ಬೆಮೆಲ್ ಕಾಂತರಾಜ್ ಹಠಾವೋ,ತುರುವೇಕೆರೆ ಕಾಂಗ್ರೇಸ್ ಬಚಾವೋ : ಚೌದ್ರಿರಂಗಪ್ಪ
ತುರುವೇಕೆರೆ : ಮುಂಬರುವ 2023 ರ ಚುನಾವಣೆಯಲ್ಲಿ ಸ್ಥಳೀಯ ಮುಖಂಡರುಗಳಿಗೆ ಅವಕಾಶ ನೀಡಿ, ಹೊರಗಿನವರಾದ ನೆಲಮಂಗಲದ ಬೆಮೆಲ್ ಕಾಂತರಾಜ್ ಅವರಿಗೆ ಹೈ ಕಮಾಂಡ್ ಟೀಕೆಟ್ ನೀಡಬಾರದು ಎಂದು ಪರಾಜಿತ ಅಭ್ಯರ್ಥಿ ಚೌದ್ರಿರಂಗಪ್ಪ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ತುರುವೆಕೆರೆಯಲ್ಲಿ ಹೊರಗಿನವರು ಸ್ಪರ್ದಿಸಿ ಗೆದ್ದಿರುವ ಉದಾಹರಣೆಯಿಲ್ಲ, ಮಾಜಿ ಪ್ರಧಾನಿ ದೇವೇಗೌಡರು ಹೊರಗಿನವರೆಂಬ ಕಾರಣಕ್ಕೆ ಸೋಲುಂಡ ಉದಾಹರಣೆಯಿದೆ. ಕಾಂತರಾಜ್ ಸ್ಪರ್ದಿಸಿದರೇ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರು ಹಾಗೂ ಡಾ.ಜಿ.ಪರಮೇಶ್ವರ್ ಅವರುಗಳು ಅರಿಯಬೇಕಿದೆ.ಬೆಮೆಲ್ ಟಿಕೆಟ್ ನನ್ನದೇ ಎಂದು ಹೇಳುವುದು ಮುಂದುವರೆದರೇ ಪಕ್ಷದ ಉಳಿವಿಗಾಗಿ ಕಾಂತರಾಜ್ ಹಠಾವೋ ಕಾಂಗ್ರೇಸ್ ಬಚಾವೋ ಎಂದು ಸ್ಥಳೀಯರು ಬೀದಿಗಿಳಿಯಬೇಕಾದೀತು ಎಂದು ಎಚ್ಚರಿಸಿದರು.
ಈ ಹಿಂದೆ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿ ಗೆದ್ದಿದ್ದ ಜಗ್ಗೇಶ್ ಬಿ.ಜೆ.ಪಿ. ಸೇರ್ಪಡೆಗೊಂಡು ಕಾಂಗ್ರೇಸ್ ನಾಮಾವಶೇಷ ಮಾಡಿದ್ದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಜಿಲ್ಲಾ ನಾಯಕರುಗಳು ವಾಸ್ತವತೆ ಅರಿಯಲಿ, ಎಂದ ಅವರು ಗುಬ್ಬಿ ಕ್ಷೇತ್ರ ಶಾಸಕ ವಾಸು ತಮ್ಮ ಕ್ಷೇತ್ರದ ರಾಜಕೀಯಕ್ಕೆ ಸೀಮಿತವಾಗದೇ ತುರುವೇಕೆರೆ ಕ್ಷೇತ್ರದ ರಾಜಕೀಯಕ್ಕೆ ಮೂಗು ತೂರಿಸುವುದು ಅವರ ಘನತೆಗೆ ತಕ್ಕುದಲ್ಲ ಎಂದು ಕಿಡಿಕಾರಿದರು.
ಬಿ.ಎಸ್. ವಸಂತಕುಮಾರ್ ಮಾತನಾಡಿ ಬೆಮೆಲ್ ಕಾಂತರಾಜ್ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರಾಗಿ ಸೇರ್ಪಡೆಗೊಂಡರೋ, ಅಭ್ಯರ್ಥಿಯಗಿ ಸೆರ್ಪಡೆಗೊಂಡಿದ್ದಾರೋ ಅರ್ಥವಾಗುತ್ತಿಲ್ಲ. ಸ್ಥಳೀಯರಲ್ಲದ ಬೆಮೆಲ್ ಟಿಕೇಟ್ ನನ್ನದೇ ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು, ನೆಲಮಂಗಲದಲ್ಲಿ ಸಭೆ ಕರೆದು ಪಕ್ಷ ಸಂಘಟಿಸುತ್ತೆನೆಂಬ ಭ್ರಮೆಯಲ್ಲಿರುವ ಕಾಂತರಾಜ್‌ರಿಂದ ಪಕ್ಷದ ಉಳಿವು ಸಾದ್ಯವಿಲ್ಲ ಎಂದರು.
ಸುಬ್ರಹ್ಮಣ್ಯ ಶ್ರೀಕಂಠೇಗೌಡ ಮಾತನಾಡಿ ಪರಾಜಿತ ಅಭ್ಯರ್ಥಿ ಚೌದ್ರಿರಂಗಪ್ಪನವರೇ ಮುಂದಿನ ಚುನಾವಣೆಯ ಅಧಿಕೃತ ಅಭ್ಯರ್ಥಿ ಘೋಷಣೆಯಾಗುವರೆಗೂ ನಮ್ಮ ನಾಯಕರು, ಹೈ ಕಮಾಂಡ್ ಹೊರಗಿನವರಾದ ಬೆಮೆಲ್ ಕಾಂತರಾಜ್‌ಗೆ ಟಿಕೇಟ್ ನೀಡಕೂಡದು, ಸ್ಥಳೀಯರಾದ ಯಾರಿಗಾದರೂ ಹೈ ಕಮಾಂಡ್ ಟಿಕೆಟ್ ನೀಡಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವ್ನನು ಉಳಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ನಾರಾಯಣಗೌಡ, ಗುಡ್ಡೇನಹಳ್ಳಿ ಮಂಜುನಾಥ್, ರೇಣುಕಾರಾಧ್ಯ, ಯುವಕಾಂಗ್ರೇಸ್ ಅದ್ಯಕ್ಷರುಗಳಾದ ವಿನಯ್, ಗುರುರಾಜ್, ಮಹೇಂದ್ರ, ಸ್ವರ್ಣಕುಮಾರ್, ಕೀರ್ತಿ, ಸುನಿಲ್, ರಾಜಕುಮಾರ್, ಸೇರಿದಂತೆ ಅನೇಕರಿದ್ದರು.