ವಿಜೃಂಭಣೆಯಿಂದ ಜರುಗಿದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ
ತುಮಕೂರು : ನಾಡಿನೆಲ್ಲೆಡೆ ಇಂದು ಸಂಭ್ರಮದ ಹನುಮ ಜಯಂತಿ ಆಚರಣೆ ಮಾಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಇಂದು ತುಮಕೂರು ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಿತು.
ಚಿತ್ರ ಪೂರ್ಣಮಿ ಹಿನ್ನೆಲೆಯಲ್ಲಿ ವಿಶೇಷವಾಗಿ ಬ್ರಹ್ಮರಥೋತ್ಸವ ನಡೆಯಿತು 1:30 ಗಂಟೆಗೆ ಸರಿಯಾಗಿ ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ಬ್ರಹ್ಮರಥೋತ್ಸವ ಜರುಗಿತು.
ಜಿಲ್ಲಾಡಳಿತದ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆಗಳೊಂದಿಗೆ ರಥೋತ್ಸವವನ್ನು ನಡೆಸಲಾಯಿತು. ವೈಭವಯುತವಾಗಿ ರಥೋತ್ಸವವನ್ನು ಅಲಂಕರಿಸಿದ್ದು ಇದರಲ್ಲಿ ಹನುಮದೇವರ ಮೂರ್ತಿ ಇಟ್ಟು ರಥವನ್ನು ನೂರಾರು ಭಕ್ತರು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಹನುಮ ಜಯಂತಿ ಹಿನ್ನೆಲೆಯಲ್ಲಿ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಹನುಮ ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಆಂಜನೇಯಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ವಾಡಿಕೆಯಂತೆ ನೂರಾರು ಭಕ್ತರು ಉರುಳು ಸೇವೆ ಮಾಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ಆಂಜನೇಯ ಸ್ವಾಮಿಯ ರಥದ ಸುತ್ತ ಉರುಳು ಸೇವೆ ಮಾಡಿದರೆ ಇಷ್ಟಾರ್ಥ ಸುದ್ದಿಗಳು ಲಭಿಸುತ್ತದೆ ಎಂಬ ಕಾರಣಕ್ಕಾಗಿ ನೂರಾರು ಭಕ್ತರು ತಮ್ಮ ಹರಕೆಯನ್ನು ತಿರೀಸಿದರು. ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಆಂಜನೇಯ ಸ್ವಾಮಿಯ ದೇವಾಲಯದ ಆಗಮಿಕರಾದ ನರಸಿಂಹ ಭಟ್ಟ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ದೇವಾಲಯದಲ್ಲಿ ವಿಶೇಷವಾದ ರಥೋತ್ಸವಗಳು ಜರುಗಿರಲಿಲ್ಲ ಹನುಮ ಜಯಂತಿಯ ಹಿನ್ನೆಲೆಯಲ್ಲಿ ಚಿತ್ರ ಪೌರ್ಣಮಿಯ ಕಾರಣದಿಂದಾಗಿ ವಿಶೇಷವಾದ ರಥೋತ್ಸವ ನಡೆಯುತ್ತಿದೆ ಬೆಳಗ್ಗೆಯಿಂದಲೂ ಆಂಜನೇಯಸ್ವಾಮಿಗೆ ವಿಶೇಷ ಅಭಿಷೇಕ ವಿಶೇಷ ವಸ್ತ್ರಾಲಂಕಾರ ಸೇರಿದಂತೆ ವಿವಿಧ ರೀತಿಯ ಮಂತ್ರ ಪಠಣದ ಪೂಜೆಗಳು ಜರುಗಿವೆ ರಥೋತ್ಸವ ಜರುಗಲಿದೆ ಎಂದು ಅವರು ತಿಳಿಸಿದರು.
ರಥೋತ್ಸವ ನಡೆಯುವ ಸಂದರ್ಭ ಗರುಡ ಸ್ವಾಮಿಯು ಆಗಸದಲ್ಲಿ ಮೂಡಿದಾಗ ಮಾತ್ರ ರಥೋತ್ಸವ ಸಾಂಗವಾಗಿ ಜರುಗುತ್ತದೆ ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಂಜನೇಯಸ್ವಾಮಿಯ ರಥದ ಸುತ್ತ ಉರುಳು ಸೇವೆ ಮಾಡುತ್ತಾರೆ ಇದು ಅನಾದಿಕಾಲದಿಂದ ನಡೆದುಕೊಂಡು ಬಂದಂತಹ ಸಂಪ್ರದಾಯವಾದ ನಂಬಿಕೆಯಾಗಿದೆ ಎಂದು ತಿಳಿಸಿದರು.