ಕೊರಟಗೆರೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ : ಬಗರ್‌ಹುಕ್ಕುಂ ಸಾಗುವಳಿದಾರರಿಗೆ ಹೊರಜಿಲ್ಲೆಯ ಪ್ರಭಾವಿ ವ್ಯಕ್ತಿಗಳಿಂದ ರೈತರಿಗೆ ಅನ್ಯಾಯ

ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೊಬಳಿಯ ಚಿಕ್ಕಪಾಳ್ಯ ಗ್ರಾಮ ವಾಸ್ತವ್ಯದಲ್ಲಿ ಅಕ್ಕಾಜಿಹಳ್ಳಿಯ ಸರ್ವೆ ನಂ 33 ಮತ್ತು 34 ರ ಹೊರ ಜಿಲ್ಲೆಯವರ ಅಕ್ರಮ ಸಾಗುವಳಿ, ಸ್ವಾಧೀನ ದೌರ್ಜನ್ಯ ಹಾಗೂ ಕಾನೂನು ದುರ್ಬಳಕೆ ಆಗುತ್ತಿರುವ ಬಗ್ಗೆ ರೈತರು ತಹಶೀಲ್ದಾರರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ಸರ್ಕಾರದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವು ಹೊಳವನಹಳ್ಳಿ ಹೋಬಳಿಯ ಚಿಕ್ಕಪಾಳ್ಯದಲ್ಲಿ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅಧ್ಯಕ್ಷತೆ ವಹಿಸಿದ್ದು ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಬಳಿ ಕುಂದುಕೊರತೆಗಳ ಅರ್ಜಿಗಳನ್ನು ಸಲ್ಲಿಸಲ್ಲು ಪ್ರತ್ಯೇಕ ಕೌಂಟರ್‌ಗಳನ್ನು ವ್ಯವಸ್ಥೆಮಾಡಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ನಂತರ ಇಲಾಖಾ ಸವಲತ್ತುಗಳ ಬಗ್ಗೆ ಅಧಿಕಾರಿಗಳು ವಿವರ ನೀಡಿದರು. ಈ ಸಂಧರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಸುರೇಶ್ ಸೇರಿದಂತೆ ಹಲವು ರೈತರುಗಳು ಈ ಭಾಗದ ಅಕ್ಕಾಜಿಹಳ್ಳಿ ಸ.ನಂ 33 ಮತ್ತು 34 ರ ಸಾಗುವಳಿಯಲ್ಲಿ ನಡೆದಿರುವ ಅನ್ಯಾಯ ಅಕ್ರಮ ಮತ್ತು ಕಾನೂನು ದುರ್ಬಳಕೆ ಬಗ್ಗೆ ಹಾಗೂ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ವ್ಯವಸಾಯವನ್ನೇ ನಂಬಿ ಜೀವನ ನಡೆಸುತ್ತಿರುವ ಬಡರೈತರನ್ನು ಹೊರ ಜಿಲ್ಲೆಯ ಪ್ರಭಾವಿ ವ್ಯಕ್ತಿಗಳು ರೈತರ ಸಾಗುವಳಿ ಜಮೀನನ್ನು ಅಧಿಕಾರಿಗಳೊಂದಿಗೆ ಹೊರ ಜಿಲ್ಲೆಯವರು ಶಾಮೀಲಾಗಿ ಲಕ್ಷಗಟ್ಟಲೇ ಹಣ ನೀಡಿ ಸಾಗುವಳಿ ಪಡೆದಿರುದಿರುತ್ತಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು ಸಾಗುವಳಿಯನ್ನು ಪಡೆಯಲೆಂದೆ ತಾಲ್ಲೂಕಿನಲ್ಲಿ ವಾಸವಿರುವ ಹಾಗೆ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಆಧಾರ್ ಮತ್ತು ಪಡಿತರ ಚೀಟಿಯನ್ನು ಕೆಲವೇ ದಿನಗಳಲ್ಲಿ ಮಾಡಿಸಿದ್ದಾರೆ. ತದನಂತರ ರಾತ್ರೋ ರಾತ್ರಿ ದುರ್ಬಲವಿರುವ ರೈತರ ಜಮೀನುಗಳಲ್ಲಿ ಕೃತಕ ರೀತಿಯ ಮನೆ ಸೃಷ್ಟಿಸಿರುತ್ತಾರೆ. ತಮ್ಮ ಜಮೀನಿನಲ್ಲಿ ನ್ಯಾಯ ಕೇಳಲು ಹೋದ ರೈತರುಗಳ ಮೇಲೆ ಪೊಲೀಸರನ್ನು ಬಿಟ್ಟು ಹೊರದಬ್ಬಿಸಿ ರೈತರುಗಳ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ದಾಖಲೆಗಳನ್ನು ಸೃಷ್ಟಿಸಿಕೊಂಡು ಈಗ ಹೈಕೋರ್ಟ್ಗೆ ಅರ್ಜಿಸಲ್ಲಿಸಿ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈಗಾದರೆ ನಮ್ಮಗಳ ಗತಿಯೇನೆ ತಾವುಗಳು ಖುದ್ದಗಿ ಸ್ಥಳ ಪರಿಶೀಲನೆ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ ಈ ಸ.ನಂ ಗೆ ಸಂಬAದಿಸಿದAತೆ, 680 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 301 ಅರ್ಜಿಗಳನ್ನು ವಜಾ ಮಾಡಲು ಇಡಲಾಗಿದೆ. ಆದರೆ ಕ್ಷೇತ್ರದ ಶಾಸಕರು ಹಾಗೂ ಬಗರ್‌ಹುಕ್ಕುಂ ಕಮಿಟಿಯ ಅಧ್ಯಕ್ಷರಾದ ಡಾ. ಜಿ.ಪರಮೇಶ್ವರ್ ರವರು ಎಲ್ಲಾ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡಿ ವಿಲೇಮಾಡುವಂತೆ ನಿರ್ದೇಶನ ನೀಡಿದ್ದಾರೆ. ಅದರಂತೆ ಅವುಗಳ ಸ್ಥಳ ಪರಿಶೀಲನೆ ಮಾಡಲಾಗುವುದು ಇವುಗಳಲ್ಲಿ ಒಂದೇ ಜಾಗಕ್ಕೆ 2-3 ಅರ್ಜಿಗಳ ಪರಿಶೀಲನೆ, ಹೆಚ್ಚು ಜಮೀನಿದ್ದರು ಸರ್ಕಾರಿ ಜಮೀನು ಪಡೆಯುವ ಉದ್ದೇಶವುಳ್ಳವರ ಅರ್ಜಿಗಳನ್ನು ವಜಾ ಮಾಡಲಾಗುವುದು. ವಜಾದಲ್ಲಿರುವ 301 ಅರ್ಜಿಗಳನ್ನು ರೈತರಿಗೆ ಮತ್ತು ಮುಖಂಡರಿಗೆ ಪ್ರಸ್ತುತ ಪಟ್ಟಿಯನ್ನು ನೀಡಲಾಗುವುದು ಅವುಗಳ ಸತ್ಯಾ ಸತ್ಯತೆಯನ್ನು, ವಾಸ್ತವನ್ನು ತಿಳಿಸುವಂತೆ ಕೋರಿದರು. ಬಗರ್‌ಹುಕ್ಕುಂ ನಲ್ಲಿ ಯಾವುದೇ ಅಕ್ರಮ ನಡೆಯದಂತೆ, ಅರ್ಹರಿಗೆ ಅನ್ಯಾಯವಾಗದಂತೆ ಹಿಂದೆ ಅಕ್ರಮಗಳು ನಡೆದಿದ್ದಲ್ಲಿ, ಅವುಗಳನ್ನು ಸಹ ಪರಿಶೀಲಿಸಿ ಸ್ಥಳ ಪರಿಶೀಲನೆ ಮಾಡಲಾಗುವುದು. ಈಗಾಗಲೇ ಹೊರ ಜಿಲ್ಲೆಗಳ ಹಲವು ಅರ್ಜಿಗಳನ್ನು ವಜಾಮಾಡಲಾಗಿದೆ. ಇದರ ಪೈಕಿ 4 ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿರುವುದರಿಂದ ಅದರ ಆದೇಶವನ್ನು ಕಾಯಲಾಗುವುದು ರೈತರು ಸಹಕರಿಸುವಂತೆ ಕೋರಿದರು.
ಗ್ರಾಮ ವಾಸ್ಥವ್ಯದಲ್ಲಿ ಕಂದಾಯ ಇಲಾಖೆಗೆ 136, ತಾಲ್ಲೂಕು ಪಂಚಾಯತಿ 15, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ 3, ಬೆಸ್ಕಾಂ 3, ಭೂಮಾಪನ ಇಲಾಕೆಗೆ 2, ಪಶುಸಂಗೋಪನೆ 1, ಸಾರಿಗೆ 1, ಕೆಎಸ್‌ಆರ್‌ಟಿಸಿ 1, ಸಮಾಜಕಲ್ಯಾಣ 1, ಕೃಷಿ ಇಲಾಖೆ 2, ಜಿಲ್ಲಾ ಪಂಚಾಯತ್ 1ಸೇರಿದಂತೆ ಒಟ್ಟು 166 ಅರ್ಜಿಗಳು ಸ್ವೀಕೃತವಾಗಿವೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂ ಅಧ್ಯಕ್ಷೆ ರಾಮಕ್ಕ, ಉಪಾಧ್ಯಕ್ಷ ಜಗಧೀಶ್, ವಿವಿಧ ಇಲಖೆಗಳ ಅಧಿಕಾರಿಗಳಾದ ನಾಗರಾಜು, ಸಿದ್ದನಗೌಡ, ಸುದಾಕರ್, ರುದ್ರೇಶ್, ಕುಮಾರಸ್ವಾಮಿ, ಮಲ್ಲಯ್ಯ, ಅಂಬಿಕಾ, ರವಿಕುಮಾರ್, ಮೋಹನ್, ಕಂದಾಯ ಇಲಾಖೆಯ ಚಂದ್ರಪ್ಪ, ಪ್ರತಾಪ್‌ಕುಮಾರ್, ಮಹೇಶ್, ಜಯಪ್ರಕಶ್, ಮುರುಳಿ ಸೇರಿದಂತೆ ಇತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker