ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪತ್ರಕರ್ತ ಕೆ.ವಿ.ಪುರುಷೋತ್ತಮ ಅವಿರೋಧ ಆಯ್ಕೆ
ಕೊರಟಗೆರೆ : ಕೊರಟಗೆರೆ ಪಟ್ಟಣದ ಪ್ರಸಿದ್ದ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರಾಗಿ ಕೆ.ವಿ.ಪುರುಷೋತ್ತಮ ಅವಿರೋಧವಾಗಿ ಆಯ್ಕೆಯಾದರು.
ಕರ್ನಾಟಕಸರ್ಕಾರ, ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ, ಅದ್ಯಕ್ಷರು ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ಜಿಲ್ಲಾಧಿಕಾರಿ ತುಮಕೂರು ಇವರ ನಡವಳಿಯಂತೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನಕ್ಕೆ ತಾಲೂಕು ಕಛೇರಿಗೆ ವ್ಯವಸ್ಥಾಪನಾ ಸಮಿತಿಗೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಸಲಾಗಿತ್ತು, ಸರ್ಕಾರದ ನಿಯಮದಂತೆ ಆರ್ಚಕ ಬಾಲಾಜಿ, ಕೆ.ರಾಘವೇಂದ್ರ, ಎಸ್.ಸುಷ್ಮಾರಾಣಿ, ಆರ್,ಎನ್.ನೇತ್ರಾ, ಡಾ.ಮಲ್ಲಿಕಾರ್ಜುನ್, ಕೆ.ವಿ.ಪುರುಷೋತ್ತಮ ಕೆ.ಎನ್.ಗಂಗಾಧರ, ಕೆ.ಎಲ್.ಗಿರೀಶ್, ಕೆ.ಎನ್.ಮಂಜುನಾಥ ರವರ 9 ಸದಸ್ಯರ ಸಮಿತಿ ರಚನೆಗೊಂಡಿತು. ಸೋಮವಾರಂದು ನಡೆದ ಅದ್ಯಕ್ಷ ಚುಣಾವಣೆಯಲ್ಲಿ ತಾಲೂಕು ತಹಸೀಲ್ದಾರ್ ನಾಹಿದಾ ಜಮ್ ಜಮ್ ರವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಎಲ್ಲಾ ಸದಸ್ಯರು ಕೆ.ವಿ.ಪುರುಷೋತ್ತಮ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಆಯ್ಕೆ ಪ್ರಕ್ರಿಯೆ ನಂತರ ತಹಶೀಲ್ದಾರ್ ನಹಿದಾ ಜಮ್ ಜಮ್ ಮಾತನಾಡಿ ಸರ್ಕಾರದ ಸುತ್ತೋಲೆಯಂತೆ ಸಿ, ವರ್ಗದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ 9 ಅರ್ಜಿಗಳು ಸಲ್ಲಿಕೆಯಾಗಿದ್ದವು, ಅವುಗಳನ್ನು ಕೊರಟಗೆರೆ ವೃತ್ತ ಆರಕ್ಷಕ ನಿರೀಕ್ಷಕರ ಪೋಲೀಸ್ ಠಾಣೆಗೆ ಪರಿಶೀಲನೆಗೆ ಕಳುಹಿಸಿ ನಂತರ ಮಧುಗಿರಿ ಉಪವಿಭಾಗಾಧಿಕಾರಿಗಳ ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಸಲ್ಲಿಸಿ ಸಮಿತಿ ರಚನೆಯಾಗಿರುತ್ತದೆ. ಸೋಮವಾರದಂದು ಸಮಿತಿ ಎಲ್ಲಾ ಸದಸ್ಯರು ಹಾಜರಾಗಿ ಅದ್ಯಕ್ಷರಾಗಿ ಕೆ,ವಿ,ಪುರುಷೋತ್ತಮ ರವರನ್ನು ಆಯ್ಕೆ ಮಾಡಿದ್ದು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.
ನೂತನ ಅದ್ಯಕ್ಷ ಕೆ.ವಿ.ಪುರುಷೋತ್ತಮ ಮಾತನಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನ ಪ್ರಸಿದ್ದ ಹಾಗೂ ಪುರಾತನ ದೇವಸ್ಥಾನವಾಗಿದ್ದು ದೇವಾಲಯದ, ಬೆಟ್ಟದ ಅಭಿವೃಧಿ ಸಾಕಷ್ಟು ಆಗಬೇಕಿದೆ, ದೇವಸ್ಥಾನ ಸಮಿತಿಯಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಸದಸ್ಯರುಗಳಿದ್ದು ಅವರ ಮಾರ್ಗದರ್ಶನ ದೇವಸ್ಥಾದ ವಿವಿಧ ಕಮಿಟಿಗಳ ಸಹಯೋಗ ಕ್ಷೇತ್ರದ ಶಾಸಕರ, ತಹಶೀಲ್ದಾರರ ಸಹಕಾರದೊಂದಿಗೆ ಭಕ್ತಾಧಿಗಳ ಜೊತೆಯೊಂದಿಗೆ ದೇವಸ್ಥಾನದ ಅಭಿವೃಧಿಗೆ ಎಲ್ಲರೂ ಒಟ್ಟುಗೂಡಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರೊಂದಿಗೆ ಮುಜರಾಯಿ ಇಲಾಖೆ ಲೆಕ್ಕಾಧಿಕಾರಿ ಚಿಕ್ಕರಾಜು ಗ್ರಾಮ ಲೆಕ್ಕಿಗ ಬಸವರಾಜು ಇಲಾಖೆಯ ರಘು ರಂಗಸ್ವಾಮಿ ಪ,ಪಂ ಸದಸ್ಯ ಲಕ್ಷೀನಾರಾಯಣ್, ಧಾರ್ಮಿಕ ಸೇವಕ ಎಂ.ಜಿ.ಸುಧೀರ್, ಮಧುಸೂಧನ್, ಕಿರಿಯ ಅರ್ಚಕ ನಾಗಭೂಷಣ್ ಸೇರಿದಂತೆ ಇತರರು ಹಾಜರಿದ್ದರು.