ತುಮಕೂರು
ಶ್ರೀಶಿವಕುಮಾರ ಮಹಾಸ್ವಾಮಿಗಳ 115ನೇ ಜನ್ಮದಿನೋತ್ಸವ : ಅಮಿತ್ ಷಾ ಆಗಮನಕ್ಕೆ ಕ್ಷಣಗಣನೆ
ತುಮಕೂರು: ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀಶಿವಕುಮಾರ ಮಹಾಸ್ವಾಮಿಗಳ 115ನೇ ಜಯಂತೋತ್ಸವ ಕಾರ್ಯಕ್ರಮ ನಡೆದಾಡುವ ದೇವರ ಬಸವ ಭಾರತ ಕಾರ್ಯಕ್ರಮ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಕೇಂದ್ರ ಗೃಹ ಹಾಗೂ ಸಹಕಾರ ಸಚಿವವರಾದ ಅಮಿತ್ ಷಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಲಿಂಗೈಕ್ಯ ಮಹಾಸ್ವಾಮೀಜಿಯವರ ಗದ್ದುಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರೊಂದಿಗೆ ಭೇಟಿನೀಡಿ ನಂತರ ವೇದಿಕೆಗೆ ಅವರು ಆಗಮಿಸಲಿದ್ದಾರೆ..
ನಾಡಿನಾದ್ಯಂತ ಮಠದ ಭಕ್ತರು ಆಭಿಮಾನಿಗಳು ಸಾಗರೋಪಾದಿಯಲ್ಲಿ ಕಾರ್ಯಕ್ರಮಕ್ಕೆ ಆಮಿಸುತ್ತಿದ್ದು, ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ತುಮಕೂರು ಸೇರಿದಂತೆ ಮಠದ ಆವರಣವೆಲ್ಲಾ ಹಬ್ಬದ ಸಂಭ್ರಮ ಎದ್ದು ಕಾಣುತ್ತಿದ್ದೆ.
ಮಠದಲ್ಲಿ ನಿರಂತರ ದಾಸೋಹ ಸಾಂಗವಾಗಿ ನಡೆಯುತ್ತಿದೆ.