ಪಾವಗಡ: ರಸ್ತೆ ಅಭಿವೃದ್ದಿ ಕಾಮಗಾರಿ ವಿಚಾರವಾಗಿ ಪ್ರಶ್ನೆಮಾಡಿದ ಯುವಕನಿಗೆ ಸ್ಥಳೀಯ ಶಾಸಕ ವೆಂಕಟರಮಣಪ್ಪ ಕಪಾಳಮೋಕ್ಷ ಮಾಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಸೇರಿದ ನರೇಂದ್ರ ಎಂಬ ಯುವಕ ಮಂಗಳವಾರ ತಾಲೂಕು ಕಚೇರಿ ಆವರಣದಲ್ಲಿ ನಾಗಲಮಡಿಕೆ ಹೋಬಳಿಯ ಹುಸೇನ್ ಪುರದ ನಾಗೇನಹಳ್ಳಿ ನಿವಾಸಿ ನರಸಿಂಹ ಮೂರ್ತಿ, ”ನಮ್ಮೂರಿಗೆ ರಸ್ತೆ ಇಲ್ಲ, ಹದಗೆಟ್ಟೋಗಿದೆ ಸ್ವಾಮಿ, ನಮ್ಮ ಕಡೆ ಕೆಲ ನಾಯಕರು ಕಿವಿಗೊಡುತಿಲ್ಲ ತಾವಾದರೂ ರಸ್ತೆ ಹಾಕಿಸಿ, ಸಾರಿಗೆ ಒದಗಿಸಿ,” ಎಂದು ಮನವಿ ಮಾಡಿದ ಸಂದರ್ಭದಲ್ಲಿ ಕೋಪಗೊಂಡಿದ್ದ ಶಾಸಕ ವೆಂಕಟರಮಣಪ್ಪ ಕಪಾಳಕ್ಕೆ ಹೊಡಿದಿರುವ ಘಟನೆ ನಡೆದಿದ್ದು ತಾಲೂಕಿನ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರು ಯುವಕನಿಗೆ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ತುಣುಕುಗಳನ್ನು ತಾಲೂಕಿನ ಯುವಜನತೆ ಸೇರಿದಂತೆ ವಿವಧ ಸಂಘ ಸಂಸ್ಥೆಗಳ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಪರ ಮತ್ತು ವಿರೋಧ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.