ತುಮಕೂರುರಾಜಕೀಯರಾಜ್ಯ

ಡಿಸಿಎಂ ಆದರೂ ದೇವಾಲಯದ ಒಳಗೆ ಬಿಡಲ್ಲ : ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಡಾ.ಅಂಬೇಡ್ಕರ್ ಸಂವಿಧಾನ ದಿಂದ ದಲಿತರು, ಮಹಿಳೆಯರಿಗೆ ಉನ್ನತ ಹುದ್ದೆ

ಕೊರಟಗೆರೆ : ದೇಶದ ಜಾತಿ ವ್ಯವಸ್ಥೆಯಲ್ಲಿನ ನೋವನ್ನು ಸ್ವತಃ ಅನುಭವಿಸಿದ್ದ ಅಂಬೇಡ್ಕರ್‌ಅವರು ಸಂವಿಧಾನ ರಚನೆ ಮಾಡಿದ್ದೆರಿಂದಲೇ ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ದೇಶದ ಅತ್ಯುನ್ನತ ಹುದ್ದೆಗೆ ಏರಲು ಸಾಧ್ಯವಾಯಿಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರ 131 ನೇ ಜನ್ಮ ದಿನಾವರಣೆ ಹಾಗೂ ಹಸಿರು ಕಾಂತ್ರಿಯ ಹರಿಕಾರ, ರಾಷ್ಟçನಾಯಕ ಭಾರತ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ರವರ 115 ನೇ ಜನ್ಮ ದಿನಾವರಣೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ,ಆರ್.ಅಂಬೇಡ್ಕರ್ ರವರು ಕೇವಲ ದಲಿತ ಸಮುದಾಯದ ಆಶಾಕಿರಣವಾಗಿರಲಿಲ್ಲ, ಬದಲಾಗಿ ಇಡೀ ದೇಶದ ಶ್ರಮಿಕ ಕಾರ್ಮಿಕ, ಶೋಷಿತರ ಶಕ್ತಿಯಾಗಿದ್ದರು, ಅವರ ಬರೆದ ಸಂವಿಧಾನದಿಂದಲೇ ಇಂದು ದೇಶ ನಡೆಯುತ್ತಿರುವುದು ಎಂದ ಅವರು ಇಂತ ಸಂವಿಧಾನವನ್ನು ಇತ್ತೀಚೆಗೆ ಬದಲಾಯಿಸುವ ಮಾತುಗಳು ಕೇಳಿಬರುತ್ತಿರುವುದು ದುರದೃಷ್ಠಕರವಾಗಿದ್ದು ಸಮಾಜದಲ್ಲಿ ಜಾಗೃತಿಯಾಗಬೇಕಾಗಿದೆ ಎಂದು ತಿಳಿಸಿದ ಅವರು ಪ್ರಪಂಚದ ಯಾವುದೇ ರಾಷ್ಟçದಲ್ಲಿ ಕೀಳರಿಮೆ ಭಾವನೆ ಇಲ್ಲ ಆದರೆ ಬಾರತದಲ್ಲಿ ಮೇಲು, ಕೀಳು ಎಂಬ ಬಾವನೆ ರಕ್ತಗತ ವಾಗಿ ಬಂದಿದೆ ಇದು ಭಾರತೀಯ ಸಂಸ್ಕೃತಿಯಾಗಿದ್ದು ಇದರಿಂದ ದೇಶದಲ್ಲಿ ಎಷ್ಟೋ ಮರ್ಯಾದಾ ಕೊಲೆಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಭಾರತದಲ್ಲಿ ಭಗವತ್‌ಗೀತೆಯ ಸಾರಾಂಶ ಪಾಲನೆ ಮಾಡುತ್ತಿಲ್ಲ ಎಂದರು.

ಡಿಸಿಎಂ ಆದರು ದೇವಾಲಯದ ಒಳಗೆ ಪ್ರವೇಶವಿಲ್ಲ;- ನಾನು ವಿದೇಶದಲ್ಲಿ ವ್ಯಾಸಂಗ ಮಾಡಿದ್ದೇನೆ, ಡಾಕ್ಟೆರೇಟ್ ಪದವಿ ಪಡೆದಿದ್ದೇನೆ, ಶಾಸಕ, ಸಚಿವನಾಗಿ ರಾಜ್ಯದ ಡಿಸಿಎಂ ಆಗಿದ್ದೇನೆ, ಅದರೇ ಈಗಲೂ ನನ್ನನ್ನು ದೇವಸ್ಥಾನಕ್ಕೆ ಸೇರಿಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ನಾನು ದೇವಾಲಯದ ಒಳಗೆ ಹೋದರೆ ಅರ್ಚಕರೇ ಹೊರಗೆ ಬಂದು ಮಂಗಳಾರತಿ ಕೊಡುತ್ತಾರೆ, ದೇಶದಲ್ಲಿ ಇಂತಹ ಪರಿಸ್ಥಿತಿ ಇನ್ನೂ ಜೀವಂತವಾಗಿರುವುದು ದುರದುಷ್ಠಕರ, ಕುಡಿಯುವ ನೀರಿನಲ್ಲಿಯೂ ಜಾತಿ ವ್ಯವಸ್ಥೆಯು ದಲಿತರನ್ನು ಕಾಡುತ್ತಿದೆ ಎಂದು ತಿಳಿಸಿದರು. ಡಾ,ಬಿ.ಆರ್.ಅಂಬೇಡ್ಕರ್ ಜಯಂತಿ ಕೇವಲ ತಾಲೂಕು ಕಛೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಸಮುದಾಯ ಆಚರಣೆಮಾಡುವುದಲ್ಲಾ ಎಲ್ಲಾ ಸಮುದಾಯ ಸೇರಿ ಆಚರಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಸಮಸ್ಯೆ ನಿವಾರಿಸಿದ ಮಹಾನ್ ಮುತ್ಸದ್ದಿ ನಾಯಕರು ಬಾಬು ಜಗಜೀವನರಾಂ ಮಾಜಿ ಉಪ ಪ್ರಧಾನಿ ಮತ್ತು ಕೃಷಿ ಸಚಿವರಾಗಿದ್ದ ಅವರ ಆಡಳಿತ ಅವದಿಯಲ್ಲಿ ಮಾಡಿದ ಸೇವೆ ಸದಾ ಸ್ಮರಿಸುವಮತೆ ಮಾಡಿದ್ದು, ಬಸವ ಬುದ್ದ ವಿಚಾರಧಾರೆಗಳೊಂದಿಗೆ ಪ್ರೇರಿತರಾದ ಅವರು ದೇಶ ಕಟ್ಟಕಡೆಯ ಸಮುದಾಯದ ಹಿತರಕ್ಷಣೆಗಾಗಿ ಶ್ರಮಿಸಿದವರು, ಕೃಷಿ ಕ್ಷೇತ್ರದಲ್ಲಿ ಅನೇಕ ವೈಜ್ಞಾನಿಕ ಬದಲಾವಣೆಗಳ ಮೂಲಕ ದೇಶದ ಆಹಾರ ಸಮಸ್ಯೆ ನಿವಾರಿಸುವ ಮಹತ್ವದ ನಿರ್ಣಯ ಇವರನ್ನು ಅಜಾರಾಮರಗೊಳ್ಳುವಂತೆ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಡಾ.ಓ.ನಾಗರಾಜು ಮತ್ತು ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎಲ್.ರುದ್ರೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶದಲ್ಲಿ ಉತ್ತಮ ಸಂವಿಧಾನ ರಚನೆ ಮಾಡಲು ಮೂಲಕ ದೇಶದ ದಲಿತರ ರಕ್ಷಣೆಗೆ ಹಾಗೂ ಅವರ ಅಭಿವೃದ್ದಿಗೆ ಕಾರಣರಾಗಿದ್ದಾರೆ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳ ನಂತರ ಗ್ರಂಥವೆAದರೆ ಭಾರತದ ಸಂವಿಧಾನ ಮಾತ್ರ ಸಂವಿಧಾನ ರಕ್ಷಣೆ ನಮ್ಮೆಲ್ಲದ ಜವಾಬ್ದಾರಿಯಾಗಿದೆ ಎಂದ ಅವರು ಮಹನೀಯರ ಜನ್ಮದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿಯೊಬ್ಬರೂ ಜೀವನದಲ್ಲಿ ಅವರ ಮಾರ್ಗದರ್ಶನ ಅವಳವಡಿಸಿಕೊಳ್ಳು ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಹೀದಾ ಜಮ್ ಜಮ್, ತಾ.ಪಂ.ಅಡಳಿತಾಧಿಕಾರಿ ದೀಪಶ್ರೀ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕಾವ್ಯಶ್ರೀರಮೇಶ್, ಉಪಾಧ್ಯಕ್ಷೆ ಕೆ.ವಿ.ಭಾರತಿಸಿದ್ದಮಲ್ಲಯ್ಯ, ಸ್ಥಾಯಿಸಮಿತಿ ಅಧ್ಯಕ್ಷ ನಟರಾಜು, ಸದಸ್ಯರಾದ ಕೆ.ಆರ್.ಓಬಳರಾಜು, ಕೆ.ಎನ್.ಲಕ್ಷ್ಮೀನಾರಾಯಣ್, ನಾಗರಾಜು, ನಂದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಎಂ.ರುದ್ರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೃಷ್ಣಮೂರ್ತಿ, ತಾ.ಪಂ.ಕಾರ್ಯನಿರ್ವಹಾಧಿಕಾರಿ ಡಾ,ಡಿ.ದೊಡ್ಡಸಿದ್ದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಪ,ಪಂ,ಮುಖ್ಯಾಧಿಕಾರಿ ಭಾಗ್ಯ, ಅರಕ್ಷಕ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಕೆ.ಉಮಾದೇವಿ, ಕೃಷಿ ಅಧಿಕಾರಿ ನಾಗರಾಜು, ನಗರಸಭಾ ಮಾಜಿ ಉಪಾಧ್ಯಕ್ಷ ವಾಲೇಚಂದ್ರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಅರಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker