ಶಿರಾ

ಪ್ರಧಾನಿ ನರೇಂದ್ರಮೋದಿಯವರಿಂದ ಭ್ರಷ್ಟಾಚಾರ ಮುಕ್ತ ಆಡಳಿತ : ಶಾಸಕ ರಾಜೇಶ್ ಗೌಡ

ಶಿರಾ : ನರೇಂದ್ರಮೋದಿಯವರು ಪ್ರಧಾನ ಮಂತ್ರಿಯಾದ ನಂತರ ದೇಶಕ್ಕೆ ಭ್ರಷ್ಟಾಚಾರ ಮುಕ್ತ ಸುಭದ್ರ ಆಡಳಿತ ನೀಡಿದ್ದಾರೆ. ಕಟ್ಟಕಡೆಯ ಸಾಮಾನ್ಯ ಪ್ರಜೆಗೂ ಸರಕಾರದ ಯೋಜನೆ ತಲುವಂತೆ ಮಾಡಿದ್ದಾರೆ. ಭಾರತವನ್ನು ವಿಶ್ವಗುರುವಾಗುವ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್ ಸರಕಾರದ ಆಡಳಿದಲ್ಲಿದಲ್ಲಿ ಸಂಪೂರ್ಣ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಕೇವಲ ಕೌಟುಂಬಿಕ ರಾಜಕಾರಣ ಮಾಡುತ್ತಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟಾಚಾರಮುಕ್ತ ಮಾಡಿದ್ದಾರೆ. ದೇಶದ ಜನರ ನಾಡಿಮಿಡಿತವನ್ನು ಅರಿವು ಜನತೆಗೆ ಬೇಕಾದ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ಜಾರಿಗೆ ತಂದು ದೇಶದಲ್ಲಿ ಪ್ರತಿಯೊಬ್ಬರಿಗೂ ಮನೆ ನಿರ್ಮಿಸುವ ಪರಿಕಲ್ಪನೆ ಹೊಂದಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಎಂಬ ಮಹತ್ವದ ಯೋಜನೆ ತಂದು ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡಲು ಶುದ್ಧ ಅಡುಗೆ ಅನಿಲವನ್ನು ಒದಗಿಸುವ ಕಾರ್ಯ ಮಾಡಿದ್ದಾರೆ. ಯಾವುದೇ ಭದ್ರತಾ ಠೇವಣಿ ಇಲ್ಲದೆ ಬಿಪಿಎಲ್ ಕುಟುಂಬದವರು ಈ ಯೋಜನೆಯಿಂದ ಎಲ್‌ಪಿಜಿ ಪಡೆದಿದ್ದಾರೆ. ಪ್ರಧಾನಮಂತ್ರಿ ಜನ್‌ಧನ್ ಯೋಜನೆ ಘೊಷಿಸಿ ಈ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಬ್ಸೀಡಿ, ಪಿಂಚಣಿ ಹಾಗೂ ಕೋವಿಡ್ ಪರಿಹಾರದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಧನಸಹಾಯ ಯೋಜನೆ ಮೂಲಕ ಪ್ರತಿ ವರ್ಷ ಅರ್ಹ ಕೃಷಿಕರಿಗೆ ಆರು ಸಾವಿರ ರೂಗಳ ಗೌರವಧನವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಕೋಟ್ಯಾಂತರ ರೈತರಿಗೆ ಅನುಕೂಲವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ಕೋವಿಡ್ ಸೋಂಕಿಗೆ ತುತ್ತಾಗುವ ಬಡವರಿಗೆ ಧನಸಹಾಯ ನೀಡುವ ಕಾರ್ಯ ಮಾಡಿದ್ದಾರೆ. ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಪ್ರಥಮ ಹಂತದಲ್ಲಿ ತಾಲ್ಲೂಕಿನ 45 ಗ್ರಾಮಗಳು ಒಳಪಟ್ಟಿವೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಆರೋಗ್ಯಕರ ಭಾರತ ನಿರ್ಮಿಸಲು ಸರಕಾರಿ ಪ್ರಾಯೋಜಿತ ವಿಮಾ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ 5 ಲಕ್ಷ ರೂಪಾಯಿ ವಿಮಾ ಭದ್ರತೆ ಲಭ್ಯವಾಗುತ್ತಿದೆ. ಸ್ವಚ್ಛಭಾರತ್ ಮಿಷನ್ ಮೂಲಕ ದೇಶಾದ್ಯಂತ ತ್ಯಾಜ್ಯ ನಿರ್ಮೂಲನೆ ಶೌಚಾಲಯ ನಿರ್ಮಾಣದ ಗುರಿ ಮೂಲಕ. ದೇಶದ ಎಲ್ಲಾ ಗ್ರಾಮಗಳು ಬಯಲು ಶೌಚ ಮುಕ್ತ ಮಾಡುವ ಕಾರ್ಯ ಮಾಡಿದ್ದಾರೆ. ಅಂತರಾಷ್ಟಿçÃಯಮಟ್ಟದಲ್ಲೂ ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ಒಳ್ಳೆಯ ಗೌರವ ಹಾಗೂ ದೇಶಕ್ಕೂ ಗೌರವ ಸಿಗುವ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ಸ್ಮಾರಕ ಮಾಡಿದ್ದಾರೆ. ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಪ್ರಧಾನಮಂತ್ರಿಗಳ ಕೊಡುಗೆಯನ್ನು ಬಿಂಬಿಸುವ ಸ್ಮಾರಕವನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶವನ್ನು ಸುಭದ್ರವಾಗಿ ಕೊಂಡೊಯ್ದಿದ್ದಾರೆ. ಬೇರೆ ದೇಶಗಳು ಅಸ್ಥಿರತೆಯಿಂದ ಕೂಡಿವೆ. ಆದರೆ ಭಾರತದಲ್ಲಿ ಮೋದಿಯವರು ಸುಭದ್ರ ಆಡಳಿತ ನೀಡಿದ್ದಾರೆ. ಕಾಶ್ಮೀರದಲ್ಲೂ ಶಾಂತಿಯುತ ವಾತಾವರಣ ನಿರ್ಮಾಣ ಮಾಡಿದ್ದಾರೆ. ಲಕ್ಷಾಂತರ ಪ್ರವಾಸಿಗರು ಈಗ ಕಾಶ್ಮೀರಕ್ಕೆ ಪ್ರವಾಸ ಹೋಗುತ್ತಿದ್ದಾರೆ. ಇತಿಹಾಸದಲ್ಲಿ ಇಷ್ಟು ಜನ ಎಂದು ಹೋಗಿಲ್ಲ. ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ ಜನಪರ ಆಡಳಿತ ನೀಡಿ ಮಾದರಿಯಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker