ಸುದ್ದಿ

ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರಿಗೆ ನಿಗದಿತ ಧರದಲ್ಲಿ ಸಸಿ/ಕಸಿ ಗಿಡಗಳು ಲಭ್ಯ : ತೋಟಗಾರಿಕಾ ಇಲಾಖೆ ನಿರ್ದೇಶಕಿ ರೂಪ

ತುಮಕೂರು : ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಾವು, ಸಪೋಟ, ತೆಂಗು, ನಿಂಬೆ, ಕರಿಬೇವು ಸಸಿ/ಕಸಿ ಗಿಡಗಳು ಲಭ್ಯವಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೂಪ ಮನವಿ ಮಾಡಿದ್ದಾರೆ.
ಆಸಕ್ತ ರೈತರು ವಿವಿಧ ತೋಟಗಾರಿಕೆ ಕ್ಷೇತ್ರದಲ್ಲಿ ಲಭ್ಯವಿರುವ ಸಸಿ/ಕಸಿ ಗಿಡಗಳನ್ನು ಪಡೆಯಬಹುದಾಗಿದ್ದು, ತೋಟಗಾರಿಕೆ ಕ್ಷೇತ್ರಗಳ ವಿವರ ಇಂತಿದೆ.
ಕೊರಟಗೆರೆ ತಾಲ್ಲೂಕಿನ ದೊಡ್ಡಸಾಗೆರೆಯ ಡಾ|| ಎಂ.ಹೆಚ್. ಮರಿಗೌಡ ತೋಟಗಾರಿಕೆ ಕ್ಷೇತ್ರ(ಮೊ.ಸಂ. 9986456750/8105118179)ದಲ್ಲಿ ಬಾದಾಮಿ, ಮಲ್ಲಕಾ, ದಶೇರಿ ತಳಿಗಳ ಮಾವು, ಅಲಹಾಬಾದ್ ಸಫೇದ್ ತಳಿಯ ಸೀಬೆ, ತಿಪಟೂರ್ ಟಾಲ್ ತಳಿಯ ತೆಂಗು, ಪಾಟೇಲ್ ತಳಿಯ ನೇರಳೆ; ಕುಣಿಗಲ್ ತಾಲ್ಲೂಕಿನ ರಂಗಸ್ವಾಮಿ ಗುಡ್ಡ ತೋಟಗಾರಿಕೆ ಕ್ಷೇತ್ರ(ಮೊ.ಸಂ. 8722562849/8495882552)ದಲ್ಲಿ ತಿಪಟೂರು ಟಾಲ್ ತಳಿಯ ತೆಂಗು, ಅಡಿಕೆ(ಸ್ಥಳೀಯ) ಹಾಗೂ ಮಂಗಳ ಮತ್ತು ಮಾರ್ಕೋನಹಳ್ಳಿ ತೋಟಗಾರಿಕೆ ಕ್ಷೇತ್ರ(ಮೊ.ಸಂ. 8749057112)ದಲ್ಲಿ ತಿಪಟೂರು ಟಾಲ್ ತಳಿಯ ತೆಂಗು, ಅಡಿಕೆ(ಸ್ಥಳೀಯ), ಕರಿಬೇವು(ಸ್ಥಳೀಯ), ನಿಂಬೆ(ಸ್ಥಳೀಯ); ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ತೋಟಗಾರಿಕೆ ಕ್ಷೇತ್ರ(ಮೊ.ಸಂ. 8088125477)ದಲ್ಲಿ ಅಡಿಕೆ(ಸ್ಥಳೀಯ), ನಿಂಬೆ(ಸ್ಥಳೀಯ) ಹಾಗೂ ಬೆಳ್ಳಾರ ಶ್ರೀ ಧರ್ಮವೀರ ತೋಟಗಾರಿಕೆ ಕ್ಷೇತ್ರ(ಮೊ.9164197030)ದಲ್ಲಿ ನಿಂಬೆ(ಸ್ಥಳೀಯ), ಅಡಿಕೆ(ಸ್ಥಳೀಯ), ತಿಪಟೂರು ಟಾಲ್ ತಳಿಯ ತೆಂಗು; ಮಧುಗಿರಿ ತಾಲ್ಲೂಕು ಬಡವನಹಳ್ಳಿ ಇಂದಿರಾ ತೋಟಗಾರಿಕೆ ಕ್ಷೇತ್ರ(ಮೊ.ಸಂ. 8296717898)ದಲ್ಲಿ ತಿಪಟೂರು ಟಾಲ್ ತಳಿಯ ತೆಂಗು, ಅಡಿಕೆ(ಸ್ಥಳೀಯ); ತುರುವೇಕೆರೆ ತಾಲ್ಲೂಕು ಮಾದಿಹಳ್ಳಿ ತೋಟಗಾರಿಕೆ ಕ್ಷೇತ(ಮೊ.ಸಂ. 8971167552/8618468202)ದಲ್ಲಿ ಬಾದಾಮಿ, ಮಲ್ಲಕಾ, ದಶೇರಿ ತಳಿಗಳ ಮಾವು, ತಿಪಟೂರು ಟಾಲ್ ತಳಿಯ ತೆಂಗು, ಅಲಹಾಬಾದ್ ಸಫೇದ್ ತಳಿಯ ಸೀಬೆ, ನಿಂಬೆ(ಸ್ಥಳೀಯ); ತಿಪಟೂರು ತಾಲ್ಲೂಕು ಗೊರಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ(ಮೊ.ಸಂ. 8310780633) ನಿಂಬೆ(ಸ್ಥಳೀಯ), ತಿಪಟೂರು ಟಾಲ್ ತಳಿಯ ತೆಂಗು, ಅಡಿಕೆ(ಸ್ಥಳೀಯ); ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಿಡುವಳಲು ತೋಟಗಾರಿಕೆ ಕ್ಷೇತ್ರ(ಮೊ.ಸಂ. 9880049755/8147636329)ದಲ್ಲಿ ಬಾದಾಮಿ, ರಸಪುರಿ, ತೋತಾಪುರಿ, ಬೇನೇಶಾ ತಳಿಗಳ ಮಾವು ಕಸಿ, ಅಲಹಾಬಾದ್ ಸಫೇಧ್ ತಳಿಯ ಸೀಬೆ, ನಿಂಬೆ(ಸ್ಥಳೀಯ), ಕರಿಬೇವು(ಸ್ಥಳೀಯ), ತಿಪಟೂರು ಟಾಲ್ ತಳಿಯ ತೆಂಗು; ಗುಬ್ಬಿ ತಾಲ್ಲೂಕು ಹೇರೂರು ತೋಟಗಾರಿಕೆ ಕ್ಷೇತ್ರ(8711917499)ದಲ್ಲಿ ತಿಪಟೂರು ಟಾಲ್ ತಳಿಯ ತೆಂಗು, ಕರಿಬೇವು(ಸ್ಥಳೀಯ); ಶಿರಾ ತಾಲ್ಲೂಕು ಮುದಿಗೆರೆ ತೋಟಗಾರಿಕೆ ಕ್ಷೇತ್ರ(ಮೊ.ಸಂ. 9141621105)ದಲ್ಲಿ ತಿಪಟೂರು ಟಾಲ್ ತಳಿಯ ತೆಂಗಿನ ಗಿಡಗಳು ಲಭ್ಯವಿದೆ.
ಮೇಲ್ಕಂಡ ಎಲ್ಲಾ ಗಿಡಗಳ ದರವು ಹಿಂದಿನ ಸಾಲಿನ ದರದಂತೆ ಇದ್ದು, ತೆಂಗು ಸಸಿಯ ದರವನ್ನು 75 ರೂ.ಗಳಿಗೆ ನಿಗಧಿಪಡಿಸಲಾಗಿದೆ. ಇಲಾಖೆಯ ದರಗಳನ್ವಯ ಮಾತ್ರ ಸಸಿ/ಕಸಿಗಳ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker