ಪಾವಗಡ
ಪಳವಳ್ಳಿ ಕಟ್ಟೆ ಬಸ್ ದುರಂತ : ಗಾಯಗೊಂಡ ವಿದ್ಯಾರ್ಥಿಗಳ ಚಿಕೆತ್ಸೆಗೆ ಕೆ.ಎನ್.ಆರ್.ಅಭಿಮಾನ ಬಳಗ ಮತ್ತು ಹೆಲ್ಫ್ ಸೊಸೈಟಿಯಿಂದ ಆರ್ಥಿಕ ನೆರವು

ಪಾವಗಡ : ಇತ್ತೀಚೆಗೆ ಪಾವಗಡ ಸಮೀಪ ಪಳವಳ್ಳಿ ಕಟ್ಟೆ ಮೇಲೆ ಬಸ್ ಅಪಘಾತವಾಗಿ 6 ಜನ ಮೃತಪಟ್ಟು 30 ಕ್ಕೂ ಹೆಚ್ಚು ಗಾಯಳುಗಳು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸಾವು ಬದುಕಿನ ನಡುವೆ ಜೀವನ್ ಮರಣದ ಹೋರಾಟ ನಡೆಸುತ್ತಿದ್ದು ಎಲ್ಲಾ ಗಾಯಳುಗಳು ಕಡು ಬಡವರಾಗಿದ್ದು ಅಂತಹ ಗಾಯಳುಗಳಲ್ಲಿ ಒಬ್ಬರಾದ ಮಹೇಂದ್ರ ಎಂಬ ವಿದ್ಯಾರ್ಥಿಗೆ ಶಸ್ತ್ರ ಚಿಕೆತ್ಸೆಗೆ ನೆರವನ್ನು ಕೋರಿ ಪಾಲಕರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ ಹಿನ್ನಲೆಯಲ್ಲಿ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಕೆ. ಎನ್ ಆರ್ ಅಭಿಮಾನ ಬಳಗ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಆರ್ಥಿಕ ಸಹಾಯವನ್ನು ಹೆಲ್ಪ್ಯಿಂಗ್ ಹ್ಯಾಂಡ್ ಸಂಘಟನೆ ಮುಖ್ಯಸ್ತರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನೆರವನ್ನು ವಿತರಿಸಿ ಮಾತನಾಡಿದ ಕೆ ಎನ್ ಆರ್ ಅಭಿಮಾನ ಬಳಗದ ಅಧ್ಯಕ್ಷ ಡಿ. ಸಿ. ಸಿ.ಶ್ರೀನಿವಾಸ್ ಮಾತನಾಡುತ್ತ ರಾಜ್ಯ ಸರ್ಕಾರ ಮೃತ ಪಟ್ಟ ಕುಟುಂಬಗಳಿಗೆ ತಲಾ ಇಪ್ಪತ್ತು ಲಕ್ಷ ಹಾಗೂ ಗಾಯಳುಗಳಿಗೆ ಚಿಕಿತ್ಸೆ ಯ ಸಂಪೂರ್ಣ ವೆಚ್ಚ ಬರಿಸುವಂತೆ ಈ ಮೂಲಕ ಒತ್ತಾಯಿಸಿದರು.
ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡುತ್ತ ಸರ್ಕಾರ ಹಾಗೂ ಜನಪ್ರತಿನಿದಿಗಳು ಸಂಪೂರ್ಣ ವೈದ್ಯಕೀಯ ವೆಚ್ಚ ಬರಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಗಾಯಳುಗಳ ಪೋಷಕರು ಗೋಳಡುತ್ತಿರುವುದನ್ನು ನೋಡಿದರೆ ಅರ್ಥವಾಗುತ್ತಿದೆ ಎಂದು ಹೇಳುತ್ತಾ, ಸರ್ಕಾರ ಸೂಕ್ತವಾದ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಹಾಗೂ ಹೆಲ್ಪ್ಯಿಂಗ್ ಹ್ಯಾಂಡ್ ಸ್ಥಳೀಯ ಪದಾಧಿಕಾರಿಗಳಾದ ಮಣಿಕಂಠ, ದರ್ಶನ್, ಶ್ರೀಕಾಂತ್, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು