ಕೊರಟಗೆರೆ

ರಾಜಕೀಯ ಕ್ಷೇತ್ರದ ಅಜಾತಶತ್ರು ಪರಮೇಶ್ವರ್ ಸಿಎಂ ಕನಸು ಈಡೇರಲಿ : ಶ್ರೀ ಈಶ್ವರಾನಂದಪುರಿ ಸ್ವಾಮಿಜೀ

ಕನಕಗುರು ಮಠದಲ್ಲಿ 3ಕೋಟಿ 35ಲಕ್ಷದ ಕಾಮಗಾರಿಗೆ ಚಾಲನೆ

ಕೊರಟಗೆರೆ : ಕರ್ನಾಟಕದಲ್ಲಿ ಸಂಘಟನೆಯ ಹೆಸರಿನಲ್ಲಿ ಶೂಚನೀಯ ಪರಿಸ್ಥಿತಿ ನಿರ್ಮಾಣ. ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುದೇ ಯಕ್ಷಪ್ರಶ್ನೆ. ರಾಜ್ಯದ ಎಲ್ಲಾ ಮಠಾಧೀಶರು ಒಂದಾಗಿ ರಾಜ್ಯ ಸರಕಾರ ಮತ್ತು ಸಂಘಟನೆಗಳಿಗೆ ಬುದ್ದಿವಾದ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೇಟ್ಟದ ಶ್ರೀರೇವಣ್ಣ ಸಿದ್ದೇಶ್ವರ ಕನಕಗುರು ಶ್ರೀಮಠದಲ್ಲಿ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ 3ಕೋಟಿ 35ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದರು.
ಕನಕಗುರು ಮಠದಲ್ಲಿ ಜಯಂತಿ ಆದರೇ ಅಲ್ತಾಪ್ ತೋರಣ ಕಟ್ತಾನೇ.. ಕ್ರಿಶ್ಚಿಯನ್ ಹುಡುಗ ಭಕ್ತರಿಗೆ ಊಟ ಬಡಿಸ್ತಾನೇ.. ಯುಗಾದಿ ಹಬ್ಬದ ಊಟದ ವಿಚಾರದಲ್ಲಿ ಸಂಘಟನೆಯಿಂದ ಒಂದು ವರ್ಗದ ಜನರನ್ನು ದೂರುವಿಡುವ ಹುನ್ನಾರ ನಡೆಯುತ್ತೀದೆ. ರಾಜ್ಯದಲ್ಲಿ ಹಿಂದು-ಮುಸ್ಲಿಂ ಸಮುದಾಯದ ನಡುವೆ ಗೊಂದಲ ಮೂಡಿಸುವ ಪ್ರಯುತ್ನ ನಡೆಯುತ್ತಿದೆ. ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಆಗ್ರಹ ಮಾಡಿದರು.

ಕರ್ನಾಟಕ ರಾಜ್ಯದ ದಲಿತ ಸಿಎಂ ಕನಸು ಈಡೇರಲಿ
ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ, ಬ್ರಾಹ್ಮಣ, ಕುರುಬ, ಒಕ್ಕಲಿಗ ಸಮುದಾಯದಿಂದ ಈಗಾಗಲೇ ಸಿಎಂ ಆಗಿ ರಾಜ್ಯದ ಆಡಳಿತ ನಡೆಸಿದ್ದಾರೆ. ಕರ್ನಾಟಕ ರಾಜಕೀಯ ರಂಗದಲ್ಲಿ ಡಾ.ಜಿ.ಪರಮೇಶ್ವರ್ ಅಜಾತಶತ್ರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಲಿತ ಸಿಎಂ ಆದರೆ ಸಾಮಾಜಿಕ ನ್ಯಾಯ ದೊರೆಯುವ ಕನಸು ನನಸಾಗಲಿದೆ. ಸದಾ ಜನತೆಯ ಮಧ್ಯೆ ಇರುವಂತಹ ಸರಳತೆಯ ರಾಜಕಾರಣಿ ಮತ್ತೇ ಕೊರಟಗೆರೆ ಕ್ಷೇತ್ರದಿಂದ ಜಯಗಳಿಸಿ ರಾಜ್ಯದ ಸಿಎಂ ಆಗಲಿ ಎಂದು ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಆರ್ಶಿವಾದ ಮಾಡಿದರು.ಸಾಧುಸಂತರು ತಪಸ್ಸು ಮಾಡಿರುವ ತಪೋಭೂಮಿ, ರೇವಣ್ಣ ಸಿದ್ದೇಶ್ವರ ತಪಸ್ಸು ಮಾಡಿರುವ ಪವಿತ್ರಸ್ಥಳ ಸಿದ್ದರಬೆಟ್ಟ ಶ್ರೀಕ್ಷೇತ್ರ. ಹಾಲುಮತದ ಕುಲಗುರು ರೇವಣ್ಣ ಸಿದ್ದೇಶ್ವರ. ಹತ್ತಾರು ವರ್ಷಗಳ ಹಾಲುಮತಸ್ಥರ ಸಮುದಾಯದ ಕನಸು ಈಗ ನನಸಾಗುವ ಕಾಲ ಹತ್ತಿರ ಬರುತ್ತಿದೆ. ಸಿದ್ದರಬೆಟ್ಟದ ಶ್ರೀಕನಕಗುರು ಪೀಠ ಮಠದ ಸ್ಥಾಪನೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪಾತ್ರ ಅನನ್ಯವಾಗಿದೆ ಎಂದು ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಹೇಳಿದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ಕೊರಟಗೆರೆ ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ತಲಾ ಎರಡು ಮಠಗಳಿವೆ. ಮಠಮಂದಿರ ಹೆಚ್ಚಾದಂತೆ ಸ್ವಾಮರಸ್ಯ ಒಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಲಿದೆ. ಸಿದ್ದರಬೆಟ್ಟದ ಕನಕ ಶ್ರೀಮಠಕ್ಕೆ ಈಗಾಗಲೇ 10ಲಕ್ಷದ ಕೌಪೌಂಡು ಮತ್ತು ಕೊಳವೆಬಾವಿಗೆ ಅನುಧಾನ ನೀಡಿದ್ದೇನೆ. ಶ್ರೀಮಠಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ನಾನು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.
3ಕೋಟಿ 35ಲಕ್ಷದ ಕಾಮಗಾರಿಗೆ ಚಾಲನೆ
ಕೊರಟಗೆರೆ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯಿಂದ 3ಕೋಟಿ 35ಲಕ್ಷದ ಸಿದ್ದರಬೆಟ್ಟದ ಮುಖ್ಯರಸ್ತೆಯಿಂದ ರೇವಣ್ಣ ಸಿದ್ದೇಶ್ವರ ಕನಕಗುರು ಮಠದ ಸಂಪರ್ಕದ 1.2ಕೀಮೀ ರಸ್ತೆ ಕಾಮಗಾರಿ. ಸಿಮೆಂಟ್ ಕಾಂಕ್ರಿಟ್ ರಸ್ತೆ-1230ಮೀ, ಆರ್‌ಸಿಸಿ ಸೇತುವೆ-10.3ಮೀ, ಆರ್‌ಸಿಸಿ ಸೇತುವೆ-2ಮೀ, ಆರ್‌ಸಿಸಿ ಚರಂಡಿ-50ಮೀ, ಆರ್‌ಸಿಸಿ ಪೈಪ್ ಸೇತುವೆ-600ಎಂಎಂ, ಆರ್‌ಸಿಸಿ ರಕ್ಷಣಾ ಗೋಡೆ-40ಮೀ, ಹೈಮಾಸ್ಕ್ ದ್ವೀಪ-4, ಸಂಪರ್ಕ ಸೇತುವೆ-600ಎಂಎಂ ಕಾಮಗಾರಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಎಸ್.ನಾಗಣ್ಣ, ಮಧುಕರ್, ತಹಶೀಲ್ದಾರ್ ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಜಿಪಂ ಎಇಇ ರವಿಕುಮಾರ್, ಸಿದ್ದರಬೆಟ್ಟ ಗ್ರಾಪಂ ಅಧ್ಯಕ್ಷೆ ವಿನೋದ, ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ರಂಗಧಾಮಯ್ಯ, ನಾಗಭೂಷನ್, ಲಕ್ಷ್ಮೀಕಾಂತ, ಗಂಗರಂಗಯ್ಯ, ರಂಗರಾಜು ಸೇರಿದಂತೆ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker