ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕರ ಅನುದಾನ : ನಿದೇರ್ಶಕ ಕೊಂಡವಾಡಿ ಚಂದ್ರಶೇಖರ್
ಭಕ್ತರ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಮಧುಗಿರಿ : ನಾನು ಕಾಂಗ್ರೆಸ್ ಪಕ್ಷದವನು ಶಾಸಕರು ಜೆಡಿಎಸ್ ನವರು ಆಗಿದ್ದರೂ ಸಹ ನಮ್ಮ ಸಂಘದ ಕಟ್ಟಡಗಳ ನಿರ್ಮಾಣಕ್ಕೆ ಪಕ್ಷಾತೀತವಾಗಿ ಅನುದಾನ ನೀಡುತಿದ್ದಾರೆ ಎಂದು ತುಮುಲ್ ನಿದೇರ್ಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಭಕ್ತರ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳಿಂದ ಸ್ಥಾಪಿತವಾದ ಈ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ತುಂಬ ಉತ್ತಮವಾಗಿ ಅಭಿವೃದ್ಧಿಯಾಗಿದೆ. ಶಾಸಕರ ಅನುದಾನದಲ್ಲಿ 3ಲಕ್ಷ, ಕೆಎಂಎಫ್ 4.5 ಲಕ್ಷ ಹಾಗೂ ತುಮುಲ್ ವತಿಯಿಂದ 4 ಲಕ್ಷ ಅನುದಾನ ನೀಡಲಾಗಿದೆ ಎಂದರು.
ನಮಗೆ ಸಹಾಯ ಮಾಡಿದ ಯಾವುದೆ ವ್ಯಕ್ತಿಯ ಉಪಕಾರ ಎಂದಿಗೂ ಮರೆಯಬಾರದು, ಶಾಸಕರ ಮೇಲೆ ಎಲ್ಲಾ ಸಂಘದ ಸದಸ್ಯರ ಆರ್ಶೀವಾದ ಇರಲಿ ನಾನು ಕಾಂಗ್ರೆಸ್ ಪಕ್ಷ ಅವರು ಜೆಡಿಎಸ್ ಪಕ್ಷದವರು ಆದರೆ ನಮ್ಮ ಸಂಘದ ಪ್ರತಿ ಕಟ್ಟಡಕ್ಕೆ 3ಲಕ್ಷ ಅನುದಾನ ಕೊಡುತ್ತಾ ಬಂದಿದ್ದು ನಮ್ಮ ಕೆಲಸ ಮಾಡಿಕೊಟ್ಟವರಿಗೆ ಕೃತಜ್ಞತೆ ಸಲ್ಲಿಸಬೇಕು ಈ ಸಂಘವನ್ನು ಉಳಿಸಿ ಬೆಳಸಬೇಕಾದ ಹೊಣೆ ಗ್ರಾಮಸ್ಥರ ಮೇಲಿದೆ. ನಾನು ಯಾವುದೆ ಭೇದ ಭಾವವಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಚುನಾವಣೆ ವೇಳೆಯಲ್ಲಿ ಮಾತ್ರ ರಾಜಕೀಯ ಮಾಡೋಣ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು ಶಾಸಕರು ಸಂಪೂರ್ಣ ಸಹಕಾರ ನೀಡುತಿದ್ದಾರೆ ಎಂದರು.
ಶಾಸಕ ಎಂ.ವಿ ವೀರಭದ್ರಯ್ಯ ಮಾತನಾಡಿ ಕೊಂಡವಾಡಿ ಚಂದ್ರಶೇಖರ್ ರೈತಾಪಿ ಕುಟುಂಬದಿಂದ ಬಂದಿದ್ದು ಹೈನುಗಾರಿಕೆಯಲ್ಲಿ ಉತ್ತಮ ಅನುಭವ ಇದೆ ಇವರು ಅಧ್ಯಕ್ಷರಾಗಿದ್ದಾಗ ಹತ್ತು ಹಲವು ಯೋಜನೆಗಳು ಜಾರಿಗೆ ತಂದಿದ್ದು ಇಂದು ನಿದೇರ್ಶಕರಾಗಿಯು ಒಳ್ಳೆ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಹಾಲು ಉತ್ಪಾದಕರ ಕಷ್ಟ ಸುಖಗಳ ಬಗ್ಗೆ ತುಂಬ ಅನುಭವ ಇದೆ ಎಂದರು
ಯಾವುದೆ ಪಕ್ಷವಿರಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಈ ಭಾಗದಲ್ಲಿ ಕಾರಮರಡಿ ಇಂದ ಭಕ್ತರಹಳ್ಳಿಗೆ 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲು ಅತೀ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸುಮಾ, ಜಯಮ್ಮ, ಸಂಘದ ಅಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ನಾಗಮಣಿ, ಡಾ ದೀಕ್ಷಿತ್, ವಿಸ್ತಾರಣಾಧಿಕಾರಿ ಶಂಕರ್ ನಾಗ್. ಗಿರೀಶ್, ಮಹಾಲಕ್ಷ್ಮಿ ಹಾಗೂ ಸಂಘದ ನಿರ್ದೇಶಕರು ಹಾಜರಿದ್ದರು.