ಜಕ್ಕೆನಹಳ್ಳಿ ಗ್ರಾಮದಲ್ಲಿ 3 ಕೋಟಿ 60 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ : ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ : ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಬಡವನಹಳ್ಳಿ ಹೋಬಳಿಯಲ್ಲಿ ಜಕ್ಕೆನಹಳ್ಳಿ ಗ್ರಾಮದಲ್ಲಿ 3 ಕೋಟಿ 60 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಡವನಹಳ್ಳಿ ಭಾಗದ ಜನರ ಹಿತ ಕಾಯಲು ಸದಾ ಬದ್ದನಾಗಿದ್ದು, ಈ ಭಾಗದ ಜನರ ಬಹು ದಿನದ ಬೇಡಿಕೆಯಂತೆ ಚುನಾವಣೆಯ ಸಂಧರ್ಭದಲ್ಲಿ ಸುಸಜ್ಜಿತ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದೇನು. ಅದರಂತೆ ಇಂದು 3.6 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಗುತ್ತಿಗೆದಾರರು ಉತ್ತಮ ಕಾಮಗಾರಿ ಮಾಡುತ್ತಾರೆ ಎಂಬ ನಂಬಿಕೆ ಇದ್ದು, ಶೀಘ್ರವಾಗಿ ಕಾಮಗಾರಿ ಮುಗಿಸಲಿ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಮುಖಂಡರುಗಳಾದ ತುಂಗೋಟಿ ರಾಮಣ್ಣ, ರವಿಕುಮಾರ್, ಬಾವಿಮನೆ ಕಾಂತರಾಜು, ಹನುಮಂತರಾಯಪ್ಪ, ವಿಶ್ವನಾಥ್, ಹಂಸರಾಜು,ನಾಗೇಶ್, ಗೋವಿಂದರೆಡ್ಡಿ, ರಾಜಾಲಕ್ಷ್ಮಮ್ಮ ಆನಂದ್, ಲೋಕೇಶ್, ನಾಗರಾಜು, ಪ್ರಶಾಂತ್, ನಟರಾಜು, ಆನಂದ್, ಲಕ್ಷ್ಮೀರಂಗನಾಥ್, ಜಗದೀಶ್, ರಂಗಶ್ಯಾಮಣ್ಣ, ಗುತ್ತಿಗೆದಾರ ನಾರಾಯಣಪ್ಪ, ಎಇಇ ರೇಣುಕಾ ಪ್ರಸಾದ್ ಹಾಗೂ ಮುಂತಾದವರು ಇದ್ದರು.