ಜಿಲ್ಲೆತುಮಕೂರುರಾಜಕೀಯರಾಜ್ಯ

ಡಾ.ಜಿ.ಪರಮೇಶ್ವರ್ ರಾಜ್ಯದ ಎಡ-ಬಲ ಸಮುದಾಯದ ನಡುವಿನ ಕಂದಕವನ್ನು ತುಂಬುವ ನಾಯಕತ್ವ ವಹಿಸಲಿ : ನಾಡೋಜ ಡಾ. ಬರಗೂರು ರಾಮಚಂದ್ರಪ್ಪ

ಡಾ.ಜಿ.ಪರಮೇಶ್ವರ್ ಅವರ‌ “ಸವ್ಯಸಾಚಿ” ಗೌರವ ಗ್ರಂಥ ಲೋಕಾರ್ಪಣೆ

ತುಮಕೂರು : ಡಾ.ಜಿ.ಪರಮೇಶ್ವರ್ ಅವರು ರಾಜ್ಯದಲ್ಲಿರುವ ಎಡ-ಬಲ ಸಮುದಾಯದ ನಡುವಿನ ಕಂದಕವನ್ನು ತುಂಬುವ ನಾಯಕತ್ವವನ್ನು ವಹಿಸಿಕೊಳ್ಳಬೇಕಿದೆ ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ,ಸಿದ್ಧಾರ್ಥ ನಗರ,ತುಮಕೂರು ವತಿಯಿಂದ ಶ್ರೀಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಮಾಜಿ ಉಪಮುಖ್ಯಮಂತ್ರಿ ಮತ್ತು ಕೊರಟಗೆರೆ ವಿಧಾನಸಭಾಕ್ಷೇತ್ರದ ಶಾಸಕರು ಡಾ.ಜಿ.ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿತ “ಸವ್ಯಸಾಚಿ” ಗೌರವಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಡ-ಬಲ ಎರಡು ಸಮುದಾಯಗಳ ನಡುವಿನ ಭಿನ್ನಾಭೀಪ್ರಾಯಗಳನ್ನೇ ದೊಡ್ಡದು ಮಾಡುವ ಮೂಲಕ ಮತ್ತಷ್ಟು ಹದಗೆಡಿಸುವ ಕೆಲಸ ಮಾಡುತ್ತಿದ್ದು, ಇದನ್ನು ಸರಿಮಾಡುವ ಜವಾಬ್ದಾರಿ ಡಾ.ಜಿ.ಪರಮೇಶ್ವರ್ ಅವರ ಮೇಲಿದೆ ಎಂದರು.
ಸಂಪಾಧನೆ ಮತ್ತು ಸಂವೇದನೆ ಎರಡನ್ನು ಸಮತೋಲನದಲ್ಲಿ ಇಟ್ಟುಕೊಂಡಿರುವ ಬೆರಳಣಿಕೆಯ ವ್ಯಕ್ತಿಗಳಲ್ಲಿ ಡಾ.ಜಿ.ಪರಮೇಶ್ವರ್ ಅವರು ಒಬ್ಬರು ಎಂದು ಹೇಳಿದರು.
ಇಂದಿನ ಕೆಲ ರಾಜಕಾರಣಿಗಳು ಒರಟು ಮಾತುಗಳನ್ನಾಡುವುದೇ ನಾಯಕತ್ವದ ಗುಣ ಎಂದು ಕೊಂಡಿದ್ದಾರೆ. ಆದರೆ ಎಂದಿಗೂ ಅಂತಹ ವಿವೇಚನಾರಹಿತ ಕೆಲಸವನ್ನು ಡಾ.ಜಿ.ಪರಮೇಶ್ವರ ಮಾಡಿಲ್ಲ.ನಾಗರನಾಲಿಗೆ,ಕುರುಡು ಕಿವಿಗಳಿರುವ ರಾಜಕಾರಣಿಗಳ ನಡುವೆ,ಯಾರೊಬ್ಬರ ಬಗ್ಗೆಯೂ ಹಗುರವಾಗಿ ಮಾತನಾಡಿದವರಲ್ಲ.ಎಲ್ಲವನ್ನು ಸಮಚಿತ್ತದಿಂದ ಕೇಳಿಸಿಕೊಳ್ಳುವ ಅಪರೂಪದ ಜನನಾಯಕ.ನಿಷ್ಠೂರತೆಯ ಜೊತೆಗೆ,ವಿವೇಚನೆಯನ್ನು ಬೆಳೆಸಿಕೊಂಡಿರುವ ಅಪರೂಪದ ರಾಜಕಾರಣಿ ಎಂದು ಡಾ.ಬರಗೂರು ರಾಮಚಂದ್ರಪ್ಪ ಡಾ.ಜಿ.ಪರಮೇಶ್ವರ್ ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ಗಾಂಧಿ ಮತ್ತು ಅಂಬೇಡ್ಕರ್,ನೆಹರು ಮತ್ತು ಸರದಾರ್ ವಲ್ಲಭಾಯಿ ಪಟೇಲ್ ರವರ ನಡುವೆ ಭಿನ್ನಾಭಿಪ್ರಾಯವಿತ್ತೇ ಹೊರತು ಅವರು ಎಂದಿಗೂ ದ್ವೇಷ ಸಾಧಿಸಿದವರಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾಯಕನಿಗೆ ಪ್ರತಿನಾಯಕನನ್ನು ಸೃಷ್ಟಿಸುವ ಕೆಲಸ ಬಹಳ ವೇಗ ಪಡೆದುಕೊಂಡಿದೆ.ಖಳನಾಯಕ ಹುಸಿ ಬೌದ್ಧಿಕ ಕಾರ್ಖಾನೆಗಳು ಆಗುತ್ತಿವೆ.ಧರ್ಮ,ಸಂಸ್ಕೃತಿ,ವ್ಯಕ್ತಿ ಅಪವ್ಯಾಖಾನ ವಾಗುತಿದೆ.ಕುರ್ಚಿಯಲ್ಲಿ ಕೂರುವವರು ಎತ್ತರದಲ್ಲಿರಬೇಕು,ಆಗ ಮಾತ್ರ ಪ್ರಜಾಸತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ ಎಂದು ಡಾ.ಬರಗೂರು ರಾಮಚಂದ್ರಪ್ಪ ಇತ್ತೀಚಿನ ವಿದ್ಯಮಾನಗಳನ್ನು ವಿಶ್ಲೇಷಿಸಿದರು.

ಕಟ್ಟ ಕಡೆಯ ಪ್ರಜೆಗೆ ಶಿಕ್ಷಣ ತಲುಪಿಸುವ ಕೆಲಸ ಶ್ರೀಸಿದ್ಧಾರ್ಥ ಶಿಕ್ಷಣ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದರು.ರಾಜಕಾರಣಿಗಳು ಮಾತ್ರವಲ್ಲ ಹಲವಾರು ನಾಯಕ, ಖಳನಾಯಕ ಹುಸಿ ಬೌದ್ಧಿಕ ಕಾರ್ಖಾನೆಗಳು ಆಗುತ್ತಿವೆ. ಧರ್ಮ ಸಂಸ್ಕೃತಿ ವ್ಯಕ್ತಿ ಅಪಖ್ಯಾತವಾಗುತ್ತಿದೆ. ಆದರೆ ಡಾ.ಜಿ. ಪರಮೇಶ್ವರ ಅವರು ಯಾವುದೇ ಕಳಂಕ ಹುಸಿ ಮಾತಿಗೆ ಸಿಕ್ಕದೆ ಒಳ್ಳೆ ರಾಜಕಾರಣಿ ಎಂದು ಅವರನ್ನು ಹೊಗಳಿ ಕೊಂಡಾಡಿದರು.

ಸವ್ಯಸಾಚಿಯ ಗೌರವ ಗ್ರಂಥದಲ್ಲಿ ಡಾ.ಎಚ್.ಎಂ.ಗಂಗಾಧರಯ್ಯನವರ ಭಾವಚಿತ್ರದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಇರುವುದು ಸಂತೋಷದ ವಿಷಯ. ಸುಮಾರು 11ಸಾವಿರ ಶಾಲೆಗಳನ್ನು ನಡೆಸಿ ಹಲವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿರುವುದೇ ದಿಕ್ಸೂಚಿ. ಕುರ್ಚಿಯಲ್ಲಿ ಕೂರುವವರು ಎತ್ತರದಲ್ಲಿ ಕುಳಿತುಕೊಳ್ಳಬೇಕು ಆಗ ಮಾತ್ರ ಪ್ರಜಾಸತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ ಎಂದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಮಾತನಾಡಿ, ತಮ್ಮ ಹಳೆ ವಿದ್ಯಾರ್ಥಿ ಜೀವನವನ್ನು ಸ್ಮರಿಸುತ್ತಾ ತಮ್ಮ ಸಹೋದರರಾದ ಐವರಲ್ಲಿ ನಾಲ್ವರು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದು, ಅವರಲ್ಲಿ ಮೂವರು ರಾಮಕೃಷ್ಣ ಆಶ್ರಮದಲ್ಲಿ ಕೈಂಕರ್ಯ ಮಾಡುತ್ತಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದಲೇ ರಾಮಕೃಷ್ಣ ಆಶ್ರಮಕ್ಕೆ ಕೊಡುಗೆಯಾಗಿ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕವಿ, ನಾಟಕಕಾರ, ಕಾದಂಬರಿಕಾರರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ಡಾ.ಚಂದ್ರಶೇಖರ ಕಂಬಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ನವದೆಹಲಿ ಅವರು ‘ಸವ್ಯಸಾಚಿ’ ಗೌರವಗ್ರಂಥವನ್ನು ಬಿಡುಗಡೆ ಮಾಡಿದರು. ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್, ಹೈಪ್ರೀಸ್ಟ್ಜಂಬೂದ್ವೀಪ, ಶ್ರೀಲಂಕಾ ಬುದ್ದಿಸ್ಟ್ಟೆಂಪಲ್, ಸಮಥ್, ವಾರಣಾಸಿಯ ಅಧ್ಯಕ್ಷರಾದ ಡಾ.ಕೆ.ಸಿರಿ ಸುಮೇಧಾಥೇರಾ, ಆಡಳಿತ ಮಂಡಳಿ ಸದಸ್ಯರು ಶ್ರೀಮತಿ ಕನ್ನಿಕಾ ಪರಮೇಶ್ವರಿ, ಆಡಳಿತ ಮಂಡಳಿ ಸದ್ಯಸರು ಡಾ.ಅನಂದ್, ಸಾಹೇ ಉಪಕುಲಪತಿ ಬಾಲಕೃಷ್ಣ ಶೆಟ್ಟಿ, ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಸುಶೀಲ್ ಮಹಾಪತ್ರ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಡ್ವ ನೆಲಮಂಗಲದ ಬೇಗೂರುನಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಪ್ರಾಂಶುಪಾಲರಾದ ಶ್ರೀನಿವಾಸ ಸೇರಿದಂತೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಭೋದಕ ಮತ್ತು ಭೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಆಸನ ಮತ್ತು ಊಟದ ವ್ಯವಸ್ಥೆ: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ ಆಯೋಜಿಸಿದ ಕಾರ್ಯಕ್ರಮದಲ್ಲಿ ನೌಕರರು ಮತ್ತು ಸಾರ್ವಜನಿಕರು ಭಾಗವಹಿಸಲು ಒಟ್ಟು 5ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಒಕ್ಕೂಟದ ನೌಕರರು ಮತ್ತು ಅವರ ಕುಟುಂಬದವರು, ರಾಜಕೀಯ ಧುರೀಣರು, ಬೇರೆ ಬೇರೆ ಸ್ಥಳಗಳಿಂದ ಆಗಮಿಸಿದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರು, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಭೋದಕ ಮತ್ತು ಭೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಾತ್ಯಾತೀತವಾಗಿ ಯಾವುದೇ ಪಕ್ಷ ಬೇಧವಿಲ್ಲದೇ “ಸವ್ಯಸಾಚಿ”ಗೌರವಗ್ರಂಥದಲ್ಲಿ ಬಿಡುಗಡೆ ಕಾರ್ಯಕ್ರಮದಲ್ಲಿ ಜನಸಾಗರವೇ ಹರಿದು ಬಂದಿತ್ತು.

ರಾಜಕಾರಣಿಗಳು ಬಾಗಿ : ಸೊಗಡು ಶಿವಣ್ಣ, ಟಿ.ಬಿ.ಜಯಚಂದ್ರ, ಷಡಕ್ಷರಿ, ರಂಗನಾಥ್, ಹುಲಿನಾಯ್ಕರ್, ಎಂ.ಟಿ. ಕೃಷ್ಣಪ್ಪ, ಮಲ್ಲಾಜಮ್ಮ, ಬಲೀಜಿತ್ ಸಿಂಗ್ ಮತ್ತು ಕುಟುಂಬ, ನಿವೇದಿತಾ ಆಳ್ವ, ನಿಂಗಪ್ಪ, ಸೋಮಶೇಖರ್, ಲೊಕೇಶ್ವರ, ಲಕ್ಷಣದಾಸ್, ನಾಗಣ್ಣ, ಡಾ.ವೈ, ಎಂರೆಡ್ಡಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು ಮತ್ತು ಅನುಯಾಯಿಗಳು ಡಾ.ಜಿ.ಪರಮೇಶ್ವರ ಅವರ ಗೌರವ ಗ್ರಂಥ ಸವ್ಯಸಾಚಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಗ್ರಂಥಕುರಿತು: ಪ್ರೊ.ಮಾದೇವ್ ಭರಣಿ ಸಂಪಾದಿತ “ಸವ್ಯಸಾಚಿ” ಗೌರವಗ್ರಂಥದಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಹತ್ತಿರದಿಂದ ನೋಡಿದ ಸಾಮಾಜಿಕ ಹೋರಾಟಗಾರರು, ರಾಜ್ಯದ ಉದ್ದಗಲಕ್ಕು ಇರುವ ಪತ್ರಕರ್ತರು, ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು, ಕಲೆ, ಸಾಹಿತ್ಯಸೇರಿದಂತೆರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾ ಆಯಾಮದಲ್ಲಿ ನೋಡಿದ ಹಲವಾರು ಗಣ್ಯರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಲೇಖನಗಳು ಗ್ರಂಥದಲ್ಲಿ ಒಳಗೊಂಡಿದೆ. ಗ್ರಂಥವು1 ಕೆ.ಜಿ.200ಗ್ರಾಂ ತೂಕ ಹೊಂದಿದ್ದು, 476 ಪುಟಗಳಿದ್ದು, ನಾಲ್ಕು ಭಾಗಗಳಿವೆ.

ಗೀತ ಗಾಯನದ ವೈಭವ:
ಅಲ್ಲಿ ಜನಸಾಗರವೇ ಹರಿದು ಬಂದಿತ್ತು. ಸಂಗೀತದ ನಾದ ಸುಧೆ ಎಲ್ಲರ ಕಿವಿ ಇಂಪಾಗಿಸಿತ್ತು. ಚಪ್ಪಾಳೆ ಸುರಿಮಳೆಯಿಂದ ಬಿಸಿಲ ಧಗೆ ತಣ್ಣಾಗಾಗಿತ್ತು. ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಗಾಯನ ಸುಧೆ ಎಲ್ಲಾರ ಗಮನ ಸೆಳೆಯಿತು. ಸುಮಾರು ಮೂರು ಗಂಟೆಗಳ ಕಾಲ ಗಾನ ಸುಧೆ ಗಾಯನ ಮೂಲಕ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡರು.

101 ಪೂರ್ಣಕುಂಭದ ಸ್ವಾಗತ ;
ಡಾ. ಜಿ. ಪರಮೇಶ್ವರ ಮತ್ತು ಶ್ರೀಮತಿ ಕನ್ನಿಕಾ ಪರಮೇಶ್ವರ ದಂಪತಿ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಅತಿಥಿಗಳನ್ನು ನಾದಸ್ವರದೊಂದಿಗೆ 101 ಪೂರ್ಣಕುಂಭ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶ್ರೀ ಸಿದ್ಧಾರ್ಥ ನಗರದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಬುದ್ಧಗೀತೆಯನ್ನು ಹಾಡಿದರು. ಡಾ.ಜಿ.ಪರಮೇಶ್ವರ ಮತ್ತು ಕನ್ನಿಕಾ ಪರಮೇಶ್ವರಿ ಅವರು ಕಾರ್ಯಕ್ರಮಕ್ಕೂ ಮುನ್ನ ಅವರ ತಂದೆ-ತಾಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು.
ಆಶೀವರ್ಚನ: ಮಹಾರಾಷ್ಟç – ಕರ್ನಾಟಕದಿಂದ ಆಶ್ರಮಗಳಿಂದ ನಾಡಿನೆಲ್ಲೆಡೆ ಸುಮಾರು 15ಕ್ಕೂ ಬೌದ್ಧಭಿಕ್ಕುಗಳಿಂದ ಡಾ.ಜಿ.ಪರಮೇಶ್ವ ದಂಪತಿಗೆ ಆಶೀರ್ವಚನ ಮಾಡಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker