ಜಿಲ್ಲೆತುಮಕೂರು

ಅಲ್ಪಸಂಖ್ಯಾತರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು: ಮೇ 22 ರಂದು ಗಾಜಿನಮನೆಯಲ್ಲಿ ಬೃಹತ್ ಸಮಾವೇಶ : ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್

ತುಮಕೂರು: ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಮೇ.22
ರಂದು ಬೆಳಗ್ಗೆ 11 ಗಂಟೆಗೆ ಅಮಾನಿಕೆರೆಯ ಗಾಜಿನಮನೆಯಲ್ಲಿ ಅಲ್ಪಸಂಖ್ಯಾತರ ಬೃಹತ್
ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ
ಅತೀಕ್ ಅಹಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ ಒಂದು ವರ್ಷದ ಹಿಂದೆಯೇ ಈ ಸಮಾವೇಶ
ನಡೆಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು.ಕೋರೋನ ಹಿನ್ನೇಲೆಯಲ್ಲಿ ಜಿಲ್ಲಾಡಳಿತ
ಅನುಮತಿ ನೀಡಿರಲಿಲ್ಲ. ಹಾಗಾಗಿ ಪಕ್ಷದ ವರಿಷ್ಠರು ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ
ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಅನುಮತಿ ಪಡೆದು
ಮೇ.22 ರಂದು ಅಲ್ಪಸಂಖ್ಯಾತರ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 10 ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ
ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಯನ್,ಪಾರ್ಸಿ, ಜೈನ ಸಮುದಾಯದ ಮುಖಂಡರುಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್,ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ,ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್,ಜಿಲ್ಲಾ ಮುಖಂಡರಾದ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ,ಕೆ.ಎನ್.
ರಾಜಣ್ಣ, ಎಸ್.ಷಪಿಅಹಮದ್,ಡಾ.ರಫೀಕ್ ಅಹಮದ್, ಶಾಸಕರಾದ ಹ್ಯಾರೀಸ್,ರಿಜ್ವಾನ್
ಹರ್ಷದ್ ಸೇರಿದಂತೆ ಹಾಲಿ ಮತ್ತು ಮಾಜಿ ಶಾಸಕರುಗಳು ಮುಖಂಡರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಇತ್ತೀಚಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ಯಾವುದೇ ನೊ
ಟೀಸ್ ಇಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದರ ವಿರುದ್ದ ಸರಕಾರದ
ಮಟ್ಟದಲ್ಲಿ ದ್ವನಿ ಎತ್ತಲು ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಲಾಗುವುದು ಎಂದು ಅತೀಕ್
ಅಹಮದ್ ನುಡಿದರು.
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೇಟ್
ಅಲ್ಪಸಂಖ್ಯಾತರಿಗೆ ದೊರೆಯಲಿದೆ. ಪ್ರಸ್ತುತ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ನಾನು
ಹಾಗೂ ಇಕ್ಬಾಲ್ ಅಹಮದ್ ಸೇರಿ ಮೂವರು ಆಕಾಂಕ್ಷಿಗಳಾಗಿದ್ದೇವೆ.ಪಕ್ಷದ ಹೈಕಮಾಂಡ್
ಯಾರಿಗೆ ಟಿಕೇಟ್ ನೀಡುತ್ತದೆಯೋ ಅವರ ಪರವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದೇವೆ.
ಚುನಾವಣೆ ಪೂರ್ವದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ಅವರಲ್ಲಿ ಯಾರಿಗೆ ಗೆಲ್ಲುವ ಶಕ್ತಿ ಇದೆ
ಎಂದು ನೋಡಿಕೊಂಡು ಪಕ್ಷ ಟಿಕೇಟ ನೀಡಲಿದೆ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಈ ಹಿಂದೆ 2012ರಲ್ಲಿ ಕೆಪಿಸಿಸಿ
ಅಲ್ಪಸಂಖ್ಯಾತರ ಘಟಕದಿಂದ ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಆ ನಂತರ ಹಲವು ಸಂದರ್ಭದಲ್ಲಿ
ಮಾಡಬೇಕೆಂದರೂ ಕೋರೋನ ಮತ್ತಿತರ ತೊಂದರೆಗಳಿಂದ ಸಾಧ್ಯವಾಗಿರಲಿಲ್ಲ. ಮುಂಬರುವ
ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಸಮಾವೇಶ ಅತ್ಯಗತ್ಯ ಎಂದರು.
ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಸುಮಾರು 4
ಸಾವಿರ ಕೋಟಿ ರೂಗಳನ್ನು ಅನುದಾನವನ್ನು ಮೀಸಲಿರಿಸಿತ್ತು. ಇದರ ಫಲವಾಗಿ ಅರಿವು
ಯೋಜನೆಯ ಮೂಲಕ ಸಿಇಟಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ,ಉನ್ನತ
ವ್ಯಾಸಾಂಗಕ್ಕೆ ರಿಯಯಿತಿ ದರದಲ್ಲಿ ಕೆ.ಎಂ.ಡಿ.ಸಿ.ಮೂಲಕ ಸಾಲ ಸೌಲಭ್ಯ ಒದಗಿಸಲಾಗುತಿತ್ತು.
ಇದರಿಂದ ಉನ್ನತ ಶಿಕ್ಷಣಕ್ಕೆ ಹೋಗುವ ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತರ ಸಂಖ್ಯೆ 4 ಪಟ್ಟು
ಹೆಚ್ಚಾಗಿತ್ತು.ಆದರೆ ಪ್ರಸ್ತುತ ಬೊಮ್ಮಾಯಿ ಸರಕಾರ ಅರಿವು ಯೋಜನೆಯನ್ನು ಕಡಿತ ಮಾಡಿದೆ.
ಇದರಿಂದ ಮುಸ್ಲಿಂ ಬಡ ವಿದ್ಯಾರ್ಥಿಗಳ ಶಿಕ್ಷಣ ಸಂಪೂರ್ಣ ಕುಂಠಿತಗೊಂಡಿದೆ.ಈ ನಿಟ್ಟಿನಲ್ಲಿ
ಸರಕಾರದ ಮೇಲೆ ಒತ್ತಡದ ಜೊತೆಗೆ, ಕಾಂಗ್ರೆಸ್ ಪಕ್ಷದ ಪರವಾಗಿ ನಮ್ಮ ಬಲ ಪ್ರದರ್ಶನಕ್ಕೆ
ಮುಂದಾಗಿದ್ದೇವೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದರು.
ಸಮಾಜ ಸೇವಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,
ಮುಂಬರುವ ಚುನಾವಣೆಗೆ ಕಾರ್ಯಕರ್ತರಿಗೆ ಹುರುಪು ಮತ್ತು ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ
ಈ ಸಮಾವೇಶವನ್ನು ಆಯೋಜಿಸಲಾಗಿದೆ.ಇದು ಕಾಂಗ್ರೆಸ್ ಪಕ್ಷದ ಬಲವರ್ಧನೆಯ ಜೊತೆಗೆ,
ನಮ್ಮ ಒಗ್ಗಟ್ಟಿನ ಪ್ರದರ್ಶನವಾಗಿದೆ.ಅಲ್ಲದೆ ಇತ್ತೀಚಿನ ದಿನಗಳಲ್ಲಿ ಒಂದು ಸಮುದಾಯವನ್ನು
ಸರಕಾರದ ಸವಲತ್ತುಗಳಿಂದ ವಂಚಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕಾರ್ಯಗಳು
ಜರುಗುತ್ತಿದ್ದು, ಇವುಗಳ ಬಗ್ಗೆ ಸಮಾವೇಶದಲ್ಲಿ ಪ್ರಮುಖ ಚರ್ಚೆಯಾಗಲಿದೆ. ಹಾಗಾಗಿ ಈ
ಸಮಾವೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ
ಮಾಡಿದರು.
ಈ ವೇಳೆ ಪಾಲಿಕೆ ಸದಸ್ಯ ನಯಾಜ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker