ತುಮಕೂರು

ಹೆಣ್ಣು ಸಂಸಾರವನ್ನು ರೂಪಾಂತರಗೊಳಿಸುವವಳು : ಲೇಖಕಿ ಮಲ್ಲಿಕಾ ಬಸವರಾಜು

ತುಮಕೂರು : ಹೆಣ್ಣು ಸಂಸಾರವನ್ನು ರೂಪಾಂತರಗೊಳಿಸುವವಳು, ಹೆಣ್ಣು ಮಕ್ಕಳಿಗೆ ಸಮರ್ಥ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯವಿದೆ, ಪುರುಷನಾದವನು ಅವಳನ್ನು ಜೊತೆಜೊತೆಗೆ ಕರೆದುಕೊಂಡು ಹೋಗಬೇಕು ಅಗಲೇ ಮಹಿಳಾ ಸಮಾನತೆಗೆ ಒಂದು ಅರ್ಥ ಬರುತ್ತದೆ ಎಂದು ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಶಾಖೆಯ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾ ಬಸವರಾಜುರವರು ಹೇಳಿದರು. ಅವರು ತುಮಕೂರು ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ , ಕರ್ನಾಟಕ ಲೇಖಕಿಯರ ಸಂಘ, ಸಿದ್ದಾರ್ಥ ಇನ್ಸ್ ಟ್ಯುಟ್ ಆಪ್ ಬ್ಯೂಸಿನೆಸ್ ಮ್ಯಾನೆಜ್ ಮೆಂಟ್ ಹಾಗೂ ತುಮಕೂರಿನ ಗುಬ್ಬಚ್ಚಿ ಸಂಘದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮಹಿಳಾ ಕವಿಘೋಷ್ಠಿ, ಹಾಗೂ ವಿಶ್ವ ಗುಬ್ಬಚ್ಚಿ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆ ಸಬಲರಾಗಿದ್ದರೂ ಆಕೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ, ಅವಳ ಈ ಸ್ಥಿತಿಗೆ ಕಾರಣರಾರು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಶ್ರೀಮತಿ ಜಯಾ ಭಾಸ್ಕರಾಚಾರ್ ಅವರು ಬರೆದಿರುವ ರಂಗೋಲಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ತುಮಕುರಿನ ಪ್ರಾಂಶುಪಾಲರಾದ ಡಾ ರಜನಿ ಎಂ, ಸೃಷ್ಟಿ ಎನ್ನುವುದು ಮಹಿಳೆಗೆ ಜನ್ಮದತ್ತವಾಗಿ ಬಂದಿದೆ, ಇಂಥಹ ಮಹಿಳಿಗೆ ಸಮಾನ ಗೌರವ ಕೊಡುವುದು ಇಂದಿನ ಸಮಾಜದ ಆದ್ಯ ಕರ್ತ್ಯವ್ಯ, ಮಹಿಳೆಯ ಸ್ಪರ್ಷವಿಲ್ಲದ ಜೀವನದಲ್ಲಿ ಯಾವ ವಿಷಯವೂ ಸಂಪೂರ್ಣವಾಗುವುದಿಲ್ಲ, ಅಷ್ಟು ಜನರ ಜೀವನದಲ್ಲಿ ಮಹಿಳೆ ಹಾಸುಹೊಕ್ಕಾಗಿದ್ದಾಳೆ, ಸಾಮಾಜಿಕ ಅಸ್ಥಿರತೆಯ ಸಂದರ್ಭದಲ್ಲಿ ಸ್ತ್ರೀಗೆ ಮಹತ್ವ ಜಾಸ್ತಿಯಾಗಿದೆ ಎಂದು ಅವರು ತಿಳಿಸಿದರು.

ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ದೆಯನ್ನು ಉದ್ಘಾಟಿಸಿದ ಖ್ಯಾತ ಚಿತ್ರಕಾರ ಶ್ರೀ ಡೇವಿಡ್ ರವರು ಮಾತನಾಡಿ ಗುಬ್ಬಚ್ಚಿ ದಿನದಂದು ವಿಶ್ವ ಮಹಿಳಾದಿನಾಚರಣೆಯನ್ನು ಆಚರಿಸುತ್ತಿರುವುದು ಯೋಗಾಯೋಗಾ, ಹಳ್ಳಿಗಳ ಕಡೆ ಹೆಣ್ಣನ್ನು ಗುಬ್ಬಿಗೆ ಹೋಲಿಸುತ್ತಾರೆ, ಯಾಕೆಂದರೆ ಅವಳು ಅಷ್ಟು ಸೂಕ್ಷ÷್ಮಮತಿ, ಹೆಣ್ಣನ್ನು ತಾಯಿಯಾಗಿ , ಮಗಳಾಗಿ ದೇವತೆಯಾಗಿ, ತಂಗಿಯಾಗಿ ಅಕ್ಕನಾಗಿ ನೋಡುತ್ತೇವೆ ಆದರೂ ಅವಳನ್ನು ಶೋಷಣೆಗೆ ಒಳಪಡಿಸುತ್ತಿರುವುದು ವಿಪರ್ಯಾಸ ಎಂದರು.
ತುಮಕೂರಿನ ಗುಬ್ಬಚ್ಚಿ ಸಂಘದ ಅಧ್ಯಕ್ಷರಾದ ಅಭಯ್ ಪಿ ನಾಡಿಗ್ ಮಾತನಾಡಿ ಮಾನವನ ಮಿತಿಮೀರಿದ ಆಸೆಯಿಂದಾಗಿ ಪರಿಸರ ತನ್ನ ಸಮತೋಲನವನ್ನು ಕಳೆದುಕೊಂಡು ವಿನಾಶದತ್ತ ಹೆಜ್ಜೆ ಹಾಕುತ್ತಿದ್ದೇವೆ. ಇದು ಜೀವಸಂಕುಲಕ್ಕೆ ಸಂಚಕಾರ ತಂದಿದ್ದು ಗುಬ್ಬಿಗಳು ವಿನಾಶದ ಅಂಚಿಗೆ ತಲುಪುತ್ತಿದೆ ಎಂದರಲ್ಲದೇ ಗುಬ್ಬಿಗಳ ಸಂತತಿ ಉಳಿಸಿ ಬೆಳೆಸಲು ಜನಸಾಮಾನ್ಯರು ಮಾಡಬಹುದಾದ ಕಾರ್ಯಗಳ ಬಗ್ಗೆ ವಿವರಿಸಿದರು.
ಮಹಿಳಾ ಕವಿಷ್ಘೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀಮತಿ ಆರತಿ ಪಟ್ರಮೆ ಮಾತನಾಡಿ ಸಾಹಿತ್ಯವನ್ನು ತಿರುಚದೆ ನೈಜ ಪರಿಸ್ಥಿತಿಯನ್ನು ಬಿಂಬಿಸುವ ಸಾಹಿತ್ಯ ಕೃಷಿ ಬರಬೇಕು, ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಸಂಸ್ಕ್ರತಿ ಬಿಂಬಿಸುವ ಪಠ್ಯಕ್ರಮ ಬರಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಕಮಲಾ ಬಡ್ಡಿಹಳ್ಳಿ ಮಾತನಾಡುತ್ತಾ ಪುರುಷ ಹಾಗೂ ಮಹಿಳೆಯರ ಅಸಮಾನತೆಯ ದೃಷ್ಟಿ ಕೋನದಿಂದಾಗಿ ಸಮಾಜಿಕವಾಗಿ, ಕೌಟುಂಬಿಕವಾಗಿ ಸಂಬAಧಗಳು ಹದಗೆಡುತ್ತಿವೆ, ಇದು ಮುಂದಿನ ಪೀಳಿಗೆಯ ಮಕ್ಕಳಲ್ಲಿ ಮಾನಸಿಕ ಒತ್ತಡವನ್ನು ಬೀತ್ತುತ್ತಿದೆ ಹಾಗೂ ಮಕ್ಕಳ ಸರ್ವತೋಮುಖ ಆರೋಗ್ಯಕರ ಬೆಳವಣಿಗೆಗೆ ಹೊಡೆತ ಬೀಳುತ್ತಿದೆ. ಆದರಿಂದ ಇಂದು ಪುರುಷ ಹಾಗೂ ಮಹಿಳೆ ಅಸಮಾನತೆಯ ಆಚೆ ಬಂದು ಪರಸ್ಪರ ಗೌರವ ಸಮಾನತೆಯಿಂದ ಬದುಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೆ ಸಮಯದಲ್ಲಿ 28ನೇ ವಾರ್ಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಲಾಯಿತು.28ನೇ ವಾರ್ಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನಯ್ಯ ಎಂ.ಜಿ, ಸಿದ್ದಾರ್ಥ ಇನ್ಸಿ÷್ಟಟ್ಯುಟ್ ಆಪ್ ಬ್ಯೂಸಿನೆಸ್ ಮ್ಯಾನೆಜ್ ಮೆಂಟಿನ ಉಪನ್ಯಾಸಕರಾದ ಶ್ರೀ ಸುರೇಂದ್ರ ಉಪ್ತಸ್ಥಿತರಿದ್ದರು. ಕಾಲೇಜಿನ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕವಿಷೋಷ್ಠಿಯ ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಶಾಖೆಯ ಉಪಾಧ್ಯಕ್ಷರಾದ ಶ್ರೀಮತಿ ಇಂದಿರಾ ಸಣ್ಣ ಮುದ್ದಯ್ಯ ಉಪಸ್ಥಿತರಿದ್ದರು. ಶಿಕ್ಷಕಿ ಕಾಮಾಕ್ಷಿಯವರ ಪ್ರಾರ್ಥನ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು, ತುಮಕೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಶ್ರೀಜಿ.ಕೆ ಕುಲಕರ್ಣಿ ಅಥಿತಿಗಳನ್ನು ಅಹ್ವಾನಿಸಿದರು, ಗೌರವ ಕಾರ್ಯದರ್ಶಿಗಳಾದ ಪಿ. ರಮೇಶ್ ಸ್ವಾಗತಿಸಿದರು, ಡಾ ಪ್ರಕಾಶ್ ಕೆ ನಾಡಿಗ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಆಶ್ವಿನಿ ವಿ. ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker