ಕೋಳಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಪವಿತ್ರ ಮುತ್ತುರಾಜು ಅವಿರೋಧ ಆಯ್ಕೆ
ಕೊರಟಗೆರೆ : ಕೋಳಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಪವಿತ್ರ ಮುತ್ತುರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೋಳಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನ ಬಿಸಿಎಂ ಮಹಿಳಾ ಸ್ಥಾನಕ್ಕೆ ಮೀಸಲಿದ್ದು ಈ ಹಿಂದಿನ ಉಪಾಧ್ಯಕ್ಷರು 15 ತಿಂಗಳ ಒಪ್ಪಂದದ ಮಾತುಕತೆ ಅನ್ವಯ ರಾಜೀನಾಮೆ ಸಲ್ಲಿಸಿದ ಬಳಿಕ ಪವಿತ್ರ ಮುತ್ತುರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯ 16 ಸದಸ್ಯರುಗಳ ಪೈಕಿ ಪವಿತ್ರ ಮುತ್ತುರಾಜು ಪರವಾಗಿ 12 ಸದಸ್ಯರುಗಳು ಒಟ್ಟಿಗೆ ಶಕ್ತಿ ಪ್ರದರ್ಶನ ಮಾಡಿ ಯಾರೊಬ್ಬರೂ ಅರ್ಜಿ ಸಲ್ಲಿಸದ ರೀತಿ ವಾತಾವರಣ ಸೃಷ್ಟಿಸಿ ಪವಿತ್ರ ಮುತ್ತುರಾಜು ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ಪವಿತ್ರ ಮುತ್ತುರಾಜು ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲಾ ಸದಸ್ಯರುಗಳನ್ನು ಗಣನೆಗೆ ತೆಗೆದುಕೊಂಡು ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಕರಿಯಪ್ಪ ಸದಸ್ಯರುಗಳಾದ ಶ್ರೀನಿವಾಸಮೂರ್ತಿ ಕೆ.ಜಿ, ಮಹೇಶ್ ನಾಯಕ್ ,ಜಗದಾಂಬ, ಹನುಮೇಶ್, ವಿಜಯಲಕ್ಷ್ಮಿ, ನರಸಿಂಹಮೂರ್ತಿ ,ಗಾಯತ್ರಿ, ಮಂಜುನಾಥ್, ನಾಗರಾಜು, ಚೌಡಪ್ಪ ,ಹನುಮಂತರಾಯಪ್ಪ, ಪುಷ್ಪ, ರಂಗಶಾಮಯ್ಯ, ಲಕ್ಷ್ಮಮ್ಮ ಚಿಕ್ಕರಾಮಯ್ಯ ಮತ್ತಿತರರು ಹಾಜರಿದ್ದರು.