ಚೈತನ್ಯ ಗ್ಯಾಸ್ಟ್ರೋ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರ ಪ್ರಾರಂಭ
ತುಮಕೂರು: ನಗರದ ಕೆ.ಆರ್. ಬಡಾವಣೆಯಲ್ಲಿ ನೂತನ ಚೈತನ್ಯ ಗ್ಯಾಸ್ಟ್ರೋ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಯಿತು.
ಬೆಳಿಗ್ಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪೂದಪೂಜೆ ನೆರವೇರಿಸಿದ ನಂತರ ಶ್ರೀಗಳು ಚೈತನ್ಯ ಗ್ಯಾಸ್ಟ್ರೋ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರವನ್ನು ಉದ್ಘಾಟಿಸಿದರು. ನಂತರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸ್ವಾಮೀಜಿಯವರು ಒಪಿಡಿ ಬ್ಲಾಕ್ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೀಪ ಬೆಳಗಿಸುವ ಮೂಲಕ ಚೈತನ್ಯ ಗ್ಯಾಸ್ಟ್ರೋ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರ ಅಡ್ವಾನ್ಸರ್ ವಿಡಿಯೋ ಎಂಡೋಸ್ಕೋಪಿ ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಡಾ. ನಿರ್ವಾಣಿರಾವ್ ಮತ್ತು ಡಾ. ಪ್ರಶಾಂತ್ ಅವರ ನೇತೃತ್ವದ ತಂಡ ಚೈತನ್ಯ ಗ್ಯಾಸ್ಟ್ರೋ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರ ರೋಗಿಗಳಿಗೆ ಉತ್ತಮ ಸೇವೆ ಒದಗಿಸುವ ಜತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಡಾ. ಬಿ.ಎನ್. ಪ್ರಶಾಂತ್, ಚೈತನ್ಯ ಚೈತನ್ಯ ಗ್ಯಾಸ್ಟ್ರೋ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರ ಕರುಳಿನ ಆರೈಕೆ ಮತ್ತು ಎಂಡೋಸ್ಕೋಪಿ ಕೇಂದ್ರದಲ್ಲಿ ಗ್ಯಾಸ್ಟಿçಕ್ ಸಮಸ್ಯೆ, ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಮಲ ಬದ್ಧತೆ, ರಕ್ತವಾಂತಿ, ಜಾಂಡೀಸ್, ಅನ್ನನಾಳ ಸೇರಿದಂತೆ ಜೀರ್ಣಾಂಗ ರೋಗಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಡಾ. ನಿರ್ವಾಣಿರಾವ್, ಮಾನಸಿ ಪ್ರಶಾಂತ್, ಮರಿಸ್ವಾಮಿ, ರುದ್ರೇಶ್, ಟಿ.ಆರ್. ಸದಾಶಿವಯ್ಯ, ಹೆಬ್ಬಾಕ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.