ಚಿಕ್ಕನಾಯಕನಹಳ್ಳಿಬ್ರೇಕಿಂಗ್ ಸುದ್ದಿ

ಗಾರ್ಮೆಂಟ್ಸ್ ಬಸ್ ಅಪಘಾತ 12 ಮಂದಿಗೆ ಗಾಯ : ಕೂದಳೆಲೆಯಲ್ಲಿ ತಪ್ಪಿದ ಭಾರೀ ಅನಾಹುತ

ಚಿಕ್ಕನಾಯಕನಹಳ್ಳಿ : ತಿಪಟೂರಿನ ಜಾಕಿ ಗಾರ್ಮೆಂಟ್ಸ್ ಪ್ಯಾಕ್ಟರಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಚಾಲಕನ ನಿಯಂತ್ರಣ ತಪ್ಪಿ ಬಾಚಿಹಳ್ಳಿ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದ ಕಾರಣ 12 ಮಂದಿಗೆ ಗಾಯಗಳಾದ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ್ದು ಈ ಘಟನೆಯಿಂದ ಯಾವುದೇ ಸಾವು ಸಂಭವಿಸಿಲ್ಲ,
ತಾಲ್ಲೂಕಿನ ಚಿಕ್ಕನಾಯಕನಹಳ್ಳಿ- ತಿಪಟೂರು ರಸ್ತೆಯ ಮಾರ್ಗದಲ್ಲಿ ಪ್ರತಿನಿತ್ಯದಂತೆ ಚಿಕ್ಕನಾಯಕನಹಳ್ಳಿ ಪಟ್ಟಣವೂ ಸೇರಿದಂತೆ ದಿಬ್ಬದಹಳ್ಳಿ, ಬಾವನಹಳ್ಳಿ,ದುಗುಡಿಹಳ್ಳಿ ಮುಂತಾದ ಸುತ್ತಮುತ್ತಲಿನ ಗ್ರಾಮಗಳಿಂದ ತಿಪಟೂರಿನ ಜಾಕಿ ಗಾರ್ಮೆಟ್ಸ್ ಫ್ಯಾಕ್ಟರಿಗೆ ಶಿಷ್ಟ್ನಂತೆ ಕರೆದ್ಯೋಯುತ್ತಿದ್ದ ಮುಂಜಾನೆ 05 : 30 ರ ಸಮಯದಲ್ಲಿ ಶ್ರೀ ವಿನಾಯಕ ಮಿನಿ ಬಸ್ಸು ಚಾಲಕ ಸೇರಿ, 9 ಜನ ಮಹಿಳಾ, 2 ಪುರುಷ ಕಾರ್ಮಿಕರಿದ್ದ ವಾಹನವು ಶೆಟ್ಟಿಕೆರೆ ಹೋಬಳಿ ವ್ಯಾಪ್ತಿಯ ಬಾಚೀಹಳ್ಳಿ ಗ್ರಾಮದ ಸಮೀಪ ರಸ್ತೆ ತಿರುವಿನಲ್ಲಿ ಬಸ್ಸು ಚಾಲಕನ ಅಜಾಗರುಕತೆಯಿಂದ ನಿಯಂತ್ರಣ ತಪ್ಪಿ ತಿರುವಿನಲ್ಲಿನ ಮರಕ್ಕೆ ಡಿಕ್ಕಿ ಹೊಡೆದ ರಬಸಕ್ಕೆ ಹಳ್ಳಕ್ಕೆ ಪಲ್ಟಿಹೊಡೆದು ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಚಾಲಕನೂ ಸೇರಿದಂತೆ ವಾಹನದಲ್ಲಿದ್ದ ಎಲ್ಲಾ 12 ಮಂದಿಗೆ ಅಪಘಾತಕ್ಕೀಡಾಗಿ ಬಸ್ಸಿನೊಳಗೆ ಸಿಲುಕಿ ಪೆಟ್ಟು ಬಿದ್ದು ತಮ್ಮ ಪ್ರಾಣ ಉಳಿಸಿಕೊಳ್ಳಲು ರಕ್ಷಣೆಗೆ ಕೂಗಾಡುತ್ತಿದ್ದ ಶಬ್ದಕ್ಕೆ ಬಾಚೀಹಳ್ಳಿ ಸ್ಥಳೀಯರು ಧಾವಿಸಿ ತುರ್ತು ಕರೆಗೆ ಮಾಹಿತಿಯಿಂದ ಸ್ಥಳಕ್ಕೆ ತಕ್ಷಣವೇ ಬೇಟಿ ನೀಡಿದ ಚಿಕ್ಕನಾಯಕನಹಳ್ಳಿ ಸಿ.ಪಿ.ಐ ವಿ ನಿರ್ಮಲ, ಹಾಗೂ ಪಿ ಎಸ್ ಐ ಗಣೇಶ್, ಪೊಲೀಸ್ ಸಿಬ್ಬಂದಿ ತಂಡ ರಕ್ಷಣೆಗೆ ಧಾವಿಸಿ ಬಸ್ಸಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಹೊರತೆಗೆದು ತಕ್ಷಣ ಗಾಯಾಳುಗಳನ್ನು ಚಿಕ್ಕನಾಯಕನಹಳ್ಳಿಯ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು ಒಟ್ಟು 11 ಜನ ಪ್ರಾಥಮಿಕ ಚಿಕಿತ್ಸೆಯ ನಂತರ ತಲೆ,ಮುಖ,ಭುಜ, ಕೈ.ಕಾಲುಗಳಿಗೆ ಪೆಟ್ಟು ಬಿದ್ದ 04 ಜನ ಹಾಗೂ5 ಜನರ ಮೂಳೆ ಮುರಿತಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪçತೆಗೆ ಕಳುಹಿಸಲಾಗಿದ್ದು, ಇನ್ನುಳಿದ ಇಬ್ಬರು ಸ್ವಯಂ ಪ್ರೇರಿತರಾಗಿ ತಿಪಟೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯಲು ತೆರೆಳಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಗಾಯಗೊಂಡ ಚಾಲಕ ನಾಪತ್ತೆಯಾಗಿದ್ದಾನೆ.
ಈ ಸಂಬಂದ್ದ ಅವಘಡಕ್ಕಿದಾಗ ಬಸ್ಸನ್ನು ಕ್ರೈನ್ ಮೂಲಕ ಹೊರ ತೆಗೆದು ಠಾಣೆಗೆ ವಶಕ್ಕೆ ಪಡೆದಿದ್ದು, ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪಿ.ಎಸೈ ಗಣೇಶ್ ರವರು ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕ ಟ್ಯಾಕ್ಸಿ ಆಸೋಷಿಯೆಷನ್ ರಾಜ್ಯ ಜಂಟಿ ಕಾರ್ಯದರ್ಶಿ ಮೊಹಮ್ಮದ್ ಹುಸೇನ್ ಗುಂಡ ಮಾತನಾಡಿ ದುಗಡಿಹಳ್ಳಿ ಮತ್ತು ಬಾಚೀಹಳ್ಳಿ ತಿರುವುಗಳಲ್ಲಿ ಪದೇ ಪದೇ ಇದೇ ಸ್ಥಳದಲ್ಲಿ ಬೈಕ್, ಕಾರು, ಬಸ್ಸು ಲಾರಿಗಳು ಅಪಘಾತಕ್ಕೀಡಾಗುತ್ತಿದ್ದು ಈ ಜಾಗವೂ ಪೊಲೀಸ್ ಇಲಾಖೆಯಿಂದ ಬ್ಲಾಕ್ ಸ್ಪಾಟ್ ಎಂದು ಗುರುತಿಸಿದ್ದು ಸಹ ಪಿಡ್ಲಬ್ಯೂ ಇಲಾಖೆ ನಿರ್ಲಕ್ಯದಿಂದ ರಸ್ತೆಯ ಇಕ್ಕೆಲಗಳಲ್ಲಿ ಜಂಗಲ್ ಬೆಳೆದಿದ್ದು ಎದುರಿಗೆ ಬರುವ ವಾಹನ ಸವಾರರಿಗೆ ಕಾಣಿಸುವುದಿಲ್ಲ, ಹಾಗೂ ಮುಂಜಾಗರುಕ ಸೂಚನ ಫಲಕ ಹಾಗೂ ರಸ್ತೆ ಉಬ್ಬುಗಳನ್ನು ಮಾಡದೇ ಇರುವುದರಿಂದ ಸುಮಾರು 2019 ರಿಂದ 2022 ರವರೆಗೆ 08 ಜನರು ಅಪಘಾತಕ್ಕಿಡಾಗಿ ಮೃತಮಟ್ಟಿರುವುದೇ ಸಾಕ್ಷಿ . ವಾಹನ ಸವಾರರ ಜೀವ ಉಳಿಸಲು ರಾತ್ರಿ ರಿಪ್ಲೆಟ್ಕಿವ್ ಲೈಟ್ ಹಾಗೂ ರಸ್ತೆ ಉಬ್ಬುಗಳನ್ನು , ಹಾಗೂ ತಡೆಗೋಡೆಯನ್ನು ಶೀಘ್ರವೇ ಮಾಡಿಸಿ, ಹಾಗೂ ಇದೇ ರೀತಿ ಕೆ.ಬಿ.ಕ್ರಾಸ್ ರಸ್ತೆಯಲ್ಲಿ ಹತ್ಯಾಳ್‌ಗೇಟ್ ಮ್ಯಾಫ್ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುವ ಆಟೋ, ವೈಟ್ ಬೋರ್ಡ ಟ್ಯಾಕ್ಸಿಗಳಲ್ಲಿ ಸೀಟ್ ನ ಮೀತಿ ಮೀರಿ ಜನರನ್ನ ಕರೆದುಕೊಂಡು ಹೋಗುತ್ತಿದ್ದು ಮುಂದೆ ಆಗಬಹುದಾದ ಅನಾವುತ ತಪ್ಪಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ .

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker