ ಇದು ಗ್ರಾಮ ಠಾಣಾಗೆ ಸೇರಿದ ಆಸ್ತಿಯಾಗಿದೆ. ಖಾತೆ ಮಾಡಲು ಬರುವುದಿಲ್ಲ ಎಂದು ಹೇಳುತ್ತಾರೆ. ಹಣ ಕೊಟ್ಟರೆ ಯಾವುದನ್ನು ಕೇಳದೆ ಖಾತೆ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು.
ಬಿಡಾಡಿ ದನಗಳ ಹಾವಳಿ; ಶಿರಾ ನಗರದಲ್ಲಿ ಬಿಡಾಡಿ ದನಗಳು ಹೆಚ್ಚಾಗಿವೆ. ಇದಕ್ಕೆ ಹಸುಗಳ ಮಾಲಿಕರು ತಮ್ಮ ಹಸುಗಳನ್ನು ಮನೆಯ ಬಳಿ ಸಾಕಾಣಿಕೆ ಮಾಡಬೇಕು. ರಸ್ತೆಗೆ ಬಿಟ್ಟರೆ ಅಂತಹ ಹಸುಗಳನ್ನು ಗೋಶಾಲೆಗೆ ನೀಡಲಾಗುವುದು ಎಂದು ತಿಳಿಸಿದರು.
ಹಂದಿಗಳನ್ನು ಊರ ಹೊರಗೆ ಸಾಕಿ: ನಗರದಲ್ಲಿ ಹಂದಿಗಳು ಹೆಚ್ಚಾಗಿದ್ದು, ಇದರಿಂದ ಸ್ವಚ್ಛತೆಯೂ ಹಾಳಾಗಿದೆ ಹಾಗೂ ಜನರ ಓಡಾಟಕ್ಕೂ ತೊಂದರೆಯಾಗುತ್ತಿದೆ. ಕೂಡಲೇ ಹಂದಿಗಳ ಮಾಲೀಕರು ಊರ ಹೊರಗಡೆ ಸಾಕಬೇಕು. ಹಂದಿಗಳನ್ನು ನಗರದಲ್ಲಿ ಬಿಟ್ಟರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅಜಯ್‌ಕುಮಾರ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಅವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಂಬುಜಾ ನಟರಾಜ್, ಪೌರಾಯುಕ್ತ ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker