ತುರುವೇಕೆರೆ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾಗಿ ಶೀಲಾಶಿವಪ್ಪನಾಯ್ಕ ಆಯ್ಕೆ
ತುರುವೇಕೆರೆ : ಸ್ಥಳೀಯ ಪಟ್ಟಣ ಪಂಚಾಯ್ತಿ ನೂತನ ಉಪಾಧ್ಯಕ್ಷರಾಗಿ ಶೀಲಾ ಶಿವಪ್ಪನಾಯ್ಕ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯಿತಿಯ ಹಿಂದಿನ ಉಪಾಧ್ಯಕ್ಷೆ ಭಾಗ್ಯ ಮಹೇಶ್ ರವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಯೀಮ್ ಉನ್ನಿಸ್ಸಾ ಕರ್ತವ್ಯ ನಿರ್ವಹಿಸಿದರು. 14 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಉಪಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಶೀಲಾಶಿವಪ್ಪನಾಯ್ಕ ಹೊರೆತು ಪಡಿಸಿ ಯಾವ ಸದಸ್ಯರು ನಾಮಪತ್ರ ಸಲ್ಲಿಸಲಿಲ್ಲ, ಅಂತಿಮವಾಗಿ ಕಣದಲ್ಲಿ ಉಳಿದ ಶೀಲಾ ಶಿವಪ್ಪನಾಯ್ಕ ಉಪಾದ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ನಯೀಮುನ್ನಿಸ್ಸಾ ಘೋಷಣೆ ಮಾಡಿದರು.
ನೂತನ ಉಪಾದ್ಯಕ್ಷ ಶೀಲಾಶಿವಪ್ಪನಾಯ್ಕ ಮಾತನಾಡಿ ತಾವು ಉಪಾಧ್ಯಕ್ಷರಾಗಲು ಸಹಕರಿಸಿದ ಶಾಸಕರಾದ ಮಸಾಲಾ ಜಯರಾಮ್ ಹಾಗೂ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರಿಗೂ ನೂತನ ಉಪಾಧ್ಯಕ್ಷೆ ಶೀಲಾ ಶಿವಪ್ಪ ನಾಯ್ಕ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು..
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಚಿದಾನಂದ್, ಸದಸ್ಯರಾದ ಆಂಜನ್ ಕುಮಾರ್, ಎನ್.ಆರ್.ಸುರೇಶ್, ಯಜಮಾನ್ ಮಹೇಶ್, ಮಧು, ಸ್ವಪ್ನಾ, ಭಾಗ್ಯ ಮಹೇಶ್, ಆಶಾ ರಾಜಶೇಖರ್, ಮುಖ್ಯಾಧಿಕಾರಿ ಮಂಜುಳಾ ದೇವಿ. ಆರೋಗ್ಯ ನಿರೀಕ್ಷಕಿ ಅಪ್ಸಿಯಾಬಾನು, ರಂಗನಾಥ್ ಸೇರಿದಂತೆ ಹಲವರು ಇದ್ದರು.