ತಿಪಟೂರು
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸರ್ಕಾರಿ ಶಾಲೆಗಳು ಪೂರಕ : ಜಿ.ಆರ್.ಜಯರಾಂ
ತಿಪಟೂರು : ಕರಡಾಳು ಸಂತೆ ಮೈದಾನ ಶಾಲೆಯಲ್ಲಿ ಇತ್ತೀಚಿಗೆ ಚಿಣ್ಣರ ಚಿಲಿಪಿಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ ಶಶಿಧರ್ ಇಂದು ಸರ್ಕಾರಿ ಶಾಲೆಗಳು ಎಲ್ಲ ರಂಗಗಳಲ್ಲಿ ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡುತ್ತಾ ಖಾಸಗಿ ಶಾಲೆಗಳಿಗೆ ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿವೆ ಹಾಗೂ ತೋರಿಸುತ್ತಿವೆ ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಆರ್. ಜಯರಾ೦ ಸರ್ಕಾರಿ ಶಾಲೆಗಳು ಪಠ್ಯಕ್ಕೆ ಸೀಮಿತವಾಗದೆ ಮಗುವಿನ ಸರ್ವಾಂಗೀಣ ಪ್ರಗತಿ ಗೆ ಶ್ರಮಿಸುತ್ತವೆ ಕಲೆ ,ಸಾಹಿತ್ಯ, ಸಂಸ್ಕೃತಿ ,ಇವುಗಳನ್ನು ಉಳಿಸಿ ಬೆಳೆಸುವ ಕೈಂಕರ್ಯ ಸರ್ಕಾರಿ ಶಾಲೆಗಳಿಂದ ನಡೆಯುತ್ತದೆ ಎಂದರು ಈ ಕಾರ್ಯಕ್ರಮದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದಈ ಶಾಲೆಯ ಎಲ್ಲ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಗಳು, ಅಡುಗೆ-ಸಹಾಯಕರು ಎಲ್ಲರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ದರ್ಶನ್ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಹೆಚ್. ಸಿ. ಓಂಕಾರಮೂರ್ತಿ, ಸಹಕಾರ್ಯದರ್ಶಿ ಸಿ.ಎಸ್. ನಾಗರಾಜು ,ಶಿಕ್ಷಕರಾದ ಸುಜಾತ, ಎಸ್ಡಿಎಂಸಿ ಅಧ್ಯಕ್ಷರಾದ ಕೆ ಗೋಪಿ ಮುಂತಾದವರು ಮಾತನಾಡಿದರು ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಭಾಗ್ಯ ಮಂಜುನಾಥ್,ಸದಸ್ಯರುಗಳು ಉಪಸ್ಥಿತರಿದ್ದರು.ಎಸ್ ಡಿ ಎಂ ಸಿ. ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ಲಕ್ಷ್ಮೀದೇವಿ, ಪಲ್ಲವಿ ,ಮಹಾಲಕ್ಷ್ಮಮ್ಮ, ಆನಂದ್ ,ಸದರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರುಗಳಾದ ದೊಡ್ಡಯ್ಯ, ಲಲಿತಮ್ಮ,ಅಕ್ಷರ ದಾಸೋಹ ಅಡುಗೆ ಸಹಾಯಕರಾದ ಜಯಕ್ಕ, ಯಶೋದಮ್ಮ ಬೇಬಿ, ಶಾಲೆಯ ಸಾಧಕ ವಿದ್ಯಾರ್ಥಿಗಳಾದ ಸುಪ್ರಿಯಾ ,ಸುಷ್ಮಾ, ಸುಮಾ, ಅಶೋಕ್ ಕುಮಾರ್, ಬಿಂದುಶ್ರೀ, ಪೃಥ್ವಿ, ಇವರುಗಳನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ಟಿ. ಕೆ .ಪಟ್ಟಾಭಿರಾಮು, ಛಾಯಾ ಎನ್. ಇವರುಗಳನ್ನು ಗೌರವಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮದ ಹಿರಿಯರು ಮುಖಂಡರು ಭಾಗವಹಿಸಿದ್ದರು . ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋಪಿ.ಕೆ.ಎಲ್.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಓಂಕಾರ ಮೂರ್ತಿ ನಿರೂಪಿಸಿ,ಟಿ.ಕೆ.ಪಟ್ಟಾಭಿ ರಾಮು ಸ್ವಾಗತಿಸಿದರು.