ಕೊರಟಗೆರೆ : ಪಟ್ಟಣ ಪಂಚಾಯಿತಿ ಉಳಿತಾಯ ಬಜೆಟ್: ಸ್ಥಾಯಿ ಸಮಿತಿ ಅದ್ಯಕ್ಷ ನಟರಾಜ್ ಮಂಡನೆ
ಕೊರಟಗೆರೆ : ಕೊರಟಗೆರೆ ಪಟ್ಟಣ ಪಂಚಾಯಿತಿಯ 2022-23 ರನೇ ಸಾಲಿನ 17,49,63,814 ಕೋಟಿ ಮೊತ್ತದ ಅಯವ್ಯಯವನ್ನು ಅದ್ಯಕ್ಷೆ ಕಾವ್ಯಶ್ರೀರಮೇಶ್ ಅದ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಅದ್ಯಕ್ಷ ನಟರಾಜ್ ಮಂಡಿಸಿದರು.
ಬುಧವಾರದಂದು ಪಟ್ಟಣಪಂಚಾಯತಿ ಸಭಾಂಗಣದಲ್ಲಿ ನಡೆದ ಅಯವ್ಯಯ ಸಭೆಯಲ್ಲಿ 17,49,63,814 ಕೋಟಿ ರೂ ಗಳ ಆಧಾಯ ನಿರೀಕ್ಷೆ 17,47,58,099 ಕೋಟಿ ಖರ್ಚು ಸೇರಿ ಒಟ್ಟು 2,05,715 ಲಕ್ಷ ಉಳಿತಾಯ ಬಜೆಟ್‌ನ್ನು ಮಂಡಿಸಲಾಯಿತು. ಪಟ್ಟಣಪಂಚಾಯತಿ ಆದಾಯದಲ್ಲಿ ಕಂದಾಯ ನಿರೀಕ್ಷೆ 1,06,23,000 ಕೋಟಿ ಬಿಟ್ಟರೆ ಉಳಿದ 12 ಮೂಲ ಆದಾಯ 1,10,40,814 ಕೋಟಿ ಸೇರಿ 2,16,63,814 ಕೋಟಿ ಪ.ಪಂ ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದ ಅನುದಾನ ನಿರೀಕ್ಷೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ್ ಕೋರಿಕೆಯ ಸರ್ಕಾರದ ಎಸ್.ಎಷ್.ಸಿ,ಅನುದಾನ (ವಿಶೇಷ ಅನುದಾನ) 6,00,00,000 ಕೋಟಿ ಸೇರಿ ಸರ್ಕಾರದ ನಿರೀಕ್ಷೆಯ ವಿವಿಧ 9 ಮೂಲಗಳ ಅನುದಾನ 9,33,00,000 ಕೋಟಿ ಒಟ್ಟು 15,33,00,000 ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ, ಖರ್ಚ್ ನಲ್ಲಿ 4,20,00,000 ಕೋಟಿ ಬೀದಿ ದೀಪ,ನೀರು ಸರಬರಾಜು ವಿದ್ಯುಚ್ಛಕ್ತಿ ಬಿಲ್ 4,20,00,000.ಕೋಟಿ ಹೆಚ್ಚಿನದಾಗಿದೆ. ಈ ಬಾರಿ ಬಜೆಟ್‌ನಲ್ಲಿ 2,50,64,000 ಕೋಟಿ ರಸ್ತೆ ಪುಟ್‌ಪಾತ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಉಳಿದ 15 ಯೋಜನೆ ಖರ್ಚು 14,92,74,099 ನಿರೀಕ್ಷೆ ಮಾಡಲಾಗಿದೆ. ಪಟ್ಟಣದ ಆಭಿವೃದಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಬಜೆಟ್ ನಂತರ ಸದಸ್ಯ ಎ.ಡಿ.ಬಲರಾಮಯ್ಯ ಪಟ್ಟಣ ಪಂಚಾಯತಿಯಲ್ಲಿ ಅಂಗಡಿ ಮಾಳಿಗೆಗಳ ಆದಾಯ ಕಡಿಮೆಯಾತ್ತಿದ್ದು ಕೂಡಲೇ ಹೆಚ್ಚು ಅಂಗಡಿ ಮಾಳಿಗೆಗಳ ನಿರ್ಮಾಣಕ್ಕೆ ಮತ್ತು ಬಾಕಿ ಇರುವ ಬಾಡಿಗೆ ವಸೂಲಿಗೆ ಕ್ರಮ ಕೈಗೋಳ್ಳುವಂತೆ ತಿಳಿಸಿದರು.
ಅಯವ್ಯಯ ಸಬೆಯಲ್ಲಿ ಮುಖ್ಯಾಧಿಕಾರಿ ಲಕ್ಷ್ಮಣ್‌ಕುಮಾರ್, ಉಪಾದ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ಸದಸ್ಯರುಗಳಾದ ಪುಟ್ಟನರಸಯ್ಯ, ಕೆ.ಆರ್.ಓಬಳರಾಜು, ಕೆ,ಎನ್,ಲಕ್ಷೀನಾರಾಯಣ, ನಾಗರಾಜು, ಪ್ರದೀಪ್‌ಕುಮಾರ್, ನಂದೀಶ್, ಹೆಮಲತಾ, ಮಂಜುಳ, ಅನಿತಾ, ಹುಸ್ನಾಫಾರಿಯಾ, ನಾಮಿನಿ ಸದಸ್ಯ ಗೋವಿಂದರಾಜು, ರಂಗನಾಥ್, ಆರ್.ಐ.ವೀರಭದ್ರಚಾರ್, ಸಿಬ್ಬಂದಿಗಳಾದ ಮಹೇಶ್ವರಿ, ಮಹೇಶ್, ನಾಗರತ್ನಮ್ಮ, ಶೈಲೇಂದ್ರ, ಜಗದೀಶ್, ಸಾವಿತ್ರಮ್ಮ, ನರಸಿಂಹಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.