
ಶಿರಾ : ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ ಶ್ರೀ ನಂಜಾವಧೂತ ಮಹಾಸ್ವಾಮಿಜಿಗಳು ತಮ್ಮ ಜನ್ಮದಿನವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶವು 25ರ ಸಂಭ್ರಮದಲ್ಲಿದೆ.
ಹಕ್ಕೊತ್ತಾಯ ದಿನದ ಹಿಂದಿನ ಕಥೆ ಅದು1998 ನೇ ಇಸವಿ ತುಮಕೂರು ಜಿಲ್ಲೆ ಮತ್ತು ಶಿರಾ ತಾಲೂಕಿನಲ್ಲಿ ಮಳೆಯ ಪ್ರಮಾಣ ದಿನೇದಿನೆ ಕ್ಷೀಣಿಸುತ್ತಾ ರೈತರು ಯಾವ ಸಹಾಯದಿಂದ ವಿಮುಖರಾಗುತ್ತಿದ್ದ ಸಮಯ ಅಲ್ಲದೆ ಕುಡಿಯುವ ನೀರನ್ನು ಕೂಡ ಆಳಕ್ಕೆ ಕೊಳವೆ ಬಾವಿ ಕೊರೆಯಲು ಶುರುವಾಗುತ್ತಿದ್ದ ಸಮಯದಲ್ಲಿ ರೈತರಿಗೆ ಭರವಸೆಯ ಬೆಳಕಿನ ಕಿಂ ಡಿಯಂತೆ ಪಟ್ಟನಾಯಕನಹಳ್ಳಿ ಶ್ರೀ ಮಠದ ಪೀಠಾಧ್ಯಕ್ಷ ರಾಗಿದ್ದ ಶ್ರೀ ನಂಜಾವಧೂತ ಸ್ವಾಮೀಜಿ ಯವರು ಇನ್ನು ಮುಂದೆ ನನ್ನ ಜನ್ಮ ದಿನವನ್ನು ನೀರಾವರಿ ವಿಷಯಕ್ಕೆ ಸಮರ್ಪಿಸಿ ಇಡೀ ಮಧ್ಯ ಕರ್ನಾಟಕವು ಶಾಶ್ವತ ನೀರಾವರಿ ಪ್ರದೇಶವನ್ನಾಗಿಸುವ ಸಂಕಲ್ಪ ಮಾಡಿದಾಗ ಇಡೀ ಭಕ್ತಸಮೂಹ ಇದು ಸಾಧ್ಯವಾಗುವ ಮಾತಲ್ಲ ಸ್ವಾಮೀಜಿಗಳು ಚಿಕ್ಕವಯಸ್ಸಿನಲ್ಲಿ ಇಂತಹ ಹೋರಾಟದ ಹಾದಿ ಬೇಕಿಲ್ಲ ಎಂಬ ಮಾತುಗಳನ್ನಾಡಿದಗ ಸ್ವಾಮೀಜಿ ಮುಗುಳ್ನಗೆಯ ಉತ್ತರ ಕೊಟ್ಟರು.
ಅಂದಿನಿಂದ ಪ್ರಾರಂಭವಾದ ಸ್ವಾಮೀಜಿಗಳ ನೀರಾವರಿ ಹೋರಾಟ ಎರಡು ದಶಕಗಳಿಂದ ಮಾಡಿದ ಚಮತ್ಕಾರ ಒಂದೆರಡಲ್ಲ ಎಲ್ಲವೂ ಸಾಧ್ಯ ವರ್ಷದ ಕೆಲಸಗಳನ್ನು ಸಾಧ್ಯವಾಗಿಸಿದ ದಿವ್ಯಶಕ್ತಿ ನಂಜಾವಧೂತ ಶ್ರೀ ಗಳದ್ದು, ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಜನ ಮತ್ತು ಜಾನುವಾರುಗಳಿಗೆ ಕೊಡುವ ಇಚ್ಚಾಶಕ್ತಿ ನಮ್ಮನ್ನು ಆಳುವ ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಏಕಿಲ್ಲ ಎಂಬ ಪ್ರಶ್ನೆ ಎತ್ತಿದ ಸ್ವಾಮೀಜಿಗಳಿಗೆ ನಕಾರಾತ್ಮಕ ಉತ್ತರ ಮೊದಲಿಗೆ ಸಿಕ್ಕಾಗ ಇಲ್ಲಿಗೆ ಸ್ವಾಮೀಜಿ ಸುಮ್ಮನಾಗುತ್ತಾರೆ ಎಂಬ ಜನಪ್ರತಿನಿಧಿಗಳ ತಾತನ ಮನೋಭಾವಕ್ಕೆ ಚಾಟಿಯೇಟು ನೀಡಿದ ಸ್ವಾಮೀಜಿ ನಡೆದಿದ್ದು ನೀರು ಹರಿಸಲು ಸಾಧ್ಯ ಎಂಬ ತಾಂತ್ರಿಕ ವರದಿಗಳನ್ನು ಹಿಡಿದು ಅಲ್ಲಿಂದ ಶುರುವಾದ ಸ್ವಾಮೀಜಿಯವರ ಶಾಶ್ವತ ನೀರಾವರಿ ಕನಸು ಒಂದೊಂದು ಕೆಲಸವು ನಡೆಯುತ್ತಾ ನನಸಾಗಿ ಪರಿವರ್ತನೆಯಾಯಿತು.
2006ರಲ್ಲಿ ಶ್ರೀಮಠದ ಸಮಾರಂಭಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಗಳಾದ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಆಗಿದ್ದ ಕೆಲಸ ಮುಂದಾಗ ಬೇಕಿದ್ದ ಕೆಲಸದ ಬಗ್ಗೆ ಸೂಚ್ಯವಾಗಿ ತಿಳಿಸಿದ ಸ್ವಾಮೀಜಿ ಕೆ ಸಿ ರೆಡ್ಡಿ ವರದಿ ತಯಾರಾಗಲು ಕಾರಣರಾದರು ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎತ್ತಿನಹೊಳೆ ಶುರುವಾಗಲು ಸಿದ್ದರಾಮಯ್ಯನವರ ಸರ್ಕಾರ ದಲ್ಲಿ ಹೆಚ್ಚಿನ ಅನುದಾನವನ್ನು ನೀರಾವರಿ ಕ್ಷೇತ್ರಕ್ಕೆ ಒದಗಿಸಲು ಸ್ವಾಮೀಜಿಗಳ ದೂರದೃಷ್ಟಿ ಇದೆ.
43ನೇ ಜನ್ಮಜಯಂತಿ ಸಂದರ್ಭದಲ್ಲೂ ಕೂಡ ಹಲವು ಕಾರ್ಯಕ್ರಮಗಳನ್ನು ಶ್ರೀಗಳ ಒತ್ತಾಸೆಯಂತೆ ಭಕ್ತರು ಹಮ್ಮಿಕೊಂಡಿದ್ದು ಹಲವಾರು ಗಣ್ಯರು ಆಗಮಿಸಿ ಶ್ರೀಗಳ ಕನಸು ನನಸು ಮಾಡುವಂತ ಹೆಜ್ಜೆ ಇಡಲಿದ್ದಾರೆ.
ಮದಲೂರು ಕೆರೆಗೆ ಹೇಮಾವತಿ ನೀರು ಮತ್ತು ಶಿರಾ ತಾಲೂಕಿನ 65 ಕೆರೆಗಳಿಗೆ ಅಪರ ಭದ್ರ ನೀರಾವರಿ ಯೋಜನೆ ಅಡಿ ನೀರು ನೀಡುತ್ತಿರುವುದು ಈ ಎರಡು ದಶಕ ದಲ್ಲಿ ಸ್ವಾಮೀಜಿಗಳ ನಿರಂತರವಾದ ನೀರಾವರಿ ಚಿಂತನೆಯಿಂದ ಎಂಬುದು ನಿತ್ಯ ಸತ್ಯವಾಗಿ ಕಾಣುತ್ತಿದೆ. ಇಂದು ಬೆಳಿಗ್ಗೆ 10.30 ಗಂಟೆಗೆ ನಂಜಾವಧೂತ ಶ್ರೀಗಳಿಗೆ ಗುರುವಂದನೆ ಜೊತೆಗೆ ನೀರಾವರಿ ಹಕ್ಕೊತ್ತಾಯ ದಿನ ಕಾರ್ಯಕ್ರಮ ಸರಳ ರೀತಿಯಿಂದ ನಡೆಯಲಿದೆ.