ಕೊರಟಗೆರೆ : ಜೂನ್ 6ರಂದು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಡಿಗಲ್ಲು : ಡಾ.ಜಿ.ಪರಮೇಶ್ವರ್
ಕೊರಟಗೆರೆ : ಜೂನ್ 6ರ ಸೋಮವಾರದಂದು ಪಟ್ಟಣದಲ್ಲಿ ಕಾಂಗ್ರೆಸ್ ಭವನ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ಹುನುಮಂತಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹತ್ತಿರ ನೂತನವಾಗಿ ನಿರ್ಮಾಣವಾಗುವ ಕಾಂಗ್ರೆಸ್ ಭವನದ ಅಡಿಗಲ್ಲು ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಕೊರಟಗೆರೆ ವಿಧಾನ ಸಭಾ ವ್ಯಾಪ್ತಿಗೆ ಕಾಂಗ್ರೆಸ್ ಪಕ್ಷದ ಸುಭದ್ರ ಭವನವನ್ನು ನಿರ್ಮಿಸಲು ಜೂನ್ 6 ಸೋಮವಾರ ಬೆಳ್ಳಿಗೆ 9-00 ಗಂಟೆಗೆ ಅಡಿಗಲ್ಲು ಹಾಕಿ ಪೂಜೆ ಸಲ್ಲಿಸಲಾಗುವುದು, ಈ ಭವನವು ಪ್ರತಿಯೋಬ್ಬ ಕಾರ್ಯಕರ್ತನ ಮುಖಂಡನ ಸಾರ್ವಜನಿಕರ ಭವನದಂತೆ ಭಾವನೆ ಮೂಡಬೇಕು, ಅದಕ್ಕಾಗಿ ಎಲ್ಲರೂ ತಮ್ಮ ಶಕ್ತಿ ಅನುಸಾರದೇಣಿಗೆ ನೀಡುತ್ತಿದ್ದಾರೆ,ಕಾಂಗ್ರೆಸ್ ಭವನವು ಪ್ರತಿಯೋಬ್ಬ ಕಾರ್ಯಕರ್ತನ ಶಕ್ತಿ ಕೇಂದ್ರವಾಗಬೇಕಿದ್ದು ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಕಾಂಗ್ರೆಸ್ ಪಕ್ಷದಕಾರ್ಯಕರ್ತರು ಮುಖಂಡರು ಸಾರ್ವಜನಿಕರು ಆಗಮಿಸುವಂತೆ ಕೋರಿದರು.
ಶಾಸಕರೊಂದಿಗೆ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ರಾಮಕೃಷ್ಣಪ್ಪ, ಬ್ಲಾಕ್‌ಕಾಂಗ್ರೆಸ್ ಅದ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವಥನಾರಾಯಣ, ಅರಕರೆಶಂಕರ್, ಮಾಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಮ್ಮ, ಕವಿತಾ, ಗ್ರಾ.ಪಂ. ಅದ್ಯಕ್ಷ ವಸಂತ್‌ಕುಮಾರ್, ಪ.ಪಂ. ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಂದೀಶ್, ಮಾಜಿ ಉಪಾದ್ಯಕ್ಷ ಕೆ.ವಿ.ಮಂಜುನಾಥ್ ಮುಖಂಡರುಗಳಾದ ಚಂದ್ರಶೇಖರಗೌಡ ಜಯರಾಮ್, ಗೋಂದಿಹಳ್ಳಿ ರಂಗರಾಜು,ಚಿಕ್ಕರಂಗಯ್ಯ, ಗಟ್ಲಹಳ್ಳಿಕುಮಾರ್,ಅರವಿಂದ್, ರವಿ,ಕಾರ್ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.