ರಂಜಾನ್ ಮಾಸದಲ್ಲಿ ಮಸೀದಿ ಬಳಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ

ತುಮಕೂರು : ಪ್ರಪಂಚದಾದ್ಯಂತ ರಂಜಾನ್ ಉಪವಾಸ ಆರಂಭವಾಗಿದ್ದು,ಈ ಪವಿತ್ರ ಮಾಸದ ಇಪ್ತಿಯಾರ್ ಸಂದರ್ಭದಲ್ಲಿ ಮಸೀದಿಯ ಮುಂಭಾಗದಲ್ಲಿ ಎಲ್ಲ ಧರ್ಮಿಯರು ತಮ್ಮ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಮಾಡಿಕೊಡುವಂತೆ ತುಮಕೂರು ನಗರದ ಉಲ್ಮಾಗಳು, ಮಸೀದಿ ಮುಖಂಡರು ಮುಸ್ಲಿಂ ವ್ಯಾಪಾರಸ್ಥರು ಮತ್ತು ಯುವಕರಿಗೆ ಮನವಿ ಮಾಡಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕ ನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಶಾಂತಿ ಕದಡುವ ವಿಚಾರಗಳು ತಲೆ ಎತ್ತಿ, ಜನರು ನೆಮ್ಮದಿಯಿಂದ ತಮ್ಮ ವ್ಯಾಪಾರ, ವಹಿವಾಟು ನಡೆಸುವುದು ಕಷ್ಟ ಸಾಧ್ಯವಾಗಿದೆ.ಒಂದು ತಿಂಗಳ ಕಾಲ ನಡೆಯುವ ಈ ರಂಜಾನ್ ತಿಂಗಳಲ್ಲಿ ಮುಸ್ಲಿಂರು ಉಪವಾಸ ಬಿಡುವ ಸಂದರ್ಭದಲ್ಲಿ ಈ ಹಿಂದೆಯೂ ಎಲ್ಲಾ ಧರ್ಮಗಳ ಜನರು ತಮಗೆ ಇಷ್ಟ ಬಂದ ತಿಂಡಿ, ತನಿಸು,ಇನ್ನಿತರ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುವುದು ವಾಡಿಕೆ,ಆದರಂತೆ ಈ ಬಾರಿಯೂ ಎಲ್ಲಾ ಧರ್ಮದವರು ಸೌಹಾರ್ಧತೆಯಿಂದ ತಮ್ಮ ತಮ್ಮ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು. ಯಾವುದೇ ಸಂಘರ್ಷಕ್ಕೆ ಅವಕಾಶ ನೀಡದೆ,ದ್ವೇಷದಿಂದ ಎನನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಎಲ್ಲರ ಮನ ಗೆಲ್ಲಲು ಅವಕಾಶವಿದೆ. ಹಾಗಾಗಿ ಎಲ್ಲರಿಗೂ ಪರಸ್ವರ ಪ್ರೀತಿ ಹಂಚೋಣ ಎಂದು ಜಾಮೀಯ ಮಸೀದಿಯ ಮುಖ್ಯಸ್ಥರಾದ ಮುಕ್ತಿ ಉಮ್ಮರ್ ಹನ್ಸರ್ ಸಾಬ್ ತಿಳಿಸಿದ್ದಾರೆ. ಅವರ ಈ ಪ್ರೀತಿಯ ಸಂದೇಶವನ್ನು ನಾವೆಲ್ಲರೂ ಪಾಲಿಸೋಣ, ದೇಶದಲ್ಲಿ ಶಾಂತಿ, ನೆಮ್ಮದಿ ನೆಲಸುವಂತೆ ಮಾಡೋಣ ಎಂದು ಯುವಕರಲ್ಲಿ ಮನವಿ ಮಾಡಿದರು.