ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದೇ ಅಮ್ ಆದ್ಮಿ ಪಕ್ಷದ ಗುರಿ : ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಚಂದ್ರ
ತುಮಕೂರು : ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದೇ ಅಮ್ ಆದ್ಮಿ ಪಕ್ಷದ ಗುರಿಯಾಗಿದ್ದು, ಇದಕ್ಕೆ ದೇಶದ ರಾಜ್ಯಧಾನಿ ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಆಡಳಿತವೇ ತಾಜಾ ಉದಾಹರಣೆ ಎಂದು ಎಎಪಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಚಂದ್ರ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಪಕ್ಷದವತಿಯಿಂದ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಎಪಿ ಪಕ್ಷ ಸೇರಿದ ಇತರೆ ಪಕ್ಷಗಳ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು,ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತಿದ್ದರು ಸಹ ದೆಹಲಿಯ ಎಎಪಿ ಸರಕಾರ ಜನರಿಗೆ 200 ಯುನಿಟ್ ಉಚಿತ ವಿದ್ಯುತ್,ಒಂದರಿಂದ ಪದವಿಯರೆಗೆ ಉಚಿತ ಶಿಕ್ಷಣ,ಹೆಣ್ಣು ಮಕ್ಕಳಿಗೆ ಮೆಟ್ರೋ ಮತ್ತು ಬಸ್‌ಗಳಲ್ಲಿ ಉಚಿತ ಸಂಚಾರ, ವಕೀಲರಿಗೆ ಉಚಿತ ಆರೋಗ್ಯ ಮತ್ತು ಜೀವವಿಮೆ ನೀಡಲಾಗುತ್ತಿದೆ. ದೆಹಲಿಗಿಂತ ಹೆಚ್ಚು ಅದಾಯ ಹೊಂದಿರುವ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲವೆಂದರೆ, ಇದಕ್ಕೆ ಮೂಲ ಕಾರಣವೇ ಭ್ರಷ್ಟಾಚಾರ. ಹಾಗಾಗಿ ಭ್ರಷ್ಟಾಚಾರ ರಹಿತ ಆಡಳಿತ ಅಮ್ ಆದ್ಮಿ ಪಕ್ಷದ ಮೊದಲು ಅದ್ಯತೆಯಾಗಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ವೆಂಕಟೇಶ್ ಮಾತನಾಡಿ, ಇಂದಿನ ಪತ್ರಿಕೆಗಳಲ್ಲಿ ಸರಕಾರದ ಯಾವ ಯಾವ ಹುದ್ದೆಗಳಿಗೆ ಎಷ್ಟು ಹಣವನ್ನು ಲಂಚವಾಗಿ ಪಡೆಯುತ್ತಿದೆ ಎಂಬುದು ಪ್ರಕಟವಾಗಿದೆ.ಅಲ್ಲದೆ ಸ್ವತಹಃ ಬಿಜೆಪಿ ಪಕ್ಷದ ಮುಖಂಡರೇ 2500 ಕೋಟಿ ರೂ ಕೊಡಲು ಒಪ್ಪಿದ್ದರೆ ನಾನು ಸಹ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಹೇಳಿರುವುದನ್ನು ನೋಡಿದರೆ,ಈ ಸರಕಾರದಲ್ಲಿ ಭ್ರಷ್ಟಾಚಾರವೆಂಬುದು ಪಂಚಾಯಿತಿಯಿಂದ ವಿಧಾನಸಭೆಯವರಗೆ ಹಾಸು ಹೋಕ್ಕಾಗಿದೆ. ಇಂತಹ ಸರಕಾರ ನಮಗೆ ಅಗತ್ಯವಿದೆ ಎಂಬುದನ್ನು ಜನರು ತೀರ್ಮಾನಿಸಬೇಕಿದೆ ಎಂದರು.
ಎಎಪಿಯ ತುಮಕೂರು ಜಿಲ್ಲಾ ಉಸ್ತುವಾರಿ ಡಾ.ವಿಶ್ವನಾಥ್ ಮಾತನಾಡಿ, ತುಮಕೂರು ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಪಕ್ಷದ ಸದಸ್ಯರಾಗಿ ತಮ್ಮ ಹೆಸರು ನೊಂದಾಯಿಸಿದ್ದಾರೆ.ಇವರಲ್ಲಿ ಬಹುತೇಕರು ಬೇರೆ ಬೇರೆ ಪಕ್ಷದಿಂದ ಬಂದವರೇ ಆಗಿದ್ದಾರೆ.ಮುಂಬುರುವ 2023ರ ಚುನಾವಣೆಯಲ್ಲಿ ಪಕ್ಷದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ.ಭ್ರಷ್ಟಾಚಾರ ಮುಕ್ತ, ಜನಸ್ನೇಹಿ ಆಡಳಿತಕ್ಕೆ ಜನರು ಮತ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಇಂದು ಎಎಪಿ ಸೇರಿದ ವಕೀಲ ಮಹಾವೀರ ಜೈನ್ ಮಾತನಾಡಿ,ಅಮ್ ಆದ್ಮಿ ಪಕ್ಷದ ಕಳೆದ 10 ವರ್ಷಗಳ ಆಡಳಿತವನ್ನು ಗಮನಸಿದ್ದು, ಅಂಬೇಡ್ಕರ್ ಅವರ ಆಶಯಕ್ಕೆ ಅನುಗುಣವಾಗಿ ಪಕ್ಷದ ಸರ್ವರಿಗು ಸಮಪಾಲು, ಸರ್ವರಿಗು ಸಮಬಾಳು ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರಕಾರ ಸವಲತ್ತುಗಳು ಜನರಿಗೆ ತಲುಪಿಸುವಲ್ಲಿ ಯಾವುದೇ ಮದ್ಯವರ್ತಿಗಳ ಹಾವಳಿ ಇಲ್ಲದಂತೆ ನೋಡಿಕೊಂಡಿದೆ.ಹಾಗಾಗಿ ಜನಸಾಮಾನ್ಯರು ಬದಕು ಹಸನಾಗಿದೆ.ಹಾಗಾಗಿ ಅಲ್ಲಿಯ ಜನತೆ ಎಎಪಿಗೆ ಮತ ನೀಡಿ ಆಡಳಿತ ನಡೆಸಲು ಅವಕಾಶ ಕಲಿಸಿದ್ದಾರೆ ಎಂದರು.
ಇದೇ ವೇಳೆ ವಕೀಲರಾದ ಮಹಾವೀರ ಜೈನ್,ಹೆಚ್.ಎಲ್.ವಸಂತಕುಮಾರ್,ರಾಮುಜೀ, ಅಮೃತ, ಜಯಸಿಂಹ, ಜಿ.ಎಸ್.ಬಸವರಾಜು, ನರಸಿಂಹಯ್ಯ, ಲಕ್ಷ್ಮೀದೇವಮ್ಮ, ಅಂಜನಾದ್ರಿ, ನೇತ್ರ, ರಮ್ಯ, ಆಶೀಫ್ ಮತ್ತು ಕಿರಿಣ್‌ಕುಮಾರ್ ಅವರುಗಳು,ಎಎಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಚಂದ್ರ ಅವರ ಸಮ್ಮುಖದಲ್ಲಿ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಡಾ.ವಿಶ್ವನಾಥ್,ಕೋಲಾರ ಮಾಜಿ ಸಂಸದ ವೆಂಕಟೇಶ್,ತುಮಕೂರು ಜಿಲ್ಲಾ ಎಎಪಿ ಉಪಾಧ್ಯಕ್ಷ ಉಮರ್ ಫಾರೂಕ್,ಪ್ರಧಾನ ಕಾರ್ಯದರ್ಶಿ ಡಾ.ನಿಜಾಮುದ್ದೀನ್,ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಷೀದ್ ಅಹಮದ್,ಪೊಲಿಕಟಲ್ ಅಡ್ವೈಜರ್ ಕಮಿಟಿ ಪ್ರಭುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.