ತುಮಕೂರು : ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಸಂಯುಕ್ತವಾಗಿ ಮೇ.1ರಂದು ಬುದ್ಧ,ಬಸವ,ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ನಿಷ್ಕಲ ಮಠದ ಶ್ರೀನಿಜಗುಣಾನಂದ ಸ್ವಾಮೀಜಿ ಅವರ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಏಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ಈ ಪ್ರವಚನ ನಡೆಯುತ್ತಿದ್ದು,ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಿರುವ ಬೈಲಹೊಂಗಲದ ನಿಷ್ಕಲ ಮಠದ ಶ್ರೀನಿಜಗುಣಾನಂದ ಮಹಾಸ್ವಾಮೀಜಿಗಳಿಂದ ಅಂಬೇಡ್ಕರ್ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಈ ಕಾರ್ಯಕ್ರಮ ಏರ್ಪಡಿಸಿವೆ.
ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಭಾರತದ ಜನತೆಗೆ ಬುದ್ಧ,ಬಸವ, ಅಂಬೇಡ್ಕರ್ ಅವರ ಪರಿಚಯ ಮಾಡಿಸಬೇಕಿದೆ, ಇಡೀ ಭಾರತಕ್ಕೆ ಸೌಹಾರ್ದತೆ ಮತ್ತು ಸಹೋದರತ್ವವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ, ಇತರರನ್ನು ತನ್ನವರಂತೆ ಭಾವಿಸು ಎನ್ನುವ ಬಸವಣ್ಣ ಹಾಗೂ ಸಂವಿಧಾನದ ಮೂಲಕ ಸಮಾನತೆಯ ತತ್ವ ಪಾಲಿಸಿದ ಅಂಬೇಡ್ಕರ್ ಈ ದೇಶದ ಮಹಾನ್ ಮಾನವತವಾದಿಗಳು ಹಾಗಾಗಿ ಧರ್ಮ, ಧರ್ಮಗಳ ನಡುವೆ ಜಾತಿ ಬಟ್ಟೆ ಆಹಾರ, ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿರುವ ಮೇಲಾಟ ಹಾಗೂ ಅದರಿಂದ ಸಂತ್ರಸ್ಥರಾಗುತ್ತಿರುವ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳಿಗೆ ಜೀವಚೈತನ್ಯ ನೀಡುವ ನಿಟ್ಟಿನಲ್ಲಿ ಈ ಪ್ರವಚನ ಆಯೋಜಿಸಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪ್ರವಚನ ಕೇಳಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆಯೋಜಕರುಗಳು ಮನವಿ ಮಾಡಿದ್ದಾರೆ.