ಕೊರಟಗೆರೆಜಿಲ್ಲೆತುಮಕೂರು

ತಂತ್ರಜ್ಞಾನ ರೂಪಿಸುವಲ್ಲಿ ಭಾರತ ದೇಶ ಪ್ರಥಮ ಸ್ಥಾನದಲ್ಲಿದೆ : ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಕೊರಟಗೆರೆ : ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಅತಿಹೆಚ್ಚು ಪದವಿಧರರನ್ನು ಉತ್ಪತ್ತಿ ಮಾಡುತ್ತಿರುವ ದೇಶಗಳಲ್ಲಿ ಭಾರತ ದೇಶ ಪ್ರಥಮ ಸ್ಥಾನ ಪಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ಆವರಣದಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಸಮೂಹ ಸರಸ್ವತಿಪುರಂ ತುಮಕೂರು ಮತ್ತು ಬೆಂಗಳೂರು ಸಿರಿ ಅಕಾಡಮಿ ಸಂಯುಕ್ತಾಶ್ರಯದಲ್ಲಿ ಕೊರಟಗೆರೆ ತಾಲೂಕಿನ 2021-22 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಮುಗಿಸಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕರು ಹಾಗೂ ಶಿಕ್ಷಣಾಸಕ್ತರಾಗಿರುವ ಡಾ.ಜಿ.ಪರಮೇಶ್ವರ್ ರವರ ನೇತೃತ್ವದಲ್ಲಿ ಕೊರಟಗೆರೆ ಕ್ಷೇತ್ರದ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಪರಂ ವಿದ್ಯಾ ಯಾನ ಹೆಸರಿನಲ್ಲಿ 30 ದಿನಗಳ ಕಾಲ ಉಚಿತ ಸಿಇಟಿ/ಎನ್‌ಇಇಟಿ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದೇಶವನ್ನೆ ಬದಲಾವಣೆ ಮಾಡುವ ಶಿಕ್ಷಣ ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಿ ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಹಿನ್ನೆಲೆಯಲ್ಲಿ ನಗರಗಳಲ್ಲಿ ಸಾವಿರಾರು ರೂಪಾಯಿಗಳನ್ನು ನೀಡಿ ಸಿಇಟಿ/ಎನ್‌ಇಇಟಿ ಅಧ್ಯಯನ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವ ಪ್ರತಿಭಾವಂತ ವಿದ್ಯಾರ್ಥಿ ಗಳ ಕನಸು ನನಸು ಮಾಡುವ ದೃಷ್ಠಿ ಯಿಂದ ಉಚಿತ ಅಧ್ಯಯನ ತರಗತಿಗಳನ್ನು ಪ್ರತಿಭಾವಂತ ಹಾಗೂ ಹೆಸರು ಪಡೆದಿರುವ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಥಮ ಭಾರಿಗೆ ಪ್ರಾರಂಭಿಸುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.
ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಮರ್ಪಕ ಅರಿವಿಲ್ಲದೆ ಹಾಗೂ ಮಾರ್ಗದರ್ಶನವಿಲ್ಲದೆ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಿಂದ ವಂಚಿತರಾದಂತೆ ಉನ್ನತ ಪದವಿಯೊಂದಿಗೆ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ ಸಿಇಟಿ/ಎನ್‌ಇಇಟಿ ಅಧ್ಯಯನ ತರಗತಿಗಳನ್ನು ಉಚಿತವಾಗಿ ಪ್ರಾರಂಭಿಸಲಾಗಿದ್ದು ಪ್ರತಿವರ್ಷ ನಡೆಸಲಾಗುವುದು ಎಂದ ಅವರು ಹಿಂದೆ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಮಯದಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳು ಉನ್ನತ ಪದವಿ ಪಡೆಯುವ ದೃಷ್ಠಿಯಿಂದ ಪ್ರಥಮವಾಗಿ ಸಿಇಟಿ ಸ್ಪರ್ದಾ ಪರೀಕ್ಷೆ ಪ್ರಾರಂಭಿಸುವುದರೊಂದಿಗೆ ಗ್ರಾಮೀಣ ಕೃಪಾಂಕ ವ್ಯವಸ್ಥೆ ಹಾಗೂ ಕ್ರೀಡಾ ಪಟ್ಟುಗಳಿಗೆ ಮೀಸಲು ವ್ಯವಸ್ಥೆ ಜಾರಿಗೆ ತರುವುದರೊಂದಿಗೆ ಪ್ರಸ್ತುತ ದೇಶದಲ್ಲಿ ಏಕರೂಪದ ಎನ್‌ಇಇಟಿ ಸ್ಪರ್ದಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ ಎಂದ ಅವರು ತಂತ್ರಜ್ಞಾನದಲ್ಲಿ ಹೆಚ್ಚು ಸಾಮರ್ಥ್ಯ ಹೊಂದಿರುವ ದೇಶ ಭಾರತದೇಶವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಮಂದಿ ತಂತ್ರಜ್ಞಾನ ಪದವಿಧರರನ್ನು ಉತ್ಪತಿ ಮಾಡುತ್ತಿದ್ದು ಪ್ರಪಂಚದಲ್ಲೆ ತಂತ್ರಜ್ಞಾನ ರೂಪಿಸುವಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಸಮೂಹ ಸರಸ್ವತಿಪುರಂ ತುಮಕೂರು ಮತ್ತು ಬೆಂಗಳೂರು ಸಿರಿ ಅಕಾಡಮಿಯ ಪ್ರಾಜೆಕ್ಟ್ ಕೋಆಡಿನೇಟರ್ ಜಯಕುಮಾರ್ ಮಾತನಾಡಿ ಪ್ರಪಂಚದಲ್ಲಿ ಕಾರ್ಯನಿರ್ವಹಿಸುತಿರುವ ಮೇದಾವಿಗಳಲ್ಲಿ ಶೇ. 38 ರಷ್ಟು ಭಾರತದ ಮೇದಾವಿಗಳೇ ಇರುವುದು ಈ ಮೇದಾವಿಗಳಲ್ಲಿ ಗ್ರಾಮೀಣ ಭಾಗದಿಂದ ಬಂದವರೆ ಹೆಚ್ಚು ಮಂದಿಯಾಗಿರುವುದು ಇಂತ ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಮಪಕ ಮಾರ್ಗ ದರ್ಶನ ವಿಲ್ಲದೆ ಅವಕಾಶ ವಂಚಿತರಾಗಿ ಮೂಲೆ ಗುಂಪು ಸೇರುತ್ತಿದ್ದು ಇದನ್ನು ಮನಗೊಂಡ ಶಿಕ್ಷಣ ಭಗೀರತ ಡಾ.ಜಿ.ಪರಮೇಶ್ವರ್ ಪ್ರತಿಭಾವಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗದೆ ಉನ್ನದ ಪದವಿ ಪಡೆಯಲು ಉಚಿತ ಮಾರ್ಗದರ್ಶನ ದೊಂದಿಗೆ ಉಚಿತ ಸಿಇಟಿ/ಎನ್‌ಇಇಟಿ ಅಧ್ಯಯನ ಶಿಬಿರವನ್ನು ಪ್ರಾರಂಭಿಸಿದ್ದು ಗ್ರಾಮೀಣ ವಿದ್ಯಾರ್ಥಿಗಳು ಇದರ ಸುದುಪಯೋಗ ಪಡೆಯುವಂತೆ ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ವಾರಕ್ಕೆ 3 ದಿನಗಳ ಕಾಲ ಉಚಿತ ಸಿಇಟಿ/ಎನ್‌ಇಇಟಿ ಅಧ್ಯಯನ ಶಿಬಿರವನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಈ ಸಂದರ್ಭಧಲ್ಲಿ ಅಧ್ಯಯನ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ (ಸ್ಟಡಿ ಮೆಟೀರಿಯಲ್) ಪುಸ್ತಕಗಳನ್ನು ಬಿಡುಗಡೆಮಾಡಿ ವಿದ್ಯಾರ್ಥಿಗಳಿಗೆ ಡಾ.ಜಿ.ಪರಮೇಶ್ವರ್ ವಿತರಿಸಿದರು. ಕಾರ್ಯಕ್ರಮದಲ್ಲಿ ಸಿದ್ದರಾರ್ಥ ಸಿರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಿ.ಶಿವಪ್ರಸಾದ್, ವ್ಯವಸ್ಥಾಪಕರಾದ ವಿನಯ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಎನ್.ಆರ್.ನಾಗರಾಜು ಹೊಳವನಹಳ್ಳಿ ಸರ್ಕಾರಿ ಕಿರಿಯ ಕಾಲೇಜಿನ ಪ್ರಾಂಶುಪಾಲ ಈರಣ್ಣ, ಐ.ಕೆ.ಕಾಲೋನಿಯ ಜಯಣ್ಣ, ಚಿತ್ತಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್. ಸುಧಾಕರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರುದ್ರೇಶ್, ಪ.ಪಂ.ಸದಸ್ಯರಾದ ಎ.ಡಿ.ಬಲರಾಮಯ್ಯ, ಪುಟ್ಟನರಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಕಂರ್, ಮುಖಂಡರುಗಳಾದ ಚಂದ್ರಶೇಖರಗೌಡ, ರುದ್ರಪ್ರಸಾದ್, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕವಿತಾ, ಉಪನ್ಯಾಸಕರುಗಳಾದ ಉಮಾದೇವಿ, ಲಕ್ಷ್ಮೀದೇವಿ, ಸೇರಿದಂತೆ ಕಾಲೇಜುಗಳ ಉಪನ್ಯಾಸಕರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker