ತುಮಕೂರು : ಸಿದ್ಧಗಂಗಾ ಮಠಕ್ಕೆ ಇಂದಿರಾಗಾಂಧಿ,ರಾಜೀವ್ ಗಾಂಧಿ, ಸೋನಿಯಾಗಾಂಧಿ
ಅವರು ಭೇಟಿ ನೀಡಿದ್ದು, ಮಠದೊಂದಿಗೆ ಅವಿನಾಭಾವ ಸಂಬಂಧ ನಮಗೆ ಇದೆ ಎಂದು ಕಾಂಗ್ರೆಸ್
ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ನಡೆದಾಡುವ ದೇವರು, ಕರ್ನಾಟಕ ರತ್ನ ಡಾ.ಶ್ರೀಶಿವಕುಮಾರಸ್ವಾಮೀಜಿಗಳ 115ನೇ ಗುರುವಂಧನಾ
ಕಾರ್ಯಕ್ರಮದ ಹಿನ್ನೇಲೆಯಲ್ಲಿ ಗುರುವಾರ ಸಂಜೆ ಶ್ರೀಮಠಕ್ಕೆ ಭೇಟಿ ನೀಡಿ,ಹಿರಿಯ ಶ್ರೀಗಳ ಗದ್ದುಗೆ
ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದ ನಂತರ,ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ
ಭಾಗವಹಿಸಿ, ಕಿರಿಯ ಶ್ರೀಗಳ ಆಶೀರ್ವಾದ ಪಡೆದ ನಂತರ ಮಾತನಾಡುತಿದ್ದ ಅವರು,ಸಿದ್ದಗಂಗಾ
ಮಠದಲ್ಲಿ ವಿದ್ಯಾರ್ಥಿಗಳೊಂದಿಗೆ, ಸ್ವಾಮೀಜಿಗಳೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದು
ಸಂತೋಷದ ವಿಷಯ, ಜಾತಿ ಮತ ಧರ್ಮದ ಬೇಧವಿಲ್ಲದೆ ಎಲ್ಲ ಸಮುದಾಯಗಳಿಗೆ ವಿದ್ಯಾಭ್ಯಾಸ
ವನ್ನು ನೀಡುವ ಮೂಲಕ ಲಕ್ಷಾಂತರ ಮಕ್ಕಳಿಗೆ ಬೆಳಕು ನೀಡಿದ್ದಾರೆ ಎಂದರು.
ದೇಶದಲ್ಲಿ ಹರಡುತ್ತಿರುವ ದ್ವೇಷಕ್ಕೆ ಪರಿ ಹಾರ ಸಿದ್ಧಗಂಗಾ ಮಠದಲ್ಲಿದೆ,ಇಲ್ಲಿರುವ ಸೌಹಾರ್ದತೆ
ಇಡೀ ದೇಶಕ್ಕೆ ಇಂದು ಅವಶ್ಯಕವಾಗಿದ್ದು, ಮಠದೊಂದಿಗೆ ಇರುವ ಸಂಬಂಧವನ್ನು ಮುಂದು
ವರೆಸಿಕೊಂಡು ಹೋಗುವುದಾಗಿ ಹೇಳಿದ ಅವರು,ಡಾ.ಶಿವಕುಮಾರಸ್ವಾಮೀಜಿ ಅವರು ಇಡೀ ದೇಶಕ್ಕೆ
ಮಾರ್ಗದರ್ಶನ ಮಾಡಿದರು ಎಂದು ಸ್ಮರಿಸಿದರು.ಕಳೆದ ಬಾರಿ ಮಠಕ್ಕೆ ಭೇಟಿ ನೀಡಿದ್ದಾಗ
ಡಾ.ಶಿವಕುಮಾರಸ್ವಾಮೀಜಿ ಅವರು ನಮ್ಮೊಂದಿಗೆ ಇದ್ದರು.ಆದರೆ ಈಗ ಅವರು ನಮ್ಮೊಂದಿಗಿಲ್ಲ
ಆದರೆ ನಮಗೆ ದಾರಿದೀಪವಾಗಿದ್ದಾರೆ, ಯುವಕರಿಗೆ ಶಿಕ್ಷಣ, ಬಡವರಿಗೆ ಉದ್ಯೋಗ ನೀಡಬೇಕಾಗಿದೆ,
ಅವರ ದಾರಿಯಲ್ಲಿಯೇ ಸಾಗಬೇಕಿದೆ ಎಂದು ಹೇಳಿದರು.
ಸಿದ್ಧಗಂಗಾ ಮಠದ ಮಠಾಧೀಶರಾದ ಸಿದ್ಧಲಿಂಗಸ್ವಾಮೀಜಿ ಮಾತನಾಡಿ, ರಾಹುಲ್ ಗಾಂಧಿ ಭೇಟಿ
ನೀಡಿ, ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿರುವುದು ಸಂತಸದ ವಿಷಯ, ಸೋನಿಯಾಗಾಂಧಿ ಅವರು
ಮಠಕ್ಕೆ ಬಂದಾಗ ಅವರ ಕಾರಿನಲ್ಲಿ ನಾನು ,ಡಾ.ಶಿವಕುಮಾರಸ್ವಾಮೀಜಿ, ಸೋನಿಯಾ ಅವರು ಪ್ರಯಾಣ
ಮಾಡಿದ್ದೆವು.ಬಸವಣ್ಣನವರು 12ನೇ ಶತಮಾನದಲ್ಲಿ ಹೇಳಿರುವಂತೆ ಎಲ್ಲರನ್ನು ನಮ್ಮವರು ಎಂದು
ಭಾವಿಸಬೇಕು.ಇಂತಹ ಮನೋಭಾವನೆಯನ್ನು ಸಿದ್ಧಗಂಗಾ ಮಠ ಮಾಡುತ್ತಿದೆ ಎಂದು ರಾಹುಲ್
ಅವರು ಸ್ಮರಿಸಿದ್ದಾರೆ ಎಂದು ಹೇಳಿದರು.
ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ, ಪ್ರಜಾ ಪ್ರಭುತ್ವದಲ್ಲಿ ನಾಯಕತ್ವ ಚೆನ್ನಾ
ಗಿದ್ದಾಗ ಮಾತ್ರ ಅದು ಚೆನ್ನಾಗಿರುತ್ತದೆ ಎಂದು ಸ್ವಾಮೀಜಿಗಳು ಹೇಳುತ್ತಿದ್ದರು, ಎಲ್ಲ ಗುಣಗಳನ್ನು
ಹೊಂದಿರುವ ರಾಹುಲ್ ಅವರಿಗೆ ದೇವರು ಎಲ್ಲ ರೀತಿಯ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
ಈ ವೇಳೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಬಿ.ಕೆ.ಹರಿಪ್ರಸಾದ್,
ಈಶ್ವರ ಖಂಡ್ರೆ, ಕೆ.ಎಚ್.ಮುನಿಯಪ್ಪ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಮಾಜಿ
ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ವೆಂಕಟರಮಣಪ್ಪ, ಡಾ.ರಂಗನಾಥ್, ಮಾಜಿ ಶಾಸಕ
ರಫೀಕ್ ಅಹಮದ್,ಶಫಿ ಅಹಮದ್,ಎಂಎಲ್ಸಿ ರಾಜೇಂದ್ರ, ಬೆಮಲ್ ಕಾಂತರಾಜು ಇತರರಿದ್ದರು.