ಜಿಲ್ಲೆತುಮಕೂರು

ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ಸರಕಾರಕ್ಕೆ ಒತ್ತಾಯ : ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ : ರಾಜ್ಯ ಅಧ್ಯಕ್ಷ ರಾಜಣ್ಣ

ತುಮಕೂರು: ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಪಟ್ಟಿಗೆ ಸೇರಿಸುವುದರ ಜೊತೆಗೆ,ಕೇಂದ್ರದಲ್ಲಿರುವ ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಬೇಕೆಂಬುದು ಸಮುದಾಯದ ಆಗ್ರಹವಾಗಿದೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಾಡುಗೊಲ್ಲರ ಸತತ ಹೋರಾಟದ ಫಲವಾಗಿ 2018ರಲ್ಲಿ ಅಂದಿನ ಸರಕಾರ ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಜಾತಿ ಪಟ್ಟಿಗೆ ಸೇರಿಸಿದೆ.ಅಲ್ಲದೆ ಇವರನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ಶಿಫಾರಸ್ಸನ್ನು ಕಳುಹಿಸಿದ್ದರು ಇದುವರೆಗೂ ಕೇಂದ್ರ ಸರಕಾರ ಇದುವರೆಗು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020ರ ಡಿಸೆಂಬರ್‌ನಲ್ಲಿ ಜಾರಿ ಮಾಡಿದ ಕಾಡುಗೊಲ್ಲ ಅಭಿವೃದ್ದಿ ನಿಗಮಕ್ಕೆ ಇದುವರೆಗೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ.ಉಪಚುನಾವಣೆ ಸಂದರ್ಭದಲ್ಲಿ ಅಭಿವೃದ್ದಿ ನಿಗಮ ಜಾರಿಗೆ ತಂದು ಜನಾಂಗದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.ಸರಕಾರ ಮುಂದಿನ 15 ದಿನಗಳ ಒಳಗೆ ಕಾಡುಗೊಲ್ಲರ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಬೇಕು ಹಾಗೂ ಸಮುದಾಯದವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟದ ಜೊತೆಗೆ,ಚುನಾವಣೆ ಬಹಿಷ್ಕಾರಕ್ಕೂ ಮುಂದಾಗುವುದಾಗಿ ಎಚ್ಚರಿಸಿದರು.

ರಾಜ್ಯದ ಚಿತ್ರದುರ್ಗ, ತುಮಕೂರು ಬಳ್ಳಾರಿ ಜಿಲ್ಲೆಗಳ 20ಕ್ಕು ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತಗಳು ನಿರ್ಣಾಯಕವಾಗಿದೆ. ಹೀಗಿದ್ದರೂ ಸಹ ಸರಕಾರ ನಮ್ಮನ್ನು ನಿರ್ಲಕ್ಷ ಮಾಡಿದೆ.ಕಳೆದ ಮೂವತ್ತೆöÊದು ವರ್ಷಗಳಿಂದ ಹೆಣ್ಣು ಮಕ್ಕಳಿಗಾಗಿ ಒಂದು ಪ್ರತ್ಯೇಕ ಹಾಸ್ಟಲ್ ನೀಡುವಂತೆ ಕೋರುತ್ತಿದ್ದರು. ಯಾವ ಸರಕಾರಗಳು ಗಮನಹರಿಸಿಲ್ಲ. ಹಾಗಾಗಿ ರಾಜ್ಯದ ಪ್ರತಿ ಕಾಡುಗೊಲ್ಲರ ಹಟ್ಟಿಗಳಿಗೆ ಪ್ರವಾಸ ಮಾಡಿ, ಅವರಿಗೆ ಅರಿವು ಮೂಡಿಸುವ ಮೂಲಕ ಜನರನ್ನು ಎಚ್ಚರಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಮಾಡಲಿದೆ ಎಂದು ರಾಜ್ಯಾಧ್ಯಕ್ಷ ರಾಜಣ್ಣ ನುಡಿದರು.
ರಾಜ್ಯದಲ್ಲಿರುವ ಒಬಿಸಿಗಳ ಜನಸಂಖ್ಯೆ ಬಗ್ಗೆ ಸರಕಾರಗಳಿಗೆ ದೊಡ್ಡ ಗೊಂದಲವಿದೆ.ಹಾಗಾಗಿ ಒಬಿಸಿಗಳಿಗೆ ರಾಜಕೀಯ ಮೀಸಲಾತಿ ಕೊಡುವ ನಿಟ್ಟಿನಲ್ಲಿ ತಡೆ ನೀಡಲಾಗಿದೆ. ಇದುವರೆಗೂ ಸ್ಥಳೀಯ ಸಂಸ್ಥೆಗಳ ಮೂಲಕ ರಾಜಕೀಯ ಅಧಿಕಾರ ಪಡೆಯುತ್ತಿದ್ದ ಈ ಸಮುದಾಯಕ್ಕೆ ಮೀಸಲಾತಿ ಎಂಬುದು ಮರೀಚಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಸರಕಾರ ಕೂಡಲೇ ನ್ಯಾಯವಾದಿ ಕಾಂತರಾಜು ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ, ಅಂಕಿ ಅಂಶಗಳ ಅನ್ವಯ ಮೀಸಲಾತಿಯನ್ನು ನೀಡಲು ಸುಪ್ರಿಂಕೋರ್ಟಿಗೆ ಸಲ್ಲಿಸುವಂತೆ ರಾಜಣ್ಣ ಒತ್ತಾಯಿಸಿದರು.
ಕಳೆದ 75 ವರ್ಷಗಳಲ್ಲಿ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳು ಕಾಡುಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಹುಸಿ ಭರವಸೆ ನೀಡುತ್ತಲೇ ಬಂದಿವೆ. ಆದರೆ ಯಾರು ಈ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿಲ್ಲ. ಜನಾಂಗದ ಶೇ99 ಜನ ಅವರ ಸ್ವಂತ ಜಮೀನಿನಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ.ಅಲ್ಲದೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ,ವಿದ್ಯುತ್ ದ್ವೀಪಗಳಿಂದ ವಂಚಿತರಾಗಿದ್ದಾರೆ.ಹಾಗಾಗಿ ಮೌಢ್ಯವೆಂಬುದು ಚಾಲ್ತಿಯಲ್ಲಿದೆ. ಇವುಗಳನ್ನು ಪರಿಹಾರ ಮಾಡಬೇಕಾದ ಸರಕಾರಗಳೇ ನಿರ್ಲಕ್ಷ ವಹಿಸಿರುವುದು ಖಂಡನೀಯ.ಸರಕಾರದ ಈ ಧೋರಣೆ ಹೀಗೆಯೇ ಮುಂದುವರೆದರೆ ಕಾಂಗ್ರೆಸ್ ಪಕ್ಷವನ್ನು ಕಾಡುಗೊಲ್ಲರು ತಿರಸ್ಕೃರಿಸಿದಂತೆ ಬಿಜೆಪಿಯನ್ನು ದೂರವಿಡುವ ಕಾಲ ಸನೀಯಹದಲ್ಲಿಯೇ ಬರಲಿದೆ ಎಂದು ಮುಖಂಡರ ಮೀಸೆ ಮಹದೇವ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಐಎಫ್.ಎಸ್ ಅಧಿಕಾರಿ ಚಿಕ್ಕಪ್ಪಯ್ಯ, ನಿವೃತ್ತ ಅಧಿಕಾರಿ ದೊಡ್ಡಯ್ಯ, ದೇವರಾಜು, ಬಸವರಾಜು, ಹೆಚ್.ಎಮ್.ಟಿ.ರಮೇಶ್,ಗಂಗಾಧರ್, ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker