ನರೇಗಾ ಯೋಜನೆ : 1.80 ಕೋಟಿ ಹಣ ಬಳಸಿಕೊಳ್ಳದ ತೋಟಗಾರಿಕಾ ಇಲಾಖೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಸೂಚನೆ : ಶಾಸಕ ಡಾ.ಜಿ.ಪರಮೇಶ್ವರ್
ತಾಲೂಕು ಪಂಚಾಯತಿ ತ್ರೈಮಾಸಿಕ ಸಭೆಯಲ್ಲಿ ಹೇಳಿಕೆ
ಕೊರಟಗೆರೆ : ತಾಲೂಕು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ತೋಟಗಾರಿಕಾ ನರೇಗಾ ಯೋಜನೆಯಲ್ಲಿ 1.80 ಕೋಟಿ ಹಣವನ್ನು ಬಳಸಿಕೊಳ್ಳದೆ ಇದ್ದುದಕ್ಕಾಗಿ ಶಾಸಕ ಡಾ.ಜಿ.ಪರಮೇಶ್ವರ ಕ್ರಮಕ್ಕೆ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆ ನಡೆಸಿ ಪ್ರಗತಿ ಪರಿಶೀಲನೆಯಲ್ಲಿ ತೋಟಗಾರಿಕಾ ಇಲಾಖೆಯನ್ನು ಪರಿಶೀಲಿಸಿದಾಗ ಇಲಾಖಾ ಅಧಿಕಾರಿಗಳು 2021-2022 ಸಾಲಿನಲ್ಲಿ ಇಲಾಖೆಗೆ ಬರುವ ನರೇಗಾ ಮಾನವ ಶ್ರಮ ಯೋಜನೆಯ 1.80 ಕೋಟಿ ಹಣವನ್ನು ಬೇಜಾವಾಬ್ದಾರಿಯಿಂದ ಉಪಯೋಗ ಮಾಡದೆ ಇರುವುದನ್ನು ಕಂಡು ಕೆಂಡಮಂಡಲವಾದರು, ಕೂಡಲೇ ಇಲಾಖಾ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಣಾಧಿಕಾರಿಗಳಿಗೆ ತಿಳಿಸಿದರು.
ನೋಂದಣಿ ಇಲಾಖೆಯ ಅಧಿಕಾರಿ ಕಛೇರಿಯಲ್ಲೇ ಇದ್ದುಕೊಂಡು ಸಭೆ ಬಾರದೆ ಹಾಗೂ ಸರಿಯಾದ ಮಾಹಿತಿಯನ್ನು ಇಲಾಖೆಯವರ ಹತ್ತಿರ ಕಳುಸದೆ ಇದ್ದುದಕ್ಕಾಗಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಶಾಸಕರು ಸೂಚಿಸಿದರು. ನೊಂದಣಿ ಇಲಾಖೆಯಲ್ಲಿ ಸರ್ಕಾರವು ನೀಡಿರುವ ಮುದ್ರಂಕ ಶುಲ್ಕ ಗುರಿಗಿಂತ ಕಡಿಮೆ ತಲುಪಲಾಗಿತ್ತು ಹಾಗೂ ಆರೋಗ್ಯ ಇಲಾಖೆಯವರ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯವರು ಪ್ರತಿವರ್ಷ ಸಸಿ ನೆಡುವ ಲೆಕ್ಕ ನೀಡುವದನ್ನು ಪರಿಶೀಲಿಸದರೆ, ಅದರಲ್ಲಿ 50% ರಷ್ಟು ಉಳಿದ್ದರೂ 10 ವರ್ಷದಲ್ಲಿ ತಾಲೂಕಿನಲ್ಲಿ ಒಂದು ಕೋಟಿ ಮರಗಳು ಬೆಳೆಯ ಬೇಕಿತ್ತು, ಆದರೆ ಅದನ್ನು ನಾವು ಕಾಣುತ್ತಿದಲ್ಲ ಇಡೀ ರಾಜ್ಯದಲ್ಲಿ ಅರಣ್ಯ ಇಲಾಖೆ ಇದೇ ರೀತಿ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡುತಿದೆ ಎಂದರು. ಸಾಮಾಜಿಕ ಅರಣ್ಯ ಅಧಿಕಾರಿಗೆ ರಸ್ತೆ ಬದಿ ಹುಣುಸೆ ಹಾಕುವುದಕ್ಕೀಂತ ಹೆಚ್ಚಾಗಿ ಸರ್ಕಾರಿ ಜಾಗಗಳಲ್ಲಿ, ಅದರಲ್ಲೂ ಹುಣುಸೆ ಬೆಳೆಯಲ್ಲಿ ಹೆಸರು ಮಾಡಿರುವ ತೋವಿನ ಕೆರೆಭಾಗದಲ್ಲಿ ಗಿಡ ಬೆಳೆಸುವಂತೆ ಸೂಚಿಸಿದರು.
ತಾಲೂಕಿನಲಿರುವ 279 ಸರ್ಕಾರಿ ಶಾಲೆಗಳ ಕೊಠಡಿಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ವರದಿ ನೀಡುವಂತೆ, ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಬಗ್ಗೆ ಮತ್ತು ಅನುತೀರ್ಣ ಆಗಿರುವ ವಿಷಯಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ತಹಶೀಲ್ದಾರ್ ನಾಹಿದಾ ಜಮ್ ಜಮ್ , ತಾಲೂಕು ಪಂಚಾಯತಿ ಆಡಳಿತಾ ಧಿಕಾರಿ ದೀಪಶ್ರೀ, ಕಾರ್ಯನಿರ್ವಾಹಣಾಧಿಕಾರಿ ದೊಡ್ಡಸಿದ್ದಪ್ಪ, ಸೇರಿದಂತೆ ಇಲಾಖಾ ಅಧಿಕಾರಿಗಳು ಹಾಜರಿದ್ದರು.