ಸಮಾಜದಲ್ಲಿ ಮಕ್ಕಳ ಉನ್ನತಿಗೆ ಶಿಕ್ಷಕರ ಪಾತ್ರ ಮಹತ್ವದ್ದು: ಡಾ.ಶ್ರೀಧರ್
ಮಂಜುನಾಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ : ಶಿಕ್ಷಕರು, ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ

ತಿಪಟೂರು : ಮಕ್ಕಳಿಗೆ ತಂದೆ-ತಾಯಿಯ ನಂತರದ ಸ್ಥಾನದಲ್ಲಿ ಶಿಕ್ಷಕರಿದ್ದು ಸಮಾಜದಲ್ಲಿ ಉತ್ತಮ ಸ್ಥಾನ, ಗೌರವವನ್ನು ಪಡೆದುಕೊಳ್ಳಲು ಮಾರ್ಗದರ್ಶಕರು, ಕಾರಣೀಭೂತರಾಗಿರುತ್ತಾರೆ ಎಂದು ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ತಿಳಿಸಿದರು.
ತಾಲ್ಲೂಕಿನ ಕರಡಾಳು ಸಂತೆ ಮೈದಾನದಲ್ಲಿ ಭಾನುವಾರ ಮಂಜುನಾಥ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಂತಹ ಶಕ್ತಿಯೂ ಪ್ರತಿಯೊಬ್ಬ ಶಿಕ್ಷಕರಿಗೂ ಇದೆ. ಅಂತಹ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು ದೊಡ್ಡವರಾದ ಮೇಲೆ ಸಾಧನೆಯನ್ನು ಮಾಡಿ ಶಿಕ್ಷಕರ ಮಂದೆ ನಿಂತಾಗ ಶಿಕ್ಷರಿಗೆ ಆಗುವ ಸಂತೋಷ ವರ್ಣಿಸಲು ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನದಲ್ಲಿದ್ದು ಬಾಲ್ಯದ ದಿನಗಳಲ್ಲಿ ಜ್ಞಾನವನ್ನು ತುಂಬುವ ಕಾರ್ಯವನ್ನು ಮಾಡುವವರು ಶಿಕ್ಷಕ ಮಾತ್ರ. ಪ್ರಾಥಮಿಕ ಹಂತದಲಲ್ಲಿಯೇ ಮಕ್ಕಳ ಜ್ಞಾನರ್ಜನೆಯ ಮಟ್ಟವನ್ನು ವೃದ್ಧಿಸುವತ್ತ ಶಿಕ್ಷಕರು ತೊಡಗುತ್ತಾರೆ. ಅಂತಹ ಶಿಕ್ಷಕರುಗಳು ನಿವೃತ್ತ ಹೊಂದಿ ವರ್ಷಗಳೆ ಕಳೆದ ನಂತರದಲ್ಲಿ ಗುರುವಂದನೆ ಸಲ್ಲಿಸುವ ಕಾರ್ಯವೂ ನಿಜಕ್ಕೂ ಶ್ಲಾಘನೀಯವಾದದ್ದು. ಶಿಕ್ಷಕರು ನಿಮ್ಮಿಂದ ಏನನ್ನೂ ಬಯಸುವುದಿಲ್ಲ, ಪ್ರತಿಯೊಬ್ಬರು ಸಾಧನೆ ಮಾಡಿ ಅವರ ಮುಂದೆ ನಿಂತಾಗ ಸಿಗುವ ನೆಮ್ಮದಿ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿರುತ್ತದೆ ಎಂದರು.
ಎಸ್.ವಿ.ಪಿ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎನ್.ರೇಣುಕಯ್ಯ ಮಾತನಾಡಿ ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹಿಂದೆ ಗುರುವುದು ನಿಂತು ಸರಿಯಾದ ಮಾರ್ಗದರ್ಶನ ನೀಡಿ ಗುರಿ ಸಾಧನೆಗೆ ಪ್ರೇರಣೆಯಾಗುತ್ತಿದ್ದರು. ಆದರೆ ಇಂದು ವಿದ್ಯಾರ್ಥಿಗಳು ಗುರುವಿನ ಮಾತು ಮಾರ್ಗದರ್ಶನದ ಅಗತ್ಯವಿಲ್ಲ ಎಂಬAತಿದ್ದು ಗುರಿಯನ್ನು ಹೊಂದಿರುವುದಿಲ್ಲ. ಇಮದಿನ ವಿದ್ಯಾರ್ಥಿಗಳ ಮನಃಸ್ಥಿತಿ ಬದಲಾಗಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಶಿಕ್ಷಕರುಗಳನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಗ್ರಾಮದ ಶಾಲೆಯ ತುಂಬೆಲ್ಲಾ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ದೇವರಾಜು, ಪ್ರವೀಣ್, ಲೋಕೇಶ್, ಕೃಷ್ಣಪ್ಪ, ಪಂಚಾಕ್ಷರಿ, ದರ್ಶನ್, ಕವಿತಾ, ಶಿವರುದ್ರ, ಮಂಜುನಾಥ್, ಮನು, ಎಸ್.ಕೆ.ಲೋಕೇಶ್, ಗುರುಮೂರ್ತಿ, ಯೋಗೇಶ್, ಎಸ್.ಸಿ.ರಮೇಶ್ ಇದ್ದರು.