ತಿಪಟೂರು
ಸ್ಪರ್ಶ ಸ್ಪೂರ್ತಿ ಮತ್ತು ಜೀವನ ಸಿದ್ಧಾಂತ ಪುಸ್ತಕಗಳ ಬಿಡುಗಡೆ ಸಮಾರಂಭ
ತಿಪಟೂರು : ಶ್ರೀಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ತಿಪಟೂರಿನ ಕೋಟೆಬೀದಿಯ ಶ್ರೀ ಕಾಳಿಕಾಂಬದೇವಿಯವರಿಗೆ ಪೂಜೆ ಸಲ್ಲಿಸಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಗುರುವರ್ಯರು ಆಧ್ಯಾತ್ಮಿಕದಲ್ಲಿ ಮಾಗಿದ ಶೆಟ್ಟಿಹಳ್ಳಿ ಶ್ರೀನಿವಾಸ್ ರವರು ಆಧ್ಯಾತ್ಮಿಕ ಗ್ರಂಥಗಳ ರಚನೆಯಲ್ಲಿ ತೊಡಗಿಸಿಕೊಂಡು ಇಂದಿನ ಜೀವನ ಸಿದ್ಧಾಂತಗಳು ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು ಹರ್ಷ ತಂದಿದೆ ಮತ್ತು ಡಾ|| ಪಿ.ಶಂಕ್ರಪ್ಪ ಬಳ್ಳೇಕಟ್ಟೆರವರು ರೈತಾಪಿ ಜೀವನದಿಂದ ಪ್ರಾರಂಭಿಸಿ ಸ್ಪರ್ಶ ಸ್ಫೂರ್ತಿ ರೈತ ಕಾರ್ಮಿಕರನೊವುನಲಿವುಗಳನ್ನು ವಾಸ್ತವಾಂಶದ ಸಾಹಿತ್ಯ ಕಣಜ ಕವನಸಂಕಲನದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ರೈತಕಾರ್ಮಿಕರ ಜೀವನವನ್ನು ಅನುಭವಿಸಿದ ನೋವು-ನಲಿವುಗಳನ್ನು ತಮ್ಮ ಪುಸ್ತಕದಲ್ಲಿ ಅಳವಡಿಸಿದ್ದಾರೆ ಅವರಿಗೆ ಸದ್ಗುರುಗಳ ಮತ್ತು ಮಾತ ಕಾಳಿಕಾಂಬೆಯ ಕೃಪಾಶೀರ್ವಾದ ಸದಾ ಇದ್ದೆ ಇರುತ್ತದೆ ಎಂದು ಆಶೀರ್ವದಿಸಿದರು.
ನಂತರ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ|| ಎಲ್ ಎಂ ವೆಂಕಟೇಶ್ ರವರು ಪಿ.ಶಂಕ್ರಪ್ಪಬಳ್ಳೇಕಟ್ಟೆ ಅವರ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಮಾತನಾಡುತ್ತಾ ಶಂಕರಪ್ಪನವರು ಇಡೀ ಎಲ್ಲ ಕವನಗಳ ಸಮಗ್ರ ಅಭ್ಯಾಸ ಮಾಡಲಾಗಿ ಮೂಲತಹ ರೈತಾಪಿ ಕುಟುಂಬದಿಂದ ಬಂದವರು ಅನುಭವಿಸಿದ ಕಷ್ಟ ನಷ್ಟ ಸುಖ ದುಖಃಗಳನೊಳಗೊಂಡ ಶ್ರಮ ಸಂಜೀವಿನಿ ಸಾಹಿತ್ಯ ಸಾರವನ್ನ ಲೋಕಾರ್ಪಣೆಮಾಡಿದ್ದಾರೆ ಆದ್ದರಿಂದ ಅವರ ಇನ್ನು ಹೆಚ್ಚೆಚ್ಚು ಸಾಹಿತ್ಯ ಕೃತಿ ಹೊರ ತರಲಿ ಎಂದು ತಮ್ಮ ಪುಸ್ತಕ ವಿಮರ್ಶಾ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅರಕಲಗೂಡಿನ ಹಿರಿಯ ವಕೀಲರಾದ ಎ.ಆರ್. ಜನಾರ್ದನ ಗುಪ್ತಾರವರು ಸಾಹಿತ್ಯ ಯಾರೊಬ್ಬರ ಸ್ವತ್ತಲ್ಲ ಸರ್ವರ ಸ್ವತ್ತು ರವಿಕಾಣದನ್ನು ಕವಿ ಕಾಣುತ್ತಾನೆ. ಮಾನವೀಯ ಮೌಲ್ಯಗಳನ್ನು ಯುವ ಕವಿ ಶಂಕರಪ್ಪಬಳ್ಳೇಕಟ್ಟೆರವರು ಕವನ ಗುಣಗಾನ ಮಾಡುತ್ತಾ , ಮನುಷ್ಯತ್ವ ಸ್ವತಃ ಅಳವಡಿಸಿಕೊಂಡು ಸಮಾಜ ಹೇಗೆ ಸರಿಪಡಿಸಿಬೇಕು, ಹಿರಿಯರಿಗೆ ಗೌರವ ಕೊಟ್ಟು ಇಂದಿನ ವೃದ್ದಾಶ್ರಮದಂತಹ ಆಶ್ರಮಗಳು ರದ್ದಾಗಬೇಕು ಸಂಬಂಧಗಳು ಗಟ್ಟಿಯಾಗಬೇಕು ಇದರಿಂದ ವಿಶ್ವ ಭಾತೃತ್ವ ಸೃಷ್ಟಿಯಾಗಬೇಕು ಎಂದು ತಮ್ಮ ಆಸೆಯನ್ನುಡಿ ಗಳಾಡಿದರು.
ಶೇಟ್ಟಿಹಳ್ಳಿ ಶ್ರೀನಿವಾಸ್ರವರು ಆಧ್ಯಾತ್ಮ ಚಿಂತನೆಗಳಿಂದ ಪರಮಾತ್ಮನ ಭಕ್ತಿಸ್ಮರಣೆ ಮಾಡಿ ಮುಕ್ತಿ ಹೊಂದಲು ಸನ್ಮಾರ್ಗ ಪ್ರಾಪ್ತಿಯಾಗುತ್ತದೆ ಎಂದರು.
“ಸ್ಪರ್ಶಸ್ಪೂರ್ತಿ ‘ಕೃತಿಕಾರರಾದ ಡಾ.ಪಿ.ಶಂಕರಪ್ಪಬಳ್ಳೇಕಟ್ಟೆರವರು ರೈತನಂತೆ ಫಲಾಪೇಕ್ಷೆ ರಹಿತ ಜೀವನ ಪಾವನ, ತನ್ನ ಬೆಳೆಯ ಕಳೆಯ ಕಿಳದೆ ಹೊದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಾರದು ,ಸಾಹಿತ್ಯವು ಸಮಾಜದ ದುಷ್ಕೃತ್ಯಗಳನ್ನು ಖಂಡಿಸಿ ಸರಿಪಡಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಿಪಟೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಎಂ ಬಸವರಾಜಪ್ಪನವರು ಇಬ್ಬರು ಕವಿಗಳ ಪುಸ್ತಕಗಳು ಆಧ್ಯಾತ್ಮ ಮತ್ತು ಸಾಮಾಜಿಕತತ್ವದ ಆಧಾರದ ಮೇಲೆ ಕೃತಿಗಳನ್ನು ರಚನೆ ಮಾಡಿದ್ದು ಸಮಾಜ ಮುಖಿ ಸಾಹಿತ್ಯಗಳಿಂದ ಸಮಾಜ್ಯೋದ್ದಾರ ಸಾದ್ಯ, ಸಾಹಿತ್ಯಾಭಿರುಚಿ ಬೆಳೆಸಿದಂತೆ ಉತ್ಕೃಷ್ಟ ಸಾಹಿತ್ಯ ರಚನೆಯಾಗಿ ಜನಸಾಮಾನ್ಯರ ಮನಗೆಲ್ಲಬೇಕು, ಇಬ್ಬರು ಕವಿಗಳ ಶ್ರಮ ಸಾರ್ಥಕವಾಗಲಿ, ಕನ್ನಡ ಸಾಹಿತ್ಯ ಪರಿಷತ್ತು ಸದಾ ನಿಮ್ನೋಂದಿಗಿರುತ್ತದೆ ಎಂದು ತಮ್ಮ ಅಧ್ಯಕ್ಷ ನುಡಿಗಳನ್ನಾಡಿದರು.
ಪ್ರತಿಭಾವಂತ ಮಕ್ಕಳಾದ ಕು.ಮಾನಸ ಮತ್ತು ಕು.ಮಾನ್ಯರವರನ್ನು ಶ್ರೀ ಗಳಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಪ್ರಾಯೋಜಕ ರಾದ ಕೃಷ್ಣಚಾರ್ , ಗಣೇಶ್ , ಹೇಮಂತ್ , ಕುಪ್ಪಾಳು ವಿಶ್ವನಾಥಪ್ಪ, ಶೆಟ್ಟಿಹಳ್ಳಿ ಪಟೇಲ್ ಪುಟ್ಟಮಲ್ಲಯ್ಯನವರು, ಕೃಷ್ಣಮೂರ್ತಿ,ಮತ್ತು ಹಿತೈಷಿಗಳು ಇದ್ದರು.
ಶುಭ ವಿಶ್ವಕರ್ಮ ಪ್ರಾರ್ಥಿಸಿ , ಡಾ.ಪಿ.ಶಂಕ್ರಪ್ಪಬಳ್ಳೇಕಟ್ಟೆರವರು ಸ್ವಾಗತಿಸಿ, ನಿರೂಪಿಸಿದರು, ಡಾ. ಭಾಸ್ಕರ್ರವರು ವಂದಿಸಿದರು. ಸಾಹಿತ್ಯಾಭಿಮಾನಿಗಳು ಹಾಗೂ ಪತ್ರಕರ್ತ ಬಂಧುಗಳು ಹಾಗೂ ಕಾಳಿಕಾಂಬ ದೇವಸ್ಥಾನ ಮಂಡಳಿಯ ಪದಾಧಿಕಾರಿಗಳು ಹಾಗೂ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ಎಲ್ಲಾ ಪದಾಧಿಕಾರಿಗಳು ಆಗಮಿಸಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಿದರು.