ವಿಧ್ಯೆ ಜೊತೆ ಸಂಸ್ಕಾರ-ಪ್ರಕೃತಿ ಪ್ರೇಮ ಬಹಳ ಮುಖ್ಯ : ಸಿ ಆರ್ ಪಿ ಮಂಜುನಾಥ್
ಮುಖ್ಯ ಶಿಕ್ಷಕ ಎನ್ ಕೆ ನಂದೀಶ್ ಬಿಳ್ಕೋಡುಗೆ ಸಮಾರಂಭ
ತಿಪಟೂರು : ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆ ಸಂಸ್ಕಾರ, ಸಂಸ್ಮೃತಿ, ಪರಿಸರ ಹಾಗೂ ಪ್ರಕೃತಿಗೆ ಸಂಬಂಧಿಸಿದ ವಿಷಯಗಳ ಮಹತ್ವವನ್ನು ತಿಳಿಸಿಕೊಡಲು ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಮತ್ತಿಹಳ್ಳಿ ಕಷ್ಟರ್ ನ ಸಿಆರ್‌ಪಿ ಮಂಜುನಾಥ್ ತಿಳಿಸಿದರು.
ಅವರು ಕಸಬಾ ಹೋಬಳಿಯ ಕರೀಕೆರೆಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಬಡ್ತಿ ಹೊಂದಿದ ಶಿಕ್ಷಕರಿಗೆ ಬಿಳ್ಕೋಡುಗೆ ಕಾರ‍್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಕಲಿಕೆಯ ಹಂತದಲ್ಲಿ ಮಕ್ಕಳು ಜ್ಞಾನಾರ್ಜನೆ ಬರುವಾಗ ಅವರಿಗೆ ಉತ್ತಮ ಗುಣಮಟ್ಟದ ಸಂಸ್ಕಾರ, ಸಂಸ್ಕೃತಿಯ ಮೌಲ್ಯಾಧರಿತ ಶಿಕ್ಷಣವನ್ನು ನೀಡಿದರೆ ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ದೇಶ ಸೇವೆ ಮಾಡುತ್ತಾರೆ ಎಂದರು.
ಸಮಾರಂಭದಲ್ಲಿ ಬಡ್ತಿ ಹೊಂದಿ ಬಿಳ್ಕೋಡುಗೆ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎನ್ ಕೆ ನಂದೀಶ್ ಮಾತಾನಾಡಿ ಶಾಲೆಯಲ್ಲಿ ಶಿಕ್ಷಕಕರಾಗಿ ಕೆಲಸ ನಿರ್ವಹಿಸುವಾಗ ಕೆಲವೊಮ್ಮೆ ಇಲಾಖಾ ಒತ್ತಡಗಳು ಪೋಷಕರ ಒತ್ತಡಗಳು ಎದುರುಗಾಗುತ್ತಿರುತ್ತವೆ ಅವುಗಳನ್ನು ಸಮಚಿತ್ತ ರೀತಿಯಲ್ಲಿ ಸ್ವೀಕರಿಸಿ ಮಕ್ಕಳಿಗೆ ಉತ್ತಮ ಭೋಧನೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ ಅದೇ ರೀತಿಯಲ್ಲಿ ಪ್ರಕೃತಿಗೆ ನಾವು ಸಸಿ ನೆಟ್ಟು ನೀರು ಗೊಬ್ಬರ ಹಾಯಿಸಿ ಪೋಷಣೆ ಮಾಡುವಂತೆ ಮಕ್ಕಳಿಗೆ ದೇಶಪ್ರೇಮ, ರಾಷ್ಟç ಭಕ್ತಿ ಎಂಬ ಅಂಶಗಳನ್ನು ಪ್ರಾಥಮಿಕ ಹಂತದಲ್ಲಿ ತಿಳಿಸಬೇಕು ಎಂದರು.
ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ರುದ್ರೇಶ್ ಮಾತನಾಡಿ ಶಾಲಾ ಶಿಕ್ಷಕರ ಜೊತೆ ಪೋಷಕರು ಉತ್ತಮ ಭಾಂಧವ್ಯ ಹೊಂದಿದಾಗ ಶಾಲೆ ಮತ್ತು ಮಕ್ಕಳು ಉನ್ನತಿ ಹೊಂದಲು ಸಾಧ್ಯ ಎಂದರು.
ಕಾರ‍್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಮಾಜಿ ಅದ್ಯಕ್ಷ ಮರುಳಸಿದ್ದಸ್ವಾಮಿ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾದ್ಯಕ್ಷ ಶಿವನಂದಸ್ವಾಮಿ, ಮಾಜಿ ಅದ್ಯಕ್ಷ ಲತೇಶ್ ಕೆ.ಬಿ, ಕೊಬ್ಬರಿ ವರ್ತಕ ಕರಿಸಿದ್ದಸ್ವಾಮಿ, ಗ್ರಾಮಸ್ಥರಾದ ಮರುಳಸಿದ್ದಸ್ವಾಮಿ, ಪರಮೇಶ್, ಬಸವರಾಜು, ಕುಮಾರ್, ಶಂಕರ್, ಹಾಲು ಪರೀಕ್ಷಕ ರವಿ, ಹಳೇ ವಿದ್ಯಾರ್ಧಿಗಳಾದ ಸಿದ್ದೇಶ್, ಪ್ರವೀಣ್, ದಿಲೀಪ್, ಶಾಲಾಭಿವೃದ್ದಿ ಸಮಿತಿಯ ಜಗದಾಂಬ, ರಾಧ, ಶಕುಂತಲ, ದಾಸೋಹ ಸಹಾಯಕಿ ಶೈಲಜಾ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
ಶಿಕ್ಷಕಿ ಲತಾ ಕಾರ‍್ಯಕ್ರಮ ನಿರೂಪಿಸಿದರು, ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯಮ್ಮ ವಂದಿಸಿದರು.