ಕುಣಿಗಲ್

ಕಸ ತುಂಬುವ ವಾಹನದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಮೆರವಣಿಗೆ : ತಾಲೂಕು ಆಡಳಿತದ ವಿರುದ್ದ ಮುಖಂಡರುಗಳ ಆಕ್ರೋಶ : ಕ್ಷಮೆ ಯಾಚಿಸದಿದ್ದರೆ ಉಗ್ರ ಹೋರಾಟ

ಕುಣಿಗಲ್ : ಪಟ್ಟಣದ ಕಸ ತುಂಬುವ ಪುರಸಭೆಯ ವಾಹನದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡಿದನ್ನು  ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ತಾಲೂಕಾಡಳಿತ  ಸ್ಪಷ್ಟನೇ ನೀಡಿ, ಕ್ಷಮೆ ಕೇಳದಿದ್ದರೇ ಬುಧವಾರ ಪಟ್ಟಣದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ‌ ಮಂದಿರದಲ್ಲಿ ಪತ್ರಕರ್ತರೊಂದಿಗೆ  ಮಾತನಾಡಿ, ನಾಡು ಕಂಡ ಧೀಮಂತ ನಾಯಕ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿಯೇ ದೂರದೃಷ್ಟಿಯಿಂದ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ. ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣರಾದವರು ನಾಡಪ್ರಭು ಕೆಂಪೇಗೌಡರು. ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಕೆರೆ ಕಟ್ಟೆ ಕಲ್ಯಾಣಿ ಕೋಟೆಕೊತ್ತಲುಗಳನ್ನು  ನಿರ್ಮಾಣ ಮಾಡಿ ಸರ್ವರಿಗೂ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ ರಾಜ್ಯ ಕಂಡ ಧೀಮಂತ  ನಾಯಕರಾಗಿದ್ದರು. ಇಂತಹ ನಾಯಕರನ್ನು ತಾಲೂಕು ಆಡಳಿತ, ಪುರಸಭೆ ಹಾಗೂ ಶಾಸಕರು ಉದ್ದೇಶ ಪೂರಕವಾಗಿ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಪುರಸಭೆಯ ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಿದ್ದಾರೆ, ತಾಲೂಕು ಆಡಳಿತಕ್ಕೆ ಹಣದ ಕೊರತೆ ಇದ್ದಿದ್ದರೆ ದಾನಿಗಳು ಸಹಾಯ ಮಾಡುತ್ತಿದ್ದರು ದಾನಿಗಳ ಸಹಾಯ ಪಡೆದು ಆಚರಣೆ ಮಾಡಬಹುದ್ದಾಗಿತ್ತು ಎಂದು ಕಿಡಿಕಾರಿದರು.
ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮ   ತಾಲೂಕು ಆಡಳಿತ ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಆಯೋಜಿಸಬೇಕಾಗಿತ್ತು ಆದರೆ ಏಕ ಪಕ್ಷೀಯವಾಗಿ ಕಾರ್ಯಕ್ರಮ ಮಾಡಿದೆ ಎಂದು ದೂರಿದರು, ವಿದ್ಯಾವಂತ ಶಾಸಕರು ಇರುವಾಗ ಕ್ಷೇತ್ರದಲ್ಲಿ ಮಹಾನ್ ನಾಯಕರಿಗೆ ಅಪಮಾನ ಮಾಡಿರುವುದು ನಾವು ಸಹಿಸಲು ಆಗುವುದಿಲ್ಲ, ‌ತಾಲೂಕು ಆಡಳಿತ ಈ ಸಂಬಂದ ಸ್ಪಷ್ಟನೇ ಹಾಗೂ ಬಹಿರಂಗ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಜೂ 29 ತಾಲೂಕು ಕಚೇರಿ, ಪುರಸಭೆ ಹಾಗೂ ಶಾಸಕರಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷಾತೀತವಾಗಿ  ಅನೇಕ ಮುಖಂಡರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker